* ಅಮೆರಿಕ ಸೇನಾ ಹಿಂತೆಗೆತದ ಬಗ್ಗೆ ಚರ್ಚೆ?* ಅಮೆರಿಕ ಗುಪ್ತಚರ ಮುಖ್ಯಸ್ಥ-ತಾಲಿಬಾನ್‌ ನಾಯಕ ರಹಸ್ಯ ಸಭೆ

ವಾಷಿಂಗ್ಟನ್‌(ಆ.25): ಅಮೆರಿಕದ ಗುಪ್ತಚರ ಸಂಸ್ಥೆಯ ನಿರ್ದೇಶಕ ವಿಲಿಯಂ ಬನ್ಸ್‌ರ್‍ ತಾಲಿಬಾನ್‌ ನಾಯಕ ಅಬ್ದುಲ್‌ ಘನಿ ಬರಾದರ್‌ ಜೊತೆಗೆ ಕಾಬೂಲ್‌ನಲ್ಲಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಅಷ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ ಮುಖಾಮುಖಿಯಾಗಿ ನಡೆದ ಅತಿದೊಡ್ಡ ಮಾತುಕತೆ ಇದಾಗಿದೆ. ಹಾಗಾಗಿ ಈ ಮಾತುಕತೆ ಜಗತ್ತಿನ ಕುತೂಹಲ ಕೆರಳಿಸಿದೆ.

ಆಗಸ್ಟ್‌ 31ರ ಒಳಗೆ ಸಂಪೂರ್ಣ ಸೈನ್ಯವನ್ನು ಅಮೆರಿಕ ಹಿಂಪಡೆಯುವ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಅಮೆರಿಕ ತನ್ನ ಸೇನೆಯನ್ನು ಹಿಂಪಡೆಯುವುದಾಗಿ ಘೋಷಿಸಿದ ನಂತರ ತಾಲಿಬಾನ್‌ ಉಗ್ರಗಾಮಿಗಳು ಅಷ್ಘಾನಿಸ್ತಾನವನ್ನು ಆಗಸ್ಟ್‌ 15ರಂದು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ. ಇದಾದ ನಂತರ ಮೊದಲ ಬಾರಿಗೆ ಜೋ ಬೈಡೆನ್‌ ಸರ್ಕಾರದ ಪರ ಬನ್ಸ್‌ರ್‍, ತಾಲಿಬಾನ್‌ ನಾಯಕನೊಂದಿಗೆ ಮಾತುಕತೆ ನಡೆಸಿದ್ದಾರೆ.