Asianet Suvarna News Asianet Suvarna News

China Population: ಚೀನಾದಲ್ಲಿ ಮಕ್ಕಳ ಹೊಂದುವ ದಂಪತಿಗೆ ಸಾಲದ ಆಫರ್‌!

* ಜಿಲಿನ್‌ ಪ್ರಾಂತ್ಯದಲ್ಲಿ ಅಗ್ಗದ ಬಡ್ಡಿಯಲ್ಲಿ 23 ಲಕ್ಷ ರು. ಸಾಲ ಸೌಲಭ್ಯ

* 2ಕ್ಕಿಂತ ಹೆಚ್ಚು ಮಕ್ಕಳಾದರೆ ವ್ಯಾಪಾರದಲ್ಲಿ ರಿಯಾಯ್ತಿ

* ಚೀನಾದಲ್ಲಿ ಮಕ್ಕಳ ಹೊಂದುವ ದಂಪತಿಗೆ ಸಾಲದ ಆಫರ್‌!

Chinese province offers 31000 dollars baby loans to counter shrinking population pod
Author
Bangalore, First Published Dec 26, 2021, 2:00 AM IST

ಬೀಜಿಂಗ್‌(ಡಿ.26): ಚೀನಾ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ. ಆದರೆ ಸರ್ಕಾರದ ಕಠಿಣ ಕ್ರಮಗಳ ಕಾರಣ ದೇಶದಲಿ ಜನಸಂಖ್ಯೆಯ ಪ್ರಮಾಣ ಕುಸಿಯುತ್ತಿದೆ. ಹೀಗಾಗಿ ಜಿಲಿನ್‌ ಪ್ರಾಂತ್ಯ ಮಕ್ಕಳನ್ನು ಹೊಂದುವ ದಂಪತಿಗೆ ಸಾಲ ಸೌಲಭ್ಯ ನೀಡಲು ಸರ್ಕಾರ ಆಸಕ್ತಿ ತೋರಿದೆ.

ಜಿಲಿನ್‌ ಪ್ರಾಂತ್ಯದಲ್ಲಿ ಜನಸಂಖ್ಯೆ ಇತರ ಎಲ್ಲಾ ಪ್ರಾಂತ್ಯಗಳಿಗಿಂತ ವೇಗವಾಗಿ ಕುಸಿಯುತ್ತಿದೆ. ಹೀಗಾಗಿ ಇಲ್ಲಿ ಜನಸಂಖ್ಯೆಯನ್ನು ಹೆಚ್ಚಳ ಮಾಡಲು ದಂಪತಿಗೆ ಸುಮಾರು 23.5 ಲಕ್ಷ ರು. ಸಾಲ ಸೌಲಭ್ಯ ನೀಡಲು ಆಸಕ್ತಿ ತೋರಿದೆ.

ಸರ್ಕಾರ ಈ ಯೋಜನೆಯನ್ನು ಯಾವ ರೀತಿ ಜಾರಿಗೆ ತರುತ್ತದೆ ಎಂಬುದರ ಕುರಿತು ಸ್ಪಷ್ಟವಾದ ಮಾಹಿತಿಯನ್ನು ನೀಡಿಲ್ಲ. ಆದರೆ ದಂಪತಿ ಹೊಂದುವ ಮಕ್ಕಳ ಆಧಾರದ ಮೇಲೆ ವಿವಿಧ ಬಡ್ಡಿದರಗಳಲ್ಲಿ ಬ್ಯಾಂಕುಗಳಿಂದ ಸಾಲ ಒದಗಿಸಬಹುದು ಎಂದು ಹೇಳಲಾಗಿದೆ. ಜನಸಂಖ್ಯೆ ಹೆಚ್ಚಳವನ್ನು ಪ್ರೋತ್ಸಾಹಿಸಲು ಈಗಾಗಲೇ ಜನಸಂಖ್ಯೆಗೆ ಸಂಬಂಧಿಸಿದ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ತಾಯ್ತನದ ರಜೆಯ ಅವಧಿಯನ್ನು ಹೆಚ್ಚಳ ಮಾಡಲಾಗಿದೆ.

ಈ ಕೊಡುಗೆ ಕೇವಲ ಜಿಲಿನ್‌ ಪ್ರಾಂತ್ಯದವರಿಗೆ ಮಾತ್ರ ಅನ್ವಯವಾಗುವುದಿಲ್ಲ. ಹೊರಗಿನಿಂದ ಬಂದು ಜಿಲಿನ್‌ನಲ್ಲಿ ನೆಲೆಸಸುವ, ಜನಿಸುವ ಮಕ್ಕಳನ್ನು ಜಿಲಿನ್‌ ಪ್ರಾಂತ್ಯದಲ್ಲೇ ನೋಂದಣಿ ಮಾಡಿಸುವವರಿಗೂ ಈ ಸೌಲಭ್ಯ ಅನ್ವಯವಾಗುತ್ತದೆ. ಎರಡು ಅಥವಾ ಮೂರು ಮಕ್ಕಳನ್ನು ಹೊಂದುವ ದಂಪತಿ ವ್ಯಾಪಾರ ಆರಂಭಿಸುವುದಾದರೆ ಅವರಿಗೆ ರಿಯಾಯಿತಿ ನೀಡಲಾಗುತ್ತದೆ. ಜಿಲಿನ್‌ನಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಇದ್ದರೂ ಸಹ ಜನಸಂಖ್ಯೆ ಕೊರತೆಯಿಂದ ಆರ್ಥಿಖಕಾಭಿವೃದ್ದಿಯಲ್ಲಿ ಹಿಂದೆ ಬಿದ್ದಿದೆ. ದೇಶದ ಆರ್ಥಿಕತೆಗಿಂತ ಶೇ.9.8ರಷ್ಟುಹಿಂದುಳಿದಿದೆ.

Follow Us:
Download App:
  • android
  • ios