ಲೈವ್‌ ಚಾಟ್‌ ವೇಳೆಯೇ ಅಮೆರಿಕ ಪತ್ರಕರ್ತ ಅರೆಸ್ಟ್‌!| ಮಿನ್ನೆಸೋಟಾದಲ್ಲಿನ ಹಿಂಸಾಚಾರ ಕುರಿತು ಪ್ರತ್ಯಕ್ಷ ವರದಿ ಮಾಡುತ್ತಿದ್ದ ಟೀವಿ ಪತ್ರಕರ್ತ

ನ್ಯೂಯಾರ್ಕ್(ಮೇ.30): ಮಿನ್ನೆಸೋಟಾದಲ್ಲಿನ ಹಿಂಸಾಚಾರ ಕುರಿತು ಪ್ರತ್ಯಕ್ಷ ವರದಿ ಮಾಡುತ್ತಿದ್ದ ಟೀವಿ ಪತ್ರಕರ್ತನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಿನ್ನೆಸೋಟಾದಲ್ಲಿ ಕಪ್ಪು ವರ್ಣೀಯ ವ್ಯಕ್ತಿಯ ಕುತ್ತಿಗೆ ಮೇಲೆ ಪೊಲೀಸ್‌ ಅಧಿಕಾರಿ ಮಂಡಿಯೂರಿ ಕುಳಿತಿದ್ದ. ಆ ವ್ಯಕ್ತಿ ಸಾವನ್ನಪ್ಪಿದ್ದ. ಇದರಿಂದಾಗಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಕುರಿತು ಸಿಎನ್‌ಎನ್‌ ವಾಹಿನಿಯ ವರದಿಗಾರ ಓಮರ್‌ ಜಿಮೆನೆಜ್‌ ಪ್ರತ್ಯಕ್ಷ ವರದಿ ನೀಡುತ್ತಿದ್ದರು.

Scroll to load tweet…

ಆಗ ಪೊಲೀಸರು ಅವರ ಕೈಗೆ ಬೇಡಿ ತೊಡಿಸಿ ಕರೆದೊಯ್ದರು. ಈ ದೃಶ್ಯ ಕೂಡ ಪ್ರಸಾರವಾಯಿತು. ಕೆಲ ತಾಸಿನ ಬಳಿಕ ಜಿಮೆನೆಜ್‌ ಅವರನ್ನು ಬಿಡುಗಡೆ ಮಾಡಲಾಗಿದೆ.