Asianet Suvarna News Asianet Suvarna News

ಭಾರತದಕ್ಕೆ ದುಬೈ ಸಂಪೂರ್ಣ ಬೆಂಬಲ; ತ್ರಿವರ್ಣ ಧ್ವಜದಿಂದ ಕಂಗೊಳಿಸಿದ ಬುರ್ಜ್ ಖಲೀಫಾ ಕಟ್ಟಡ!


ಕೊರೋನಾ ಸಂಕಷ್ಟದಲ್ಲಿ ನಲುಗಿರುವ ಭಾರತಕ್ಕೆ ಹಲವು ರಾಷ್ಟ್ರಗಳು ನೆರವು ನೀಡುತ್ತಿದೆ. ಅಮೆರಿಕ, ಫ್ರಾನ್ಸ್, ಲಂಡನ್  ಹಲವು ರಾಷ್ಟ್ರಗಳು ಲಸಿಕೆ, ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಸಲಕರಣೆಗಳನ್ನು ಭಾರತಕ್ಕೆ ರವಾನಿಸಿದೆ. ಇದೀಗ ದುಬೈ ಸಂಕಷ್ಟದ ಸಮಯದಲ್ಲಿ ಭಾರತದ ಜೊತೆ ನಿಲ್ಲುವುದಾಗಿ ಘೋಷಿಸಿದೆ.

corona 2nd wave Dubai Burj Khalifa lit up with the tricolour to showcase support to India ckm
Author
Bengaluru, First Published Apr 26, 2021, 3:21 PM IST

ದುಬೈ(ಏ.26): ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಮಹಾರಾಷ್ಟ್ರ. ದೆಹಲಿ ಬಳಿಕ ಇದೀಗ ಕರ್ನಾಕದಲ್ಲೂ ಲಾಕ್‌ಡೌನ್ ಘೋಷಣೆಯಾಗಿದೆ. ಅಷ್ಟರ ಮಟ್ಟಿಗೆ ಕೊರೋನಾ ಪರಿಸ್ಥಿತಿ ಕೈಮೀರಿದೆ. ಹಲವು ರಾಷ್ಟ್ರಗಳು ಭಾರತಕ್ಕೆ ನೆರವು ನೀಡುತ್ತಿದೆ. ಇದೀಗ ದುಬೈ ಭಾರತದ ಜೊತೆಗೆ ನಾವಿದ್ದೇವೆ ಎಂದು ಆತ್ಮಸ್ಥೈರ್ಯ ತುಂಬಿದೆ. ಇಷ್ಟೇ ಅಲ್ಲ ಬೆಂಬಲದ ಸಂಕೇತವಾಗಿ ದುಬೈನ ಖ್ಯಾತ ಬುರ್ಜ್ ಖಲೀಫಾ ಗಗನ ಚುಂಬಿ ಕಟ್ಟಡ ಸಂಪೂರ್ಣ ತ್ರಿವರ್ಣ ಧ್ವಜದಿಂದ ಕಂಗೊಳಿಸಿದೆ.

ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಭಾರತದ ಜೊತೆ ನಾವಿದ್ದೇವೆ. ಶೀಘ್ರದಲ್ಲೇ ಭಾರತ ಕೊರೋನಾ ಸಂಕಷ್ಟದಿಂದ ಮುಕ್ತರಾಗಲಿದೆ ಎಂದು ದುಬೈನಲ್ಲಿರು ಭಾರತೀಯ ಹೈಕಮಿಶನ್ ಟ್ವೀಟ್ ಮಾಡಿದೆ. ಬೆಂಬಲದ ಪ್ರತೀಕವಾಗಿ ಬುರ್ಜ್ ಖಲೀಫಾ ಕಟ್ಟಡವನ್ನು ಭಾರತದ ತ್ರಿವರ್ಣ ಧ್ವಜಗಳಿಂದ ಕಂಗೊಳಿಸುವಂತೆ ಮಾಡಿದೆ.

 

 

ಕೊರೋನಾ ವೈರಸ್‌ನಿಂದ ಭಾರತ ತತ್ತರಿಸಿದೆ. 2ನೇ ಅಲೆ ಅತೀ ಭೀಕರವಾಗಿದ್ದು, ಪ್ರತಿ ದಿನ 3 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿದೆ. ಭಾನುವಾರ(ಏ.25) ಒಂದೇ ದಿನ  3,49,691 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದೆ. ಪ್ರತಿ ದಿನ ಕೊರೋನಾ ಸಂಖ್ಯೆ ಹಳೇ ದಾಖಲೆಗಳನ್ನು ಅಳಿಸಿಹಾಕಿ ಮುಂದೆ ಸಾಗುತ್ತಿದೆ.

ಕಳೆದ 24 ಗಂಟೆಯಲ್ಲಿ 2,767 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ನೀಡಿದೆ. ಕರ್ನಾಟಕದಲ್ಲೂ ಕೊರೋನಾ ಅತೀಯಾಗುತ್ತಿರುವ ಕಾರಣ ನಿಯಂತ್ರಣಕ್ಕೆ ಕೊನೆಯ ಅಸ್ತ್ರವಾಗಿ 14 ದಿನ ಲಾಕ್‌ಡೌನ್ ಘೋಷಣೆ ಮಾಡಿದೆ.

Follow Us:
Download App:
  • android
  • ios