ಬೀಜಿಂಗ್‌[ಮಾ.18]: ಕೊರೋನಾ ವೈರ​ಸ್‌ನ ಕೇಂದ್ರ ಸ್ಥಾನ ಎನಿ​ಸಿ​ಕೊ​ಂಡಿದ್ದ ಚೀನಾದ ವುಹಾ​ನ್‌​ನ​ಗ​ರ​ದಲ್ಲಿ ಈಗ ಕೊರೋನಾ ವೈರಸ್‌ ಸಂಪೂ​ರ್ಣ​ವಾಗಿ ನಿಯಂತ್ರ​ಣಕ್ಕೆ ಬಂದಿದೆ. ಸೋಮ​ವಾರ ಹೊಸ​ದಾಗಿ ಒಂದೇ ಒಂದು ಪ್ರಕ​ರಣ ಮಾತ್ರ​ವೇ ದಾಖ​ಲಾ​ಗಿದೆ.

ಇದೇ ವೇಳೆ ಚೀನಾ​ದೆ​ಲ್ಲೆಡೆ ಹೊಸ​ದಾಗಿ 13 ಪ್ರಕ​ರ​ಣ​ಗಳು ದೃಢ ಪಟ್ಟಿದ್ದು, 13 ಮಂದಿ ಸೋಮ​ವಾರ ಕೊರೋನಾಗೆ ಬಲಿ ಆಗಿದ್ದಾರೆ. ಇದು​ವ​ರೆಗೆ ಒಟ್ಟು 3,226 ಮಂದಿ ಸಾವಿ​ಗೀ​ಡಾ​ಗಿ​ದ್ದಾ​ರೆ.

ಕೊರೋ​ನಾದ ಕೇಂದ್ರ​ವಾ​ಗಿದ್ದ ವುಹಾನ್‌ ಮತ್ತು ಹುಬೈ ಪ್ರಾಂತ್ಯ​ದಲ್ಲಿ ಸುಮಾರು 5 ಕೋಟಿ ಜನ​ಸಂಖ್ಯೆ ಇದೆ. ಕೊರೋನಾ ವೈರ​ಸ್‌ ಪತ್ತೆ ಆದ ಬಳಿಕ ಈ ಎರಡು ನಗ​ರಗಳನ್ನು ಸಂಪೂ​ರ್ಣ​ವಾಗಿ ಸ್ತಬ್ಧ​ಗೊ​ಳಿ​ಸ​ಲಾ​ಗಿತ್ತು. ಈ ಎರಡು ಪ್ರಾಂತ್ಯ​ಗ​ಳಲ್ಲಿ ಒಟ್ಟು 67,799 ಮಂದಿಗೆ ಕೊರೋನಾ ಸೋಂಕು ತಗು​ಲಿದೆ. 2,243 ಜನರ ಸ್ಥಿತಿ ಗಂಭೀ​ರ​ವಾ​ಗಿದೆ. ಉಳಿದ 539 ಜನರ ಸ್ಥಿತಿ ತೀರಾ ಗಂಭೀ​ರ​ವಾ​ಗಿದೆ.