ನವದೆಹಲಿ(ಮಾ. 09) ಜಗತ್ತಿನ ಎಲ್ಲ ಕಡೆ ಕರೋನಾ ವೈರಸ್ ಆರ್ಭಟವೇ ಇದೆ.  ಇರಾನ್ ನಲ್ಲಿ 237 ಜನ ಪ್ರಾಣ ಕಳೆದುಕೊಂಡಿದ್ದಾರೆ. 7000ಕ್ಕೂ ಅಧಿಕ ಜನ ವೈರಸ್ ಪೀಡಿತರಾಗಿದ್ದಾರೆ. ಭಾರತೀಯರು ಅನೇಕರು ಅಲ್ಲಿಯೇ ವಾಸ ಮಾಡುತ್ತಿದ್ದಾರೆ. ಅವರ ಸುರಕ್ಷತೆಗೆ ಮುಂದಾಗಿರುವ ಸರ್ಕಾರ ಇದೀಗ ಇಂಡಿಯನ್ ಏಪ್ ಪೋರ್ಸ್ ಗೆ ಮೂಲಕ ವಿಮಾನವೊಂದನ್ನು ಇರಾನ್ ಗೆ ಕಳಿಸಿಕೊಟ್ಟಿದೆ.

ಭಾರತೀಯ ಸೇನೆಯ ಮಿಲಿಟರಿ ವಿಮಾನ ಸಿ-17 ಗ್ಲೋಬ್ ಮಾಸ್ಟರ್ ಇರಾನ್ ಗೆ ಟೇಕ್ ಆಫ್ ಆಗಲಿದೆ. ಇರಾನ್ ನಲ್ಲಿ 2000ಕ್ಕೂ ಅಧಿಕ ಭಾರತೀಯರು ಇದ್ದು ವೈತಸ್ ತಡೆಗೆ ಸಾಧ್ಯವಾಗುತ್ತಿಲ್ಲ

ಮಂಗಳೂರಿನಿಂದ ನಾಪತ್ತೆಯಾಗಿದ್ದ ಕರೋನಾ ಶಂಕಿತ ಕೊನೆಗೂ ಪತ್ತೆ

ವೈರಸ್ ಕಂಡು ಬಂದ ತಕ್ಷಣವೇ ಭಾರತ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಂಡಿತ್ತು. ಇರಾನ್ ನಲ್ಲಿ ಚಿಕಿತ್ಸಾ ಕೇಂದ್ರ ತೆರೆಯಲು ಯೋಜನೆ ಸಿದ್ಧಮಾಡಿತ್ತು. ಆದರೆ ಕೆಲವು ತಾಂತ್ರಿಕ ಕಾರಣ ಅಡ್ಡ ಬಂದಿದ್ದರಿಂದ ಆ ಯೋಜನೆ ಕೈಬಿಡಲಾಗಿದ್ದು ಈಗ ವಿಮಾನವನ್ನೇ ಕಳುಹಿಸಿ ಕೊಡಲಾಗುತ್ತಿದೆ.