ನವದೆಹಲಿ(ಅ.10): ‘ಸಾರ್ಸ್‌ ಕೋವ್‌-2 ವೈರಸ್‌’ ಅರ್ಥಾತ್‌ ಕೊರೋನಾ ವೈರಸ್‌ ಮಾನವನ ಚರ್ಮದ ಮೇಲೆ ಸುದೀರ್ಘ ಒಂಭತ್ತು ತಾಸುಗಳಷ್ಟುಕಾಲ ಬದುಕಿರುತ್ತದೆ ಎಂದು ಜಪಾನ್‌ನಲ್ಲಿ ನಡೆದ ಅಧ್ಯಯನದಲ್ಲಿ ತಿಳಿದುಬಂದಿದೆ. ಸಾಮಾನ್ಯ ಜ್ವರಕ್ಕೆ ಕಾರಣವಾಗುವ ಇನ್‌ಫ್ಲುಯೆಂಜಾ ಎ ವೈರಸ್‌ (ಐಎವಿ) ಕೇವಲ ಎರಡು ತಾಸು ನಮ್ಮ ಚರ್ಮದ ಮೇಲೆ ಬದುಕಿರುತ್ತದೆ. ಕೊರೋನಾ ವೈರಸ್‌ ಇಷ್ಟುದೀರ್ಘಕಾಲ ಚರ್ಮದ ಮೇಲೆ ಬದುಕಿರುವುದರಿಂದಲೇ ಅದು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನ ನಡೆಸಿದ ತಜ್ಞರು ಹೇಳಿದ್ದಾರೆ.

ಜಪಾನ್‌ನ ಕ್ಯೋಟೋ ಪ್ರಿಫೆಕ್ಚುರಲ್‌ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆಸಿದ ಈ ಅಧ್ಯಯನದಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ಬಳಕೆಯಿಂದ ಇವೆರಡೂ ವೈರಸ್‌ಗಳು ಬಹುಬೇಗ ನಿಷ್ಕಿ್ರಯಗೊಳ್ಳುತ್ತವೆ. ಹೀಗಾಗಿ ಕೊರೋನಾದಿಂದ ಪಾರಾಗಲು ಸ್ಯಾನಿಟೈಸರ್‌ ಬಳಕೆ ಅಥವಾ ಕೈತೊಳೆಯುವುದು ಪರಿಣಾಮಕಾರಿ ಮಾರ್ಗ ಎಂದು ತಿಳಿದುಬಂದಿದೆ.

ಇನ್ನು, ಕೊರೋನಾವೈರಸ್‌ ಹಾಗೂ ಫ್ಲೂ ವೈರಸ್‌ಗಳು ಬೇರೆ ರೀತಿಯ ಪದಾರ್ಥಗಳಿಗೆ ಹೋಲಿಸಿದರೆ ಚರ್ಮದ ಮೇಲೇ ಬೇಗ ನಿಷ್ಕಿ್ರಯಗೊಳ್ಳುತ್ತವೆ. ಸ್ಟೀಲ್‌, ಗ್ಲಾಸ್‌ ಮತ್ತು ಪ್ಲಾಸ್ಟಿಕ್‌ ಪದಾರ್ಥಗಳ ಮೇಲ್ಮೈಯಲ್ಲಿ ಇನ್ನೂ ದೀರ್ಘಕಾಲ ಜೀವಂತವಾಗಿರುತ್ತವೆ ಎಂದು ಕ್ಲಿನಿಕಲ್‌ ಇನ್‌ಫೆಕ್ಷಿಯಸ್‌ ಡಿಸೀಸಸ್‌ ಎಂಬ ಜರ್ನಲ್‌ನಲ್ಲಿ ಪ್ರಕಟಿಸಿದ ಪ್ರಬಂಧದಲ್ಲಿ ಅಧ್ಯಯನಕಾರರು ತಿಳಿಸಿದ್ದಾರೆ.

Morning Express:

"