Asianet Suvarna News Asianet Suvarna News

ಭಾರತದ ಜೊತೆ ಕ್ಯಾತೆ ಬೆನ್ನಲ್ಲೇ ಚೀನಾದ ಹೊಸ ಗಡಿ ಕಾನೂನು!

* ವಾಸ್ತವಿಕ ಗಡಿ ನಿಯಂತ್ರಣ ರೇಖೆಯೇ ಟಾರ್ಗೆಟ್‌?

* ಭಾರತದ ಜೊತೆ ಕ್ಯಾತೆ ಬೆನ್ನಲ್ಲೇ ಚೀನಾದ ಹೊಸ ಗಡಿ ಕಾನೂನು

China passes new land border law amid military standoff with India pod
Author
Bangalore, First Published Oct 25, 2021, 7:49 AM IST
  • Facebook
  • Twitter
  • Whatsapp

ಬೀಜಿಂಗ್‌(ಅ.25): ಭಾರತದ ಸಾರ್ವಭೌಮತ್ವ(Sovereignty) ಮತ್ತು ಪ್ರಾದೇಶಿಕ ಸಮಗ್ರತೆಗೆ ಗಡಿಯಲ್ಲಿ ಸದಾ ಧಕ್ಕೆ ತರುವ ಪ್ರಯತ್ನ ಮಾಡುತ್ತಿರುವ ಚೀನಾ ಈಗ ಒಂದು ಹೆಜ್ಜೆ ಮುಂದೆ ಹೋಗಿ, ಅಲ್ಲಿನ ಸಂಸತ್ತಿನಲ್ಲಿ ಭೂಗಡಿ ಕುರಿತಾದ ಹೊಸ ಕಾಯ್ದೆಯನ್ನು ಪಾಸು ಮಾಡಿದೆ.

ಚೀನಾದ(China) ಹೊಸ ಗಡಿ(Border) ಕಾನೂನು 2022ರ ಜನವರಿ 1ರಿಂದ ಜಾರಿಗೆ ಬರಲಿದ್ದು, ಭೂಗಡಿ ವಿವಾದಗಳನ್ನು ಬಗೆಹರಿಸಿಕೊಳ್ಳುವಲ್ಲಿ ಇದು ಪ್ರಮುಖವಾಗಿದೆ ಎಂದು ಹೇಳಿಕೊಂಡಿದೆ. ಆದರೆ ವಾಸ್ತವದಲ್ಲಿ ಚೀನಾದ ಈ ಹೊಸ ಕಾನೂನು ಗಡಿಯಲ್ಲಿ ಆರ್ಥಿಕ ಕಾರಿಡಾರ್‌(Economic Corridor) ರೂಪಿಸುವುದಾಗಿದ್ದು, ಭಾರತಕ್ಕೆ ಮತ್ತೆ ಸಮಸ್ಯೆ ತಂದೊಡ್ಡಲಿದೆ. ತಾನು ಗಡಿ ಹಂಚಿಕೊಂಡಿರುವ 18 ದೇಶಗಳ ಪೈಕಿ ಭಾರತ(India) ಸೇರಿದಂತೆ ಇತರೆ ಕೆಲ ವೈರಿ ದೇಶಗಳನ್ನು ಕೆಣಕಲೆಂದೇ ಚೀನಾ ಈ ಕಾಯ್ದೆ ಜಾರಿಗೆ ತಂದಿದೆ ಎಂದು ಹೇಳಲಾಗುತ್ತಿದೆ.

ಇಷ್ಟು ದಿನ ಗಡಿಯಲ್ಲಿ ಗ್ರಾಮಗಳನ್ನಷ್ಟೇ ನಿರ್ಮಿಸುತ್ತಿದ್ದ ಚೀನಾ, ಇನ್ನು ಹೊಸ ಕಾಯ್ದೆ ಪ್ರಕಾರ ಪಟ್ಟಣಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದೆ. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಹೆಸರಲ್ಲಿ ಗಡಿಯಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವುದಾಗಿ ಚೀನಾ ಹೇಳುತ್ತಿದ್ದರೂ, ಆ ಮೂಲಕ ಅಕ್ಕಪಕ್ಕದ ದೇಶಗಳ ಗಡಿ ಆಕ್ರಮಿಸಿಕೊಳ್ಳುವುದು ಇದರ ಪ್ರಮುಖ ಉದ್ದೇಶ ಎನ್ನಲಾಗಿದೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್‌ ಶ್ರಿಂಗ್ಲಾ ವಾಸ್ತವಿಕ ಗಡಿ ರೇಖೆಯಲ್ಲಿ ಶಾಂತಿ ಕದಡುವುದು ಇದರ ಉದ್ದೇಶ ಎಂದಿದ್ದಾರೆ. ಅಲ್ಲದೇ ನಿಮ್ಮ ಈ ಹೊಸ ಕಾನೂನಿಂದ ಉಭಯ ದೇಶಗಳ ಗಡಿ ಸಂಬಂಧದ ಮೇಲೂ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.

ಭಾರತದ ಜತೆ ಸುಮಾರು 3, 488 ಕಿಲೋಮೀಟರ್‌ ಗಡಿ ವಾಸ್ತವಿಕ ರೇಖೆಯುದ್ದಕ್ಕೂ ಕ್ಯಾತೆ ತೆಗೆಯುವ ಚೀನಾ, ಭೂತಾನ್‌ ಜತೆಗೆ 400 ಕಿಲೋಮೀಟರ್‌ ಗಡಿಯುದ್ದಕ್ಕೂ ವಿವಾದ ಸೃಷ್ಟಿಸುತ್ತಲೇ ಇರುತ್ತದೆ.

Follow Us:
Download App:
  • android
  • ios