ವಿಶ್ವದ ಶ್ರೀಮಂತ ದೇಶಗಳ ಪೈಕಿ ಅಮೆರಿಕಾಗೆ ಅಗ್ರಸ್ಥಾನ. ಇನ್ನು ಶ್ರೀಮಂತ ಉದ್ಯಮಿಗಳು, ಗರಿಷ್ಠ ವೇತನ, ಐಷಾರಾಮಿ ಜೀವನ ಪದ್ದತಿಯಲ್ಲಿ ಅಮೆರಿಕ ನ್ಯೂಯಾರ್ಕ್ ನಗರ ಮುಂಚೂಣಿಯಲ್ಲಿದೆ. ಆದರೆ ಕಳೆದೆರಡು ತಿಂಗಳಲ್ಲಿ ನ್ಯೂಯಾರ್ಕ್ ನಗರದಲ್ಲಿ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸುಂದರ ನಗರದ ಮೂಲೆ ಮೂಲೆಯಿಂದ ಇದೀಗ ಹಸಿವಿನ ಆರ್ತನಾದ ಕೇಳಿಸುತ್ತಿದೆ. ನ್ಯೂಯಾರ್ಕ್ ನಗರದಲ್ಲಿ ನೈಜ ಪರಿಸ್ಥಿತಿಯ ಅನಾವರಣ ಇಲ್ಲಿದೆ.

ನ್ಯೂಯಾರ್ಕ್(ಮೇ.22): ಅಮೆರಿಕಾದ ಮಾತ್ರವಲ್ಲ, ವಿಶ್ವದ ಅತೀ ದೊಡ್ಡ ನಗರ ಅನ್ನೋ ಹೆಗ್ಗಳಿಕೆಗೆ ನ್ಯೂಯಾರ್ಕ್ ಪಾತ್ರವಾಗಿದೆ. ನ್ಯೂಯಾರ್ಕ್ ನಗರದ ವಹಿವಾಟು ವಿಶ್ವದ ಆರ್ಥಿಕತೆ ಮೇಲೆ ಪರಿಣಾಮ ಬೀರಬಲ್ಲ ಸಾಮರ್ಥ್ಯ ಪಡೆದುಕೊಂಡ ನಗರ. ಕಾರಣ 784 ಕಿ.ಮೀ ಪ್ರದೇಶದವರೆಗೆ ವಿಸ್ತಾರವಾಗಿ ಹರಡಿಕೊಂಡಿರುವ ಈ ನಗರದಲ್ಲಿ ಸಂಯುಕ್ರ ರಾಷ್ಟ್ರ ಸಂಘಟನೆ ಮುಖ್ಯ ಕಚೇರಿ, ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಕಚೇರಿ ಸೇರಿದಂತೆ ಹಲವು ಕಂಪನಿಗಳು, ಉದ್ಯಮಗಳ ತವರು. ಅತೀ ಹೆಚ್ಚು ಶ್ರೀಮಂತರು, ಗರಿಷ್ಠ ವೇತನ, ಐಷಾರಾಮಿ ಜೀವನ ಪದ್ದತಿಯಲ್ಲಿ ನ್ಯೂಯಾರ್ಕ್ ಇತರ ಎಲ್ಲ ದೇಶದ ನಗರಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಆದರೆ ಕೊರೋನಾ ವೈರಸ್ ವಕ್ಕರಿಸಿದ 2 ತಿಂಗಳಲ್ಲಿ ಈ ಶ್ರೀಮಂತ ನಗರ ಇದೀಗ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ.

Add Asianetnews Kannada as a Preferred SourcegooglePreferred

ಕೊರೋನಾ ಸೋಂಕು: ಇಟಲಿಯನ್ನು ಮೀರಿಸಿದ ನ್ಯೂಯಾರ್ಕ್..!

ಸುಮಾರು 20 ಲಕ್ಷಕ್ಕೂ ಹೆಚ್ಚು ನಿವಾಸಿಗಳಿರುವ ನ್ಯೂಯಾರ್ಕ್ ನಗರವಾಸಿಗಳ ಜೀವನ ಯಾರಿಗೂ ಬೇಡ. ನ್ಯೂಯಾರ್ಕ್ ನಗರದಲ್ಲಿನ ನಾಲ್ವರಲ್ಲಿ ಒಬ್ಬರಿಗೆ ಆಹಾರದ ಅವಶ್ಯಕತೆ ಇದೆ. ಅಂದರೆ ನಾಲ್ವರಲ್ಲಿ ಒಬ್ಬರಿಗೆ ಯಾರಾದರೂ ಆಹಾರ ವಿತರಿಸಿದಿದ್ದರೆ ಉಪವಾಸವೇ ಗತಿಯಾಗಿದೆ. ಕೊರೋನಾ ವೈರಸ್ ಕಾರಣ ಬಹುತೇಕ ಕಂಪನಿಗಳು ಬಾಗಿಲು ಮಿಚ್ಚಿವೆ. ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ನಿವಾಸಿಗಳಿಗೆ ಆಹಾರ ಪೂರೈಕೆ ಪ್ರಮಾಣ ಹೆಚ್ಚಿಸಲಿದ್ದೇವೆ ಎಂದು ನ್ಯೂಯಾರ್ಕ್ ನಗರದ ಮೇಯರ್ ಬಿಲ್ ಡೆ ಬ್ಲಾಸಿಯೋ ಹೇಳಿದ್ದಾರೆ.

ನ್ಯೂಯಾರ್ಕ್ ಕೊರೋನಾ ಸೋಂಕಿತರಿಗೆ ದೇವರಾದ ದಿಗ್ಗಜ ಮಿಲ್ಖಾ ಸಿಂಗ್ ಪುತ್ರಿ!.

ನಾಲ್ವರಲ್ಲಿ ಒಬ್ಬರಿಗೆ ಆಹಾರದ ಅವಶ್ಯಕತೆ ಇದೆ. ಮುಂದಿನ ವಾರದಿಂದ ಆಹಾರ ವಿತರಣೆ ಸಂಖ್ಯೆಯನ್ನು 15 ಲಕ್ಷಕ್ಕೇರಿಸುತ್ತಿದ್ದೇವೆ. ನ್ಯೂಯಾರ್ಕ್ ನಗರಕ್ಕೆ ಕೊರೋನಾ ವೈರಸ್ ವಕ್ಕರಿಸುವ ಮೊದಲೇ ಆಹಾರ ಸಮಸ್ಯೆ ಎದುರಾಗಬಹುದೆಂದು ಅಂದಾಜು ಮಾಡಲಾಗಿತ್ತು. ಗರಿಷ್ಠ 10 ಲಕ್ಷ ನಿವಾಸಿಗಳಿಗೆ ಆಹಾರ ಸಮಸ್ಯೆ ಎದುರಾಗಬಹಬುದೆಂದು ಅಂದಾಸಿದ್ದೆವು. ಆದರೆ ಇದೀಗ 20 ಲಕ್ಷ ನಿವಾಸಿಗಳಿಗೆ ಆಹಾರ ಪೂರೈಕೆ ಮಾಡಬೇಕಾಗಿದೆ ಎಂದು ಬಿಲ್ ಡೆ ಬ್ಲಾಸಿಯೋ ಹೇಳಿದ್ದಾರೆ.

ಕೊರೋನಾ ವೈರಸ್ ಆರ್ಭಟ ಆರಂಭಿಸದ ಬಳಿಕ ಇದುವರೆಗೆ 32 ಮಿಲಿಯನ್ ಆಹಾರ ವಿತರಿಸಲಾಗಿದೆ. ಕಳಪೆ ಮಟ್ಟದ ಆಹಾರ ವಿತರಿಸಲಾಗುತ್ತಿದೆ ಅನ್ನೋ ದೂರುಗಳಿಂದ ಮೇಯರ್ ಈ ಪ್ರಕಟಣೆ ಹೊರಡಿಸಿದ್ದಾರೆ. ಆಹಾರ ಪೂರೈಕೆ ಮಾಡುತ್ತಿದ್ದ ಕೆಲ ವೆಂಡರ್‌ಗಳನ್ನು ಅಮಾನತು ಮಾಡಲಾಗಿದೆ. ಪ್ರತಿಯೊಬ್ಬರಿಗೆ ಗುಣುಟ್ಟದ ಆಹಾರ ಪೂರೈಕೆ ಮಾಡಲಿದ್ದೇವೆ ಎಂದು ಬಿಲ್ ಡೆ ಬ್ಲಾಸಿಯೋ ಹೇಳಿದ್ದಾರೆ.