ಕೊರೋನಾ ವೈರಸ್‌ ಕೊನೆಗೊಳ್ಳಲು ಇನ್ನೂ 4ರಿಂದ 5 ವರ್ಷಗಳು ಬೇಕಾಗಬಹುದು| ಕೊರೋನಾ ಬಳಿಕದ ಜೀವನ ಹೇಗಿರಲಿದೆ ಎಂಬ ಕುರಿತಾದ ಅನಿಶ್ಚಿತತೆ ಹಾಗೆಯೇ ಇದೆ 

ಸಿಂಗಾಪುರ(ಜ.27): ಕೊರೋನಾ ವೈರಸ್‌ ಕೊನೆಗೊಳ್ಳಲು ಇನ್ನೂ 4ರಿಂದ 5 ವರ್ಷಗಳು ಬೇಕಾಗಬಹುದು. ಆದರೆ, ಕೊರೋನಾ ಬಳಿಕದ ಜೀವನ ಹೇಗಿರಲಿದೆ ಎಂಬ ಕುರಿತಾದ ಅನಿಶ್ಚಿತತೆ ಹಾಗೆಯೇ ಇದೆ ಎಂದು ಸಿಂಗಾಪುರ ಶಿಕ್ಷಣ ಸಚಿವ ಲಾವರೆನ್ಸ್‌ ವೊಂಗ್‌ ಎಚ್ಚರಿಕೆ ನೀಡಿದ್ದಾರೆ.

2021ರ ದೃಷ್ಟಿಕೋನಗಳ ಬಗ್ಗೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ವೊಂಗ್‌, ಇನ್ನೂ ಕೆಲವು ಸಮಯಗಳ ಕಾಲ ಕೊರೋನಾ ವೈರಸ್‌ ನಮ್ಮನ್ನು ಬಾಧಿಸಲಿದೆ. ನಾವು ಕೊರೋನಾ ಅಂತ್ಯವಾಗುವುದನ್ನು ನೋಡಲು ಇನ್ನೂ 4ರಿಂದ 5 ವರ್ಷಗಳು ಬೇಕಾಗಬಹುದು. ಆ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳಿದೆ.

ಆದರೆ, ಕೊರೋನೋತ್ತರದ ಭವಿಷ್ಯ ಹೇಗಿಲಿದೆ ಎಂಬುದನ್ನು ಯಾರಿಂದಲೂ ಊಹಿಸಲಾಗದು. ಕೊರೋನಾ ಕುರಿತಾದ ಅನಿಶ್ಚಿತತೆ ಇನ್ನೂ ಮುಂದುವರಿದಿದೆ ಎಂದು ಹೇಳಿದ್ದಾರೆ.