* ಕೊರೋನಾ ವೈರಸ್‌ ಕೂಡ ಇನ್ನಿತರ ನೆಗಡಿ ವೈರಸ್‌ನಂತಾಗಬಹುದು: ಅಧ್ಯಯನ* ಕೆಲ ವರ್ಷಗಳಲ್ಲಿ ಕೋವಿಡ್‌ ಮಕ್ಕಳ ರೋಗವಾಗಬಹುದು!

ವಾಷಿಂಗ್ಟನ್‌(ಆ.13): ಮುಂದಿನ ಕೆಲ ವರ್ಷಗಳಲ್ಲಿ ಕೋವಿಡ್‌-19 ವೈರಸ್‌ ಕೂಡ ಇನ್ನಿತರ ಸಾಮಾನ್ಯ ನೆಗಡಿಕಾರಕ ವೈರಸ್‌ನಂತಾಗಬಹುದು. ಅದರಲ್ಲೂ ವಿಶೇಷವಾಗಿ ಇದು ಮಕ್ಕಳನ್ನು ಮಾತ್ರ ಬಾಧಿಸುವ ವೈರಸ್‌ ಆಗಬಹುದು ಎಂದು ಅಧ್ಯಯನವೊಂದು ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೆರಿಕ ಮತ್ತು ನಾರ್ವೆ ವಿಜ್ಞಾನಿಗಳ ತಂಡವೊಂದು ಈ ಕುರಿತು ಅಧ್ಯಯನ ನಡೆಸಿದ್ದು, ಅದರಲ್ಲಿ ಕೋವಿಡ್‌-19 (ಸಾರ್ಸ್‌-ಕೋವ್‌-2) ವೈರಸ್‌ ಇನ್ನು ಕೆಲ ವರ್ಷಗಳಲ್ಲಿ ಜಾಗತಿಕವಾಗಿ ‘ಸ್ಥಳೀಯ ಸಾಂಕ್ರಾಮಿಕ ವೈರಸ್‌’ ಆಗಲಿದೆ. ಅಂದರೆ ಸ್ಥಳೀಯವಾಗಿ ಮಾತ್ರ ಇದು ಹರಡಲಿದೆ. ಈಗ ಇದು ವಯಸ್ಸಾದವರ ಮೇಲೇ ಹೆಚ್ಚು ಪರಿಣಾಮ ಉಂಟುಮಾಡುತ್ತಿದ್ದರೂ ಇನ್ನು ಕೆಲ ವರ್ಷಗಳಲ್ಲಿ ಲಸಿಕೆಯಿಂದಾಗಿ ಅಥವಾ ನೈಸರ್ಗಿಕವಾಗಿ ಜಗತ್ತಿನ ಎಲ್ಲ ಹಿರಿಯರಿಗೂ ಈ ವೈರಸ್‌ ವಿರುದ್ಧ ರೋಗನಿರೋಧಕ ಶಕ್ತಿ ಲಭಿಸಲಿದೆ. ಆಗ ಇದು ಲಸಿಕೆ ಪಡೆಯದ ಮಕ್ಕಳಲ್ಲಿ ಮಾತ್ರ ಸಣ್ಣ ಪ್ರಮಾಣದ ನೆಗಡಿ ಉಂಟುಮಾಡುವ ಸಾಮಾನ್ಯ ವೈರಸ್‌ ಆಗಿ ಪರಿಣಮಿಸಲಿದೆ ಎಂದು ತಿಳಿದುಬಂದಿದೆ.

ಉದಾಹರಣೆಗೆ, 1889-1890ರ ಸಮಯದಲ್ಲಿ ಏಷಿಯಾಟಿಕ್‌ ಫä್ಲ ವೈರಸ್‌ ಜಗತ್ತಿನಾದ್ಯಂತ 10 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು. 70 ವರ್ಷ ಮೇಲ್ಪಟ್ಟವರೇ ಹೆಚ್ಚಾಗಿ ಸಾವನ್ನಪ್ಪಿದ್ದರು. ಆದರೆ, ಈಗ 7ರಿಂದ 12 ತಿಂಗಳ ನಡುವಿನ ಮಕ್ಕಳಿಗಷ್ಟೇ ಈ ವೈರಸ್‌ನಿಂದ ನೆಗಡಿಯಾಗುತ್ತದೆ. ಹೆಚ್ಚಿನ ಕೊರೋನಾ ವೈರಸ್‌ಗಳೆಲ್ಲ ಹೀಗೇ ವರ್ತಿಸುತ್ತವೆ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.