ಜೈಪುರ(ಏ.03): ಭಾರತ ಹಾಗೂ ಪಾಕಿಸ್ತಾನ ಗಡಿ ಭಾಗದಲ್ಲಿ ನಿಯೋಜಿಸಿರುವ ಬಿಎಸ್‌ಎಫ್‌ ಯೋಧರು ಮತ್ತೊಮ್ಮೆ ತಮ್ಮ ಮಾನವೀಯ ನಡೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಯೋಧರು ಪುಟ್ಟ ಬಾಲಕನೊಬ್ಬನನ್ನು ಪಾಕಿಸ್ತಾನಕ್ಕೆ ಮರಳಿ ಕಳುಹಿಸಿದ್ದಾರೆ. ಮಾಧ್ಯಮಗಳ ವರದಿಯನ್ವಯ ರಾಜಸ್ಥಾನದ ಬಾರ್ಮರ್‌ನಲ್ಲಿ ಎಂಟು ವರ್ಷದ ಪಾಕಿಸ್ತಾನದ ಬಾಲಕ, ತಿಳಿಯದೆ ಅಂತಾರಾಷ್ಟ್ರೀಯ ಗಡಿ ದಾಟಿ ಭಾರತಕ್ಕೆ ಬಂದಿದ್ದ. ಇದನ್ನು ಕಂಡ ಗಡಿ ಕಾಯುತ್ತಿದ್ದ ಬಿಎಸ್‌ಎಫ್‌ ಯೋಧರು ಕೂಡಲೇ ಆತನನ್ನು ಸಮಾಧಾನಪಡಿಸಿ ಮರಳಿ ಪಾಖಿಸ್ತಾನಕ್ಕೆ ಕಳುಹಿಸಿದ್ದಾರೆ.,

ಮನೆಗೆ ಹೋಗುವ ದಾರಿ ತಿಳಿಯದೆ ಎಡವಟ್ಟು

ಬಿಎಸ್‌ಎಫ್‌ನ ಗುಜರಾತ್‌ ಫ್ರಾಂಟಿಯರ್‌ನ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಎಂ. ಎಲ್‌ ಗರ್ಗ್‌ ಈ ಬಗ್ಗೆ ಮಾಹಿತಿ ನೀಡುತ್ತಾ ಶುಕ್ರವಾರ ಸಂಜೆ ಸುಮಾರು 5.20ಕ್ಕೆ ಎಂಟು ವರ್ಷದ ಬಾಲಕ ಅರಿವಿಲ್ಲದೇ ಅಂತಾರಾಷ್ಟ್ರೀಯ ಗಡಿ ದಾಟಿ ಬಿಎಸ್‌ಎಫ್‌ನ 83ನೇ ಬೆಟಾಲಿಯನ್‌ನ  BoPಯ ಸೋಮ್‌ರತ್ ಬಾರ್ಡರ್‌ ಪಿಲ್ಲರ್‌ ಬಳಿ ಭಾರತಕ್ಕೆ ಬಂದಿದ್ದಾನೆ. ಗಡಿ ಕಾಯುತ್ತಿದ್ದ ಯೋಧರು ಈ ಬಾಲಕನ್ನು ಹಿಡಿದಾಗ ಅಳಲಾರಂಭಿಸಿದ್ದಾನೆ. ಹೀಗಿರುವಾಗ ಯೋಧರು ಆತನಿಗೆ ಚಾಕೋಲೇಟ್ ಹಾಗೂ ಬಿಸ್ಕೆಟ್‌ ನೀಡಿ ಶಾಂತಗೊಳಿಸಿದ್ದಾರೆ. ಬಳಿಕ ಬಾಲಕನ ಬಳಿ ಹೆಸರು, ವಿಳಾಸ, ತಂದೆ-ತಾಯಿ ಹಸೆರು ಕೇಳಿದ್ದಾರೆ. ಹೀಗಿರುವಾಗ ಬಾಲಕ ತನ್ನ ಹೆಸರಿ ಕರೀಂ ಹಾಗೂ ತಂದೆ ಹೆಸರು ಯಮೂನ್‌ ಖಾನ್ ಎಂದು ತಿಳಿಸಿದ್ದಾನೆ. ತಾನು ಮನೆ ದಾರಿ ತಪ್ಪಿ ಇಲ್ಲಿಗೆ ತಲುಪಿರುವುದಾಗಿಯೂ ತಿಳಿಸಿದ್ದಾನೆ.

ಪಾಕ್‌ ರೇಂಜರ್‌ ಜೊತೆ ಮೀಟಿಂಗ್ ಬಳಿಕ ಮರಳಿಸಿದರು

ಮಗು ಸಿಕ್ಕ ಬಳಿಕ ಭಾರತೀಯ ಸೇನಾ ಪಡೆ ಅಧಿಕಾರಿಗಳು ಪಾಕ್‌ ರೇಂಜರ್‌ಗಳ ಜೊತೆ ಫ್ಲ್ಯಾಗ್‌ ಮೀಟಿಂಗ್ ನಡೆಸಿದ್ದಾರೆ ಹಾಗೂ ಮಗು ಗಡಿ ದಾಟಿ ಬಂದಿರುವ ವಿಚಾರ ತಿಳಿಸಿದ್ದಾರೆ. ಇದಾದ ಬಳಿಕ ಸುಮಾರು 7.15 ಕ್ಕೆ ಮಗುವನ್ನು ಪಾಕಿಸ್ತಾನದ ರೇಂಜರ್‌ಗಳಿಗೆ ಹಸ್ತಾಂತರಿಸಲಾಗಿದೆ.

ಭಾರತೀಯ ಯೋಧರ ಹೃದಯವಂತಿಕೆ

ಭಾರತ ಅನೇಕ ಸಂದರ್ಭಗಳಲ್ಲಿ ಇಂತಹ ಮಾನವೀಯತೆ ತೋರಿದೆ. ಆದರೆ ಪಾಕಿಸ್ತಾನ ಹೀಗೆ ಮಾಡುವುದಿಲ್ಲ. ನವೆಂಬರ್  2020ರಲ್ಲಿ ಹತ್ತೊಂಭತ್ತು ವರ್ಷದ ಯುವಕ ಘೋಮಾರಾಮ್ ಮೆಘವಾಲ್ ಹೀಗೇ ಭಾರತದ ಗಡಿ ದಾಟಿ ಪಾಕಿಸ್ತಾನ ತಲುಪಿದ್ದ. ಆದರೆ ಪಾಕಿಸ್ತಾನ ಈವರೆಗೂ ಆತನನ್ನು ಬಿಟ್ಟಿಲ್ಲ.