ಲಂಡನ್(ಫೆ.05): ಬ್ರಿಟನ್ ಮಾಜಿ ಪ್ರಧಾನಿ ಡೆವಿಡ್ ಕ್ಯಾಮರೂನ್ ಭಧ್ರತಾ ಸಿಬ್ಬಂದಿ ವಿಮಾನದ ಟಾಯ್ಲೆಟ್’ನಲ್ಲಿ ಪಿಸ್ತೂಲು ಹಾಗೂ ಕ್ಯಾಮರೂನ್ ಅವರ ಪಾಸ್’ಪೋರ್ಟ್ ಬಿಟ್ಟು ಹೋದ ಘಟನೆ ನಡೆದಿದೆ.

ಕ್ಯಾಮರೂನ್ ನ್ಯೂಯಾರ್ಕ್’ನಿಂದ ಲಂಡನ್’ಗೆ ವಾಪಸ್ಸಾಗುತ್ತಿದ್ದ ವೇಳೆ ಅವರ ಭದ್ರತಾ ಸಿಬ್ಬಂದಿ, ವಿಮಾನದ ಟಾಯ್ಲೆಟ್’ನಲ್ಲಿ  ಅವರ ಪಾಸ್’ಪೋರ್ಟ್ ಜೊತೆಗೆ ತಮ್ಮ ಪಿಸ್ತೂಲನ್ನು ಮರೆತು ಹೋಗಿದ್ದಾರೆ.

ಪ್ರಯಾಣಿಕನೋರ್ವ ಬ್ರಿಟಿಷ್ ಏರ್’ವೇಸ್’ನ ಟಾಯ್ಲೆಟ್’ನಲ್ಲಿ ಪಿಸ್ತೂಲು ಹಾಗೂ ಪಾಸ್’ಪೋರ್ಟ್ ನೋಡಿದ್ದು, ಈ ಕುರಿತು ದೂರು ಸ್ವೀಕರಿಸಿ ತನಿಖೆ ಮಾಡಿದಾಗ ಅದು ಡೆವಿಡ್ ಕ್ಯಾಮರೂನ್ ಅವರ ಭದ್ರತಾ ಸಿಬ್ಬಂದಿ ಬಿಟ್ಟು ಹೋದದ್ದು ಎಂಬುದು ಗೊತ್ತಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬ್ರಟಿನ್ ಮೆಟ್ರೋಪಾಲಿಟಿನ್ ಪೊಲೀಸ್, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಆಂತರಿಕ ತನಿಖೆ ಮೂಲಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದೆ.

ಸೆಕ್ಸ್‌ಗಾಗಿ ವಿಮಾನವನ್ನು ಆಟೋ ಪೈಲಟ್ ಮೋಡ್‌ಗಿಟ್ಟ ಪೈಲಟ್!

ಬ್ರಿಟನ್‌ ಯುರೋಪಿಯನ್ ಯೂನಿಯನ್ ಸದಸ್ಯತ್ವದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿದ ಬಳಿಕ,  ಡೆವಿಡ್ ಕ್ಯಾಮರೂನ್ 2016ರಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.