ಬೀಜಿಂಗ್‌(ಮಾ.21): ವಿಶ್ವದಲ್ಲೇ ಮೊದಲ ಬಾರಿಗೆ ಕೊರೋನಾ ವೈರಸ್‌ ಕಾಣಿಸಿಕೊಂಡ ಚೀನಾದಲ್ಲಿ, ಸತತ ಎರಡನೇ ದಿನವೂ ದೇಶೀಯವಾಗಿ ಸೋಂಕು ಖಚಿತಪಟ್ಟಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಇದೇ ಸ್ಥಿತಿ ಮುಂದಿನ 14 ದಿನ ಕೂಡ ಮುಂದುವರಿದರೆ ಚೀನಾ ಕೊರೋನಾದಿಂದ ಮುಕ್ತವಾಗಲಿದೆ.

ಏತನ್ಮಧ್ಯೆ ಕೊರೋನಾಗೆ ಹೊಸದಾಗಿ ಮೂರು ಮಂದಿ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 3,248 ಮುಟ್ಟಿದೆ. ವಿದೇಶದಿಂದ ಆಗಮಿಸಿದ 39 ಮಂದಿಗೆ ಸೋಂಕು ದೃಢವಾಗಿದ್ದು, ಆ ಮೂಲಕ 228 ವಿದೇಶಿಯರಿಗೆ ಸೋಂಕು ಭಾದಿಸಿದಂತಾಗಿದೆ.

3248: ಈವರೆಗೆ ಚೀನಾದಲ್ಲಿ ಬಲಿಯಾದವರು

80,967: ಸೋಂಕು ತಟ್ಟಿದವರು

6,596: ಚಿಕಿತ್ಸೆ ಪಡೆಯುತ್ತಿರುವವರು

71,150: ಗುಣ ಮುಖರಾದವರು

8,989: ನಿಗಾದಲ್ಲಿರುವ ಸಂಖ್ಯೆ