ಕೊರೋನಾ ಮರಣಮೃದಂಗ; ಸೋಂಕಿತರು, ಸಾವನ್ನಪ್ಪಿರುವವರ ಬಗ್ಗೆ ಒಂದು ವರದಿಯಿದು!
ಜಗತ್ತಿನಾದ್ಯಂತ ಕೊರೋನಾ ಭೀತಿ ಹೆಚ್ಚಾಗುತ್ತಿದೆ. ದಿನದಿನಕ್ಕೂ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಗತ್ತಿನ ಯಾವ ಯಾವ ದೇಶಗಳಲ್ಲಿ ಕೊರೋನಾ ಸೊಂಕು ಪತ್ತೆಯಾಗಿದೆ, ಅಲ್ಲಿ ಎಷ್ಟುಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂಬ ವಿವರ ಇಲ್ಲಿದೆ.
ಭಾರತದಲ್ಲಿ ಈವರೆಗೆ 56 ಜನರಿಗೆ ಕೊರೋನಾ ಸಂಕಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರಿಗೆ ದೇಶಾದ್ಯಂತ 52 ಮೆಡಿಕಲ್ ಸೆಂಟರ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ಭಾರತದಲ್ಲಿ ಸುಮಾರು 3,522 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 1,544 ಜನರು ಚೀನಾದಿಂದ ಸ್ಥಳಾಂತರ ಮಾಡಿದವರು.
ಸೋಂಕಿತರು
ರಾಜಸ್ಥಾನ-17
ಕೇರಳ-15
ಉತ್ತರ ಪ್ರದೇಶ-9
ದೆಹಲಿ-5
ಲಡಾಕ್- 2
ತಮಿಳುನಾಡು-1
ಹರ್ಯಾಣ-1
ಜಮ್ಮು-ಕಾಶ್ಮೀರ-1
ಪಂಜಾಬ್-1
ಕರ್ನಾಟಕ -4
ಈಗ ಚೀನಾಗಿಂತ ಇತರ ದೇಶದಲ್ಲೇ ಹೆಚ್ಚು
ಚೀನಾದಲ್ಲಿ ಹುಟ್ಟಿದ ಕೊರೋನಾ ವೈರಸ್ ಇದೀಗ ಜಗತ್ತಿನ 110 ದೇಶಗಳಿಗೆ ಹಬ್ಬಿದೆ. ಮಾರಣಾಂತಿಕ ಕೊರೋನಾ ವೈರಸ್ ಇದುವರೆಗೆ ಜಗತ್ತಿನಾದ್ಯಂತ ಒಟ್ಟು 4031 ಜನರನ್ನು ಬಲಿಪಡೆದಿದೆ. ಚೀನಾವೊಂದರಲ್ಲಿಯೇ ಕೊರೋನಾ ವೈರಸ್ನಿಂದ 3000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ದಕ್ಷಿಣ ಕೊರಿಯಾ, ಇಟಲಿ ಮತ್ತು ಇರಾನ್ ನಂತರದ ಸ್ಥಾನದಲ್ಲಿವೆ.
ಕೊರೋನಾ ಬಗ್ಗೆ ನೀವು ತಿಳಿದುಕೊಂಡ ಈ ನಂಬಿಕೆಗಳು ಸುಳ್ಳು!
ಸದ್ಯ ಚೀನಾವೊಂದರಲ್ಲಿಯೇ 80,900 ಜನರಿಗೆ ಕೊರೋನಾ ಸೋಂಕಿದ್ದು, ಚೀನಾ ಸೇರಿ ಜಗತ್ತಿನಾದ್ಯಂತ 1,14,647 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಚೀನಾದಲ್ಲಿ ಇತ್ತೀಚೆಗೆ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದರೂ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಚೀನಾದಿಂದ ಹೊರಗೆ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಚೀನಾದಿಂದ ಹೊರಗೆ ಈಗಾಗಲೇ 29000 ಜನರಿಗೆ ಸೋಂಕಿರುವುದು ದೃಢಪಟ್ಟಿದೆ.
ಚೀನಾದಲ್ಲಿ ತಗ್ಗುತ್ತಿದೆ ಕೊರೋನಾ ಆರ್ಭಟ
ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದಲ್ಲಿ. ಹಾಗಾಗಿ ಈ ವೈರಸ್ನಿಂದ ಚೀನಾ ಅಪಾರ ನಷ್ಟಅನುಭವಿಸುತ್ತಿದೆ. ಹಾಂಕಾಂಗ್ ಮತ್ತು ಮಕುವಾ ಕೂಡ ಚೀನಾದಷ್ಟೇ ನಷ್ಟಅನುಭವಿಸುತ್ತಿವೆ.
ಚೀನಾದ ಹುಬೈ ಪ್ರಾಂತ್ಯದಲ್ಲಿ ಅತಿ ಹೆಚ್ಚು ಜನರು ವೈರಸ್ನಿಂದ ಪ್ರಾಣ ಕಳೆದುಕೊಂಡಿದ್ದು, ಮಾರ್ಚ್ 9ರವರೆಗೆ ಈ ಪ್ರಾಂತ್ಯವೊಂದರಲ್ಲಿಯೇ 67,000 ಜನರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಆದಾಗ್ಯೂ ಸರ್ಕಾರದ ತುರ್ತು ಕ್ರಮಗಳಿಂದಾಗಿ ಇತ್ತೀಚೆಗೆ ಕೊರೋನಾ ಸೋಂಕಿತರ ಸಂಖ್ಯೆ ಚೀನಾದಲ್ಲಿ ಕಡಿಮೆಯಾಗುತ್ತಿದೆ.
ದ.ಕೊರಿಯಾ, ಇರಾನ್, ಇಟಲಿಯಲ್ಲಿ ಮರಣ ಮೃದಂಗ!
ದಕ್ಷಿಣ ಕೊರಿಯಾ 7000ಕ್ಕೂ ಹೆಚ್ಚು ಮತ್ತು ಇಟಲಿ ಹಾಗೂ ಇರಾನ್‌ನಲ್ಲಿ 6000ಕ್ಕೂ ಹೆಚ್ಚು ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಯುರೋಪ್ನಲ್ಲಿ ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆದುಪ್ಪಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರಗಳು ವೈರಸ್ ಹರಡುವುದನ್ನು ತಡೆಯಲು ಸಾಕಷ್ಟುಕ್ರಮ ಕೈಗೊಳ್ಳುತ್ತಿವೆ.
ಕೊರೋನಾ ಭೀತಿ; ಶಬರಿಮಲೆ ಭೇಟಿ ಮುಂದೂಡುವಂತೆ ಭಕ್ತರಲ್ಲಿ ಮನವಿ!
ಇಟಲಿಯ 14 ಪ್ರಾಂತ್ಯಗಳಲ್ಲಿ ಸೊಂಕು ಹೆಚ್ಚಾಗಿ ಕಂಡುಬಂದಿದ್ದು, ಮನೆಯಿಂದ ಹೊರ ಬರದಂತೆ ಸರ್ಕಾರ ಅಲಿನ ಜನರಿಗೆ ಸೂಚಿಸಿದೆ. ಹಾಗೆಯೇ ಶಾಲೆ, ಜಿಮ್, ಮ್ಯೂಸಿಯಂ, ನೈಟ್‌ಕ್ಲಬ್ ಮತ್ತಿತರ ಪ್ರದೇಶಗಳನ್ನು ಮುಚ್ಚಲಾಗಿದೆ.
ದಕ್ಷಿಣ ಕೊರಿಯಾದಲ್ಲಿಯೂ ಹಲವಾರು ಪ್ರಮುಖ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ, ಶಾಲಾ ರಜೆಯನ್ನು ವಿಸ್ತರಿಸಲಾಗಿದೆ. ಇರಾನ್ನಲ್ಲಿಯೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿದೆ.
ವೈರಸ್ ವಿರುದ್ಧ ಹೋರಾಟಕ್ಕೆ ಚೀನಾವನ್ನೇ ಅನುಸರಿಸುತ್ತಿವೆ ಹಲವು ದೇಶಗಳು
ಕೊರೋನಾ ಭೀತಿ ಹಿನ್ನೆಲೆ ಭಾರತ ಸೇರಿದಂತೆ ಹಲವಾರು ದೇಶಗಳು ಕೆಲವು ದೇಶಗಳ ಪ್ರವಾಸಕ್ಕೆ ನಿರ್ಬಂಧ ಹೇರಿವೆ. ಜಪಾನಿನ ಗಡಿಯಲ್ಲಿ ಭದ್ರತೆಯನ್ನು ಬಿಗಿ ಮಾಡಲಾಗಿದೆ.
ಚೀನಾ ಮತ್ತು ದಕ್ಷಿಣ ಕೊರಿಯಾದಿಂದ ಯಾರೂ ದೇಶದ ಗಡಿಯೊಳಗೆ ಬರಬಾರದೆಂದು ಸೂಚಿಸಲಾಗಿದೆ. 30 ಲಕ್ಷ ವೀಸಾಗಳನ್ನು ರದ್ದುಪಡಿಸಲಾಗಿದೆ. ದಕ್ಷಿಣ ಕೊರಿಯಾ ಕೂಡ ಜಪಾನ್ ಪ್ರವಾಸಿಗರ ಮೇಲೆ ಇಂಥದ್ದೇ ನಿಯಂತ್ರಣ ಹೇರಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ರಾಜ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಜನವರಿ 30 ರಿಂದ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಸಹಕಾರದೊಂದಿಗೆ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.
ಅಷ್ಟೇ ಅಲ್ಲದೆ ಚೀನಾದಿಂದ ಹೊರಗೆ ಸೋಂಕು ವ್ಯಾಪಕವಾಗುತ್ತಿರುವುದರ ಹಿನ್ನೆಲೆಯಲ್ಲಿ ಹಲವು ದೇಶಗಳು ಚೀನಾ ವೈರಸ್ ಬಗ್ಗುಬಡಿಯಲು ಯಾವ ರೀತಿ ಕ್ರಮ ಕೈಗೊಂಡಿದೆ ಎಂದು ಆಧರಿಸಿ ಅದನ್ನೇ ಅನುಸರಿಸಲು ಮುಂದಾಗಿವೆ.
ವಿದ್ಯಾರ್ಥಿಗಳಿಗೆ ಕೊರೋನಾ ಅಸಲಿ ಕತೆ ಹೇಳಿದ ಇನ್ಸ್‌ಪೆಕ್ಟರ್! ಇಂಥವರು ಬೇಕು..
ಏನು ಮಾಡಬೇಕು?
- ಶುಚಿತ್ವ ಕಾಪಾಡಿಕೊಳ್ಳಿ ಆಗಾಗ ಸೋಪಿನಿಂದ ಕೈ ತೊಳೆದುಕೊಳ್ಳಿ
- ಸೀನಿವಾಗ/ ಕೆಮ್ಮುವಾಗ ಕೈ ಅಥವಾ ಮಾಸ್ಕ್‌ನಿಂದ ಬಾಯಿ ಮುಚ್ಚಿಕೊಳ್ಳಿ
- ಪ್ರಾಣಿಗಳು ಅಥವಾ ಅವುಗಳ ಗೊಬ್ಬರ ಮುಟ್ಟಿದ ನಂತರ ಕೈ ಶುಚಿಗೊಳಿಸಿ
- ಮಾತನಾಡುವಾಗ ಕನಿಷ್ಟ 3 ಅಡಿ ಅಂತರ ಕಾಯ್ದುಕೊಳ್ಳಿ
-ಜ್ವರ ಬಂದರೆ ಕೂಡಲೇ ವೈದ್ಯರ ಬಳಿಗೆ ಹೋಗಿ!
ಏನು ಮಾಡಬಾರದು?
-ಜ್ವರ, ಕೆಮ್ಮು ಇರುವವರ ಬಳಿ ಇರಬೇಡಿ.
- ಅರೆಬೆಂದ ಮಾಂಸ ಸೇವಿಸಬಾರದು
- ಹ್ಯಾಂಡ್‌ಶೇಕ್, ಅಪ್ಪುಗೆ ಬೇಡ
- ಪದೇ ಪದೇ ಕಣ್ಣು ಬಾಯಿ ಮುಟ್ಟಿಕೊಳ್ಳಬೇಡಿ ಕೊರೋನಾ ಇರುವ ದೇಶಕ್ಕೆ ಪ್ರವಾಸ ಬೇಡ