ಜೈಪುರ(ಏ.22): ಚೀನಾದಿಂದ ಇತ್ತೀಚೆಗೆ ಆಮದು ಮಾಡಿಕೊಳ್ಳಲಾದ ರಾರ‍ಯಪಿಡ್‌ ಟೆಸ್ಟ್‌ ಕಿಟ್‌ಗಳು ತಪ್ಪು ಫಲಿತಾಂಶ ನೀಡುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ 2 ದಿನ ಅವುಗಳನ್ನು ಬಳಸದಂತೆ ಎಲ್ಲಾ ರಾಜ್ಯಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ಸೂಚನೆ ನೀಡಿದೆ.

ರಾಜಸ್ಥಾನದಲ್ಲಿ ಕೊರೋನಾ ಸೋಂಕಿತರನ್ನು ಪತ್ತೆಹಚ್ಚಲು ಬಳಸಿದ ರಾರ‍ಯಪಿಡ್‌ ಟೆಸ್ಟ್‌ ಕಿಟ್‌ಗಳಿಂದ ತಪ್ಪು ಫಲಿತಾಂಶಗಳು ಬಂದಿವೆ. ಕೇವಲ ಶೇ.5.4ರಷ್ಟುಮಾತ್ರ ಸರಿಯಾದ ಫಲಿತಾಂಶ ಬಂದಿದೆ. ಈ ಕಿಟ್‌ಗಳು ಶೇ.90ರಷ್ಟುಸರಿಯಾದ ಫಲಿತಾಂಶ ನೀಡಬೇಕಿತ್ತು. ಹೀಗಾಗಿ ಈ ಕಿಟ್‌ಗಳನ್ನು ಬಳಸಬೇಕೋ ಬೇಡವೋ ಎಂದು ಸ್ಪಷ್ಟನೆ ಕೋರಿ ರಾಜಸ್ಥಾನ ಸರ್ಕಾರ ಐಸಿಎಂಆರ್‌ಗೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ಐಸಿಎಂಆರ್‌ ಎಲ್ಲಾ ರಾಜ್ಯಗಳಿಗೆ ಸದ್ಯಕ್ಕೆ ಇವುಗಳ ಬಳಕೆ ನಿಲ್ಲಿಸಬೇಕೆಂದೂ, ಎರಡು ದಿನದೊಳಗೆ ಪರಿಶೀಲಿಸಿ ಮುಂದಿನ ಸೂಚನೆ ನೀಡುತ್ತೇವೆ ಎಂದೂ ತಿಳಿಸಿದೆ.

ವಿಶ್ವದಲ್ಲಿ 25 ಲಕ್ಷ ಸೋಂಕು: 1.7 ಲಕ್ಷಕ್ಕೂ ಹೆಚ್ಚು ಸಾವು!

ರಾರ‍ಯಪಿಡ್‌ ಟೆಸ್ಟ್‌ ಕಿಟ್‌ ಹಿನ್ನೆಲೆ:

ಕೊರೋನಾ ಸೋಂಕು ಪತ್ತೆಗೆ ಸಾಮಾನ್ಯವಾಗಿ ಆರ್‌ಟಿ-ಪಿಸಿಆರ್‌ ಕಿಟ್‌ಗಳನ್ನು ಬಳಸಲಾಗುತ್ತದೆ. ಇದರ ಫಲಿತಾಂಶ ಶೇ.99ರಷ್ಟುನಿಖರವಾಗಿರುತ್ತದೆ. ಆದರೆ, ಇದರಲ್ಲಿ ಫಲಿತಾಂಶ ಸಿಗುವುದು ತಡವಾಗುತ್ತದೆ. ಹೀಗಾಗಿ ಚೀನಾದ ಕಂಪನಿಗಳಿಂದ ಕೇಂದ್ರ ಸರ್ಕಾರ ಲಕ್ಷಾಂತರ ರಾರ‍ಯಪಿಡ್‌ ಟೆಸ್ಟ್‌ ಕಿಟ್‌ಗಳನ್ನು ತರಿಸಿಕೊಂಡು ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಅವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಐಸಿಎಂಆರ್‌ಗೆ ರಾಜಸ್ಥಾನದಿಂದ ದೂರು ಬಂದಿದ್ದು, ಇನ್ನೂ 2-3 ರಾಜ್ಯಗಳ ಅಭಿಪ್ರಾಯವನ್ನು ಐಸಿಎಂಆರ್‌ ಕೇಳಿದೆ. ಜೊತೆಗೆ ತಾನೂ ಪರೀಕ್ಷಿಸುವುದಾಗಿ ತಿಳಿಸಿದ್ದು, ಕಿಟ್‌ಗಳು ದೋಷಪೂರಿತವಾಗಿರುವುದು ಕಂಡುಬಂದರೆ ಅವುಗಳನ್ನು ಬದಲಿಸಿಕೊಡುವಂತೆ ಚೀನಾದ ಕಂಪನಿಗೆ ಸೂಚಿಸುವುದಾಗಿ ತಿಳಿಸಿದೆ.

ಕೊರೋನಾ ಯೋಧರ ಮೇಲೆ ರಾಜ್ಯದಲ್ಲಿ ಮತ್ತೆ ದೌರ್ಜನ್ಯ!

ಸ್ಥಗಿತ ಏಕೆ?

- ಶೇ.90 ನಿಖರ ಫಲಿತಾಂಶ ನೀಡಬೇಕಿದ್ದ ರಾರ‍ಯಪಿಡ್‌ ಟೆಸ್ಟಿಂಗ್‌ ಕಿಟ್‌

- ಆದರೆ, ರಾಜಸ್ಥಾನದಲ್ಲೇ ಶೇ.5.4ರಷ್ಟುಮಾತ್ರ ನಿಖರ ಫಲಿತಾಂಶ

- ಈ ಹಿನ್ನೆಲೆಯಲ್ಲಿ ಬಳಕೆ ಬಗ್ಗೆ ಕೇಂದ್ರದ ಸ್ಪಷ್ಟನೆ ಕೋರಿದ ರಾಜಸ್ಥಾನ

- ಹಾಗಾಗಿ, ಸದ್ಯಕ್ಕೆ ಟೆಸ್ಟ್‌ ಕಿಟ್‌ ಬಳಸದಂತೆ ರಾಜ್ಯಗಳಿಗೆ ಕೇಂದ್ರ ಸಲಹೆ

ಪಾದರಾಯನಪುರ ಆರೋಪಿಗಳು ರಾಮನಗರಕ್ಕೆ: ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಎಚ್‌ಡಿಕೆ

15 ದೇಶಗಳಿಗೆ ಕಳಿಸಿದ್ದ ಚೀನಾ

ಚೀನಾ ಭಾರತಕ್ಕೆ ಇಂಥ ಕಿಟ್‌ಗಳನ್ನು ಪೂರೈಸುವ ಮೊದಲು ಇಟಲಿ, ಸ್ಪೇನ್‌, ಟರ್ಕಿ, ಸ್ಲೊವಾಕಿಯಾ, ಜಾರ್ಜಿಯಾ, ಬ್ರಿಟನ್‌ ಸೇರಿದಂತೆ 15ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಿತ್ತು. ಈ ಪೈಕಿ ಹಲವು ದೇಶಗಳ ಕಿಟ್‌ನ ಗುಣಮಟ್ಟದ ಬಗ್ಗೆ ಬಹಿರಂಗವಾಗಿಯೇ ಟೀಕೆ ವ್ಯಕ್ತಪಡಿಸಿದ್ದವು. ಇಂಥ ದೋಷಪೂರಿತ ಕಿಟ್‌ಗಳಿಂದಾಗಿಯೇ ಸೋಂಕು ಪತ್ತೆ ಪ್ರಕ್ರಿಯೆಯೂ ಹಾದಿ ತಪ್ಪಿದೆ ಎಂದು ದೂರಿದ್ದರು. ಅದರ ಬೆನ್ನಲ್ಲೇ ಇದೀಗ ಭಾರತದಲ್ಲೂ ಚೀನಾ ಕಿಟ್‌ಗಳಲ್ಲಿ ದೋಷ ಕಂಡುಬಂದಿದೆ.