ಗುಂಡು ಹೊಡೆಯುವ ರೋಬೋಟ್ ನಾಯಿ ಸೃಷ್ಟಿಸಿದ ಚೀನಾ: ವಿಡಿಯೋ ವೈರಲ್
ಅತ್ಯಾಧುನಿಕ ಕ್ಷಿಪಣಿ, ಯುದ್ಧ ವಿಮಾನ, ಸಬ್ ಮರೀನ್ ಸೇರಿದಂತೆ ಅತ್ಯಾಧುನಿಕ ಯುದ್ಧ ಪರಿಕರಗಳನ್ನು ಜಗತ್ತಿನ ಎಲ್ಲಾ ದೇಶಗಳು ಅಭಿವೃದ್ಧಿಪಡಿಸುತ್ತಿವೆ ಮತ್ತು ಬಳಸುತ್ತಿವೆ. ಆದರೆ ಚೀನಾ ಸೇನೆ ಸ್ವಯಂ ಗುಂಡು ಹಾರಿಸುವ ಸಾಮರ್ಥ್ಯ ಹೊಂದಿರುವ ಅತ್ಯಾ ಧುನಿಕ ರೋಬೋಟ್ ನಾಯಿಯನ್ನು ಅಭಿವೃದ್ಧಿಪಡಿಸಿದೆ.
ಬೀಜಿಂಗ್: ಶತ್ರುಗಳ ಮೇಲೆ ದಾಳಿಗೆ ಅತ್ಯಾಧುನಿಕ ಕ್ಷಿಪಣಿ, ಯುದ್ಧ ವಿಮಾನ, ಸಬ್ ಮರೀನ್ ಸೇರಿದಂತೆ ಅತ್ಯಾಧುನಿಕ ಯುದ್ಧ ಪರಿಕರಗಳನ್ನು ಜಗತ್ತಿನ ಎಲ್ಲಾ ದೇಶಗಳು ಅಭಿವೃದ್ಧಿಪಡಿಸುತ್ತಿವೆ ಮತ್ತು ಬಳಸುತ್ತಿವೆ. ಆದರೆ ಎಲ್ಲಾ ಸಂದರ್ಭದಲ್ಲೂ ಇಂಥ ಭಾರೀ ಗಾತ್ರದ ಶಸ್ತ್ರಾಸ್ತ್ರ ಕೆಲಸಕ್ಕೆ ಬಾರದು. ಹೀಗಾಗಿ ತನ್ನ ಬೇಡಿಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಚೀನಾ ಸೇನೆ ಸ್ವಯಂ ಗುಂಡು ಹಾರಿಸುವ ಸಾಮರ್ಥ್ಯ ಹೊಂದಿರುವ ಅತ್ಯಾ ಧುನಿಕ ರೋಬೋಟ್ ಅಭಿವೃದ್ಧಿಪಡಿಸಿದೆ. ಕಳೆದ ಕೆಲ ದಿನಗಳಿಂದ ತೈವಾನ್ ಸುತ್ತಮುತ್ತಲೂ ಭಾರೀ ಪ್ರಮಾಣದ ನೌಕಾ ಕಸರತ್ತು ನಡೆಸುತ್ತಿರುವ ಚೀನಾ ಸೇನೆ, ಈ ವೇಳೆ ತನ್ನ ರೋಬೋಟ್ ನಾಯಿಯನ್ನು ಬಳಸಿ ಪ್ರದರ್ಶನ ನೀಡಿದೆ. ಈ ಕುರಿತ ವಿಡಿಯೋ ಇದೀಗ ಜಾಗತಿಕ ಸೇನಾ ವಲಯದಲ್ಲಿ ಭಾರೀ ಸದ್ದು ಮಾಡಿದೆ.
ಹೇಗಿದೆ ರೋಬೋ ನಾಯಿ?:
15 -50 ಕೆಜಿ ತೂಕ ಇರುವ ಈ ರೋಬೋ ನಾಯಿಗೆ 4ಡಿ ಸೂಪರ್ ವೈಡ್ ಆ್ಯಂಗಲ್ ಸೆನ್ಸಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಜೊತೆಗೆ ಅದರೊಳಗೆ ಬ್ಯಾಟರಿ ಮತ್ತು ಪವರ್ ಸಿಸ್ಟಮ್ ಕೂಡಾ ಇದೆ. ಈ ರೋಬೋ ನಾಯಿ ಹಿಂದೆ, ಮುಂದೆ, ಅಕ್ಕ, ಪಕ್ಕ ಯಾವುದೇ ಕಡೆ ಬೇಕಾದರೂ ಚಲಿಸಬಲ್ಲ ದಾಗಿದೆ. ಜೊತೆಗೆ ಸಾಮಾನ್ಯ ನಾಯಿಯಂತೆ ಬಗ್ಗುವ, ಹಾರುವ, ಸಾಗುವ ಹಾದಿಯಲ್ಲಿ ಯಾವುದೇ ಅಡೆತಡೆ ಎದುರಾದರೆ ಸ್ವಯಂ ತನ್ನ ಚಲನವಲನ ನಿರ್ಧರಿಸುವ ಸಾಮರ್ಥ್ಯ ಹೊಂದಿದೆ.
ಚೀನಾ ಲ್ಯಾಬ್‌ನಲ್ಲಿ ಮತ್ತೊಂದು ಮಾರಣಾಂತಿಕ ವೈರಸ್ ವಿನ್ಯಾಸಗೊಳಿಸಿದ ವಿಜ್ಞಾನಿಗಳು!
ಒಮ್ಮೆ ಚಾರ್ಜ್ ಮಾಡಿದರೆ 2 ರಿಂದ 4 ಗಂಟೆ ಕಾಲ ಗುಂಡಿನ ದಾಳಿ ನಡೆಸಬಲ್ಲದು. ನಾಯಿಯ ತಲೆಯ ಮೇಲ್ಬಾಗದಲ್ಲಿ ಅತ್ಯಾಧುನಿಕ ಗನ್ ಅಳವಡಿಸಲಾಗಿದ್ದು, ಅದರ ಮೂಲಕ ಗುಂಡು ಹಾರಿಸಬಲ್ಲದಾಗಿದೆ. ಇದು ತಾನು ಇರುವ ಸ್ಥಳದ ಸುತ್ತಲಿನ ಪ್ರತಿ ಬೆಳವಣಿಗೆಯ ಕುರಿತು ತತ್‌ಕ್ಷಣದ ಮಾಹಿತಿಯನ್ನು ನಿರ್ವಾಹಕರಿಗೆ ರವಾನಿಸುತ್ತದೆ. ಅದನ್ನು ಆಧರಿಸಿ ರಿಮೋಟ್ ಮೂಲಕ ರೋಬೋಟ್ ನಿರ್ವಹಿಸುವವರು ನಾಯಿಯನ್ನು ಎಲ್ಲಿಗೆ ಬೇಕಾದರೂ ಕಳುಹಿಸಬಹುದು ಮತ್ತು ಹೇಗೆ ಬೇಕಾದರೂ ದಾಳಿ ಮಾಡಬಹುದು.
ಲಾಭ ಏನು?:
ಎದುರಾಳಿಗಳ ದಾಳಿ ತಡೆಯುವ ವೇಳೆ ಅಥವಾ ಅವರ ಮೇಲೆ ದಾಳಿ ನಡೆಸುವ ವೇಳೆ ಯೋಧರು ಗುಂಡಿನ ದಾಳಿಗೆ ತುತ್ತಾಗಿ ಗಾಯಗೊಳ್ಳುವ ಅಥವಾ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಆದರೆ ರೋಬೋ ಬಳಸಿದರೆ ಅಂಥ ಅಪಾಯ ಇರದು. ಜೊತೆಗೆ ಇವುಗಳ ಚಲನೆಯ ವೇಗ ಕೂಡಾ ಯೋಧರಿಗಿಂತ ಹೆಚ್ಚಿರುತ್ತದೆ. ಜೊತೆಗೆ ತನ್ನ ಸುತ್ತಲೂ 360 ಡಿಗ್ರಿ ಪ್ರದೇಶದಲ್ಲಿ ಆಗುವ ಪ್ರತಿ ಚಲನವಲನಗಳ ಮೇಲೂ ಕಣ್ಣಿಡುವ ಸಾಮರ್ಥ್ಯ ಇದಕ್ಕಿರುತ್ತದೆ.
ತೈವಾನ್ ಸ್ವಾತಂತ್ರ್ಯಕ್ಕೆ ಬೆಂಬಲ ನೀಡೋರು 'ಭಸ್ಮ': ಚೀನಾ
ಬೀಜಿಂಗ್: ತೈವಾನ್‌ಗೆ ಬೆಂಬಲ ನೀಡುವ ದೇಶಗಳ ವಿರುದ್ಧ ಮತ್ತೆ ಕಿಡಿಕಾರಿರುವ ಚೀನಾ, ಯಾರಾದರೂ ತೈವಾನ್ ಸ್ವಾತಂತ್ರ್ಯ ಬೆಂಬಲಿಸಿದರೆ ಸುಟ್ಟು ಹೋಗುತ್ತೀರಿ ಎಂದು ಎಚ್ಚರಿಸಿದೆ. ಈ ಮೂಲಕ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ಎಚ್ಚರಿಕೆ ರವಾನಿಸಿದೆ. 'ತೈವಾನ್ ಎಂದಿಗೂ ಚೀನಾಕ್ಕೆ ಸೇರಿದ್ದು ಅದನ್ನು ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರತ್ಯೇಕತಾವಾದಿಗಳನ್ನು ಸೃಷ್ಟಿಸುವುದನ್ನು ಚೀನಾ ಸಹಿಸುವುದಿಲ್ಲ. ಒಂದು ಚೀನಾ' ತತ್ವಕ್ಕೆ ಹಲವು ದೇಶಗಳು ಒಪ್ಪಿಕೊಂಡು, ತೈವಾನ್ ಪ್ರತ್ಯೇಕತೆ ವಿರೋಧಿಸಿವೆ. ಅಮೆರಿಕ ಸೇರಿ ದಂತೆ ವಿವಿಧ ದೇಶಗಳು ಬೆಂಕಿ ಜತೆ ಆಟವಾಡಬಾರದು. ಇಲ್ಲವಾದರೆ ಬೆಂಕಿಯಲ್ಲಿ ಸುಟ್ಟು ಹೋಗಬೇಕಾಗುತ್ತದೆ ಎಂದಿದೆ.
ದ್ವೀಪ ದೇಶಕ್ಕೆ ಹೆಚ್ಚುತ್ತಿರುವ ಚೀನಾ ಸಾಲ: ಮಾಲ್ಡೀವ್ಸ್‌ಗೆ ಐಎಂಎಫ್ ಎಚ್ಚರಿಕೆ