ಲಂಡನ್​ (ಏ.7): ಇಡೀ ವಿಶ್ವವನ್ನೇ ಕಂಗೆಡಿಸಿರುವ ಕೊರೋನಾ ವೈರಸ್ ಅಮೆರಿಕ, ಇಟಲಿಯಲ್ಲಿ ಮರಣ ಮೃದಂಗ ಬಾರಿಸುತ್ತಿದೆ. ಬಡವ, ಶ್ರೀಮಂತರೆನ್ನದೆ ಎಲ್ಲರನ್ನೂ ನಲುಗಿಸುತ್ತಿರುವ ಈ ಮಹಾಮಾರಿ ಗಣ್ಯವ್ಯಕ್ತಿಗಳನ್ನೂ ಇನ್ನಿಲ್ಲದಂತೆ ಕಾಡುತ್ತಿದೆ. ಸದ್ಯ ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್​ಗೂ ಕೊರೋನಾ ಸೋಂಕು ತಗುಲಿದ್ದು, ಅವರ ಆರೋಗ್ಯ ತೀವ್ರ ಹದಗೆಟ್ಟಿದೆ.

ಹೌದು ಬ್ರಿಟನ್ ಪ್ರಧಾನಿ ಭಾನುವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದರು ಪರೀಕ್ಷೆ ನಡೆಸಿದ ಬಳಿಕ ಅವರಲ್ಲಿ ಕೊರೋನಾ ವೈರಸ್​ ಇರುವುದು ದೃಢಪಟ್ಟಿದೆ. ಇದಾದ ಕೇವಲ ಒಂದೇ ದಿನದಲ್ಲಿ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು ಐಸಿಯುಗೆ ಶಿಫ್ಟ್​ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

"

ಪ್ರಿನ್ಸ್ ಗುಣಮುಖರಾಗಿದ್ದು ಬೆಂಗಳೂರು ಚಿಕಿತ್ಸೆಯಿಂದಲ್ಲ!

ಇನ್ನು 'ಬೋರಿಸ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ಮಧ್ಯಾಹ್ನ ಅವರ ಆರೋಗ್ಯ ತೀವ್ರ ಗಂಭೀರವಾಗಿತ್ತು. ಹೀಗಾಗಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ' ಎಂದು ಪಿಎಂ ಕಚೇರಿ ತಿಳಿಸಿದೆ.

ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರುತ್ತಿರುವ ಬ್ರಿಟನ್​ನ ಮೂರನೇ ಪ್ರಧಾನಿ ಬೋರಿಸ್​ ಜಾನ್ಸನ್​ ಆಗಿದ್ದಾರೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಇಂಗ್ಲೆಂಡ್​ ಪ್ರಧಾನಿ ವಿನ್ಸ್​ಟನ್​ ಚರ್ಚಿಲ್​ಗೆ ತೀವ್ರ ಅನಾರೋಗ್ಯ ಕಾಡಿತ್ತು. ಆದರೆ ಅದನ್ನು ಗೌಪ್ಯವಾಗಿ ಇಡಲಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ಬ್ರಿಟನ್ ಪ್ರಧಾನಿ ಆರೋಗ್ಯ ಗಂಭೀರವಾಗಿರುವ ವಿಚಾರವನ್ನು ಬಹಿರಂಗ ಮಾಡಲಾಗಿದೆ.