ಬೀಜಿಂಗ್[ಫೆ.05]: ಚೀನಾದಲ್ಲಿ ಕೊರೋನಾ ವೈರಸ್ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಹೀಗಿರುವಾಗಲೇ ಚೀನಾದಲ್ಲಿ ವಿಕಲ ಚೇತನ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ವಿಕಲ ಚೇತನ ಬಾಲಕನ ತಂದೆಗೆ ಕೊರೋನಾ ವೈರಸ್ ಬಾಧಿಸಿದ್ದು, ಮಗನ ಆರೈಕೆ ಮಾಡಲು ಯಾರೂ ಇರಲಿಲ್ಲ. ಈ ಕಾರಣದಿಂದ ಬಾಲಕ ಕೊನೆಯುಸಿರೆಳೆದಿದ್ದಾನೆ. 

ಹೌದು ದಿ್ದ್ಯಿಾಂಗ ಬಾಲಕನ ತಂದೆಗೆ ಮಾರಕ ಕೊರೋನಾ ವೈರಸ್ ಬಾಧಿಸಿದ್ದು, ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಿರುವಾಗ, ಸೆಲೆಬ್ರಲ್ ಪಾಲ್ಸಿಯಿಂದ ಬಳಲುತ್ತಿದ್ದ 16 ವರ್ಷದ ಮಗ ಯೇನ್ ಚೆಂಗ್ ಮನೆಯಲ್ಲೇ ಉಳಿದುಕೊಂಡಿದ್ದಾನೆ. ಖುದ್ದು ಯಾವುದೇ ಕೆಲಸ ಮಾಡಲು ಸಾಧ್ಯವಾಗದ ಆತನ ಆರೈಕೆ ಮಾಡುತ್ತಿದ್ದದ್ದೇ ಆತನ ತಂದೆ. ಆದರೆ ಕೊರೋನಾ ವೈರಸ್ ಆವರಿಸಿಕೊಂಡಾಗ ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

500ರ ಗಡಿಯತ್ತ ಕೊರೋನಾ ಸಾವು, ಸೋಂಕಿತರ ಸಂಖ್ಯೆ 20 ಸಾವಿರಕ್ಕೇರಿಕೆ!

ಇನ್ನು ಈ ಬಾಲಕನ ತಾಯಿ ಕೂಡಾ ಕೆಲ ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಇಂತಹ ಸ್ಥಿತಿಯಲ್ಲಿ ತಂದೆ ಆಸ್ಪತ್ರೆಗೆ ದಾಖಲಾದ ಬಳಿಕ ಬಾಲಕನಿಗೆ ಊಟ ತಿನ್ನಿಸಲು ಹಾಗೂ ಆರೈಕೆ ಮಾಡಲು ಯಾರೂ ಇರಲಿಲ್ಲ. ಹೀಗಾಗಿ ಆತ ಕುಳಿತಲ್ಲೇ ನರಳಿ ಕೊನೆಯುಸಿರೆಳೆದಿದ್ದಾನೆ.

ಬಾಲಕನ ತಂದೆಯನ್ನು ಜನವರಿ 22 ರಂದು ಚಿಕಿತ್ಸೆಗೆಂದು ಕರೆದೊಯ್ಯಲಾಗಿತ್ತು. ಇಲ್ಲಿ 5 ದಿನಗಳ ಬಳಿಕ ಅವರು ಕೊರೋನಾ ವೈರಸ್ ಸೋಂಕಿಗೀಡಾಗಿದ್ದಾರೆಂಬುವುದು ಬಯಲಾಗಿದೆ. ಮನೆಗೆ ತೆರಳಲು ಸಾಧ್ಯವಾಗದಾಗ, ಯಾರಾದರೂ ನನ್ನ ಮಗನನ್ನು ನೋಡಿಕೊಳ್ಳಿ, ಸಹಾಯ ಮಾಡಿ ಎಂದು ಸೋಶಿಯಲ್ ಮೀಡಿಯಾ ಮೂಲಕ ಮನವಿ ಮಾಡಿಕೊಂಡಿದ್ದಾರೆ. ದುರಾದೃಷ್ಟವಶಾತ್ ಈ ಪೋಸ್ಟ್ ಜನರಿಗೆ ತುಂಬಾ ತಡವಾಗಿ ತಲುಪಿದೆ. 

ಹೋಂಗನ್ ಕೌಂಟಿ ಅಧಿಕಾರಿಗಳು ಹೊರಡಿಸಿರುವ ಪ್ರಕಟನೆಯನ್ವಯ 16 ವರ್ಷದ ಯೇನ್ ಜನವರಿ 29ರಂದು ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಇಲ್ಲಿನ ಸರ್ಕಾರ 'ಯಾನ್ ಜಿಯಾ ಓವೆನ್ ಐಸೋಲೇಷನ್ ನಲ್ಲಿರುವುದರಿಂದ ತನ್ನ ಮಗ ಯೇನ್ ಚೆಂಗ್ ಆರೈಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವರು ತಮ್ಮ ಸಂಬಂಧಿಕರು, ಗ್ರಾಮಸ್ಥರು ಹಾಗೂ ವೈದ್ಯರಿಗೆ ವಹಿಸಿದ್ದರು' ಎಂದಿದ್ದಾರೆ. ಇನ್ನು ಬಾಲಕ ಮೃತಪಟ್ಟ ಬೆನ್ನಲ;್ಲೇ ಇಬ್ಬರು ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ.

ಕೊರೋನಾ ವೈರಸ್‌ಗೆ ಸಿಕ್ತು ಔಷಧಿ!: 48 ಗಂಟೆಯಲ್ಲಿ ರೋಗಿ ಗುಣಮುಖ?