Cryptocurrency ಬಳಕೆಯಿಂದ ಯುವ ಸಮೂಹ ದಾರಿ ತಪ್ಪದಿರಲಿ : ಮೋದಿ ಎಚ್ಚರಿಕೆ!
*ಸಿಡ್ನಿ ಡೈಲಾಗ್‌ನಲ್ಲಿ ಕ್ರಿಪ್ಟೋ ಕರೆನ್ಸಿ ಬಗ್ಗೆ ಪ್ರಧಾನಿ ಮಾತು
*ಭಾರತದಲ್ಲಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಕ್ರಾಂತಿ ಬಗ್ಗೆ ಅಭಿಪ್ರಾಯ
*ಕ್ರಿಪ್ಟೋ ಬಳಕೆಯಿಂದ ಯುವಜನಾಂಗ ದಾರಿ ತಪ್ಪದಿರಲಿ : ಮೋದಿ
*ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳು ಈ ನಿಟ್ಟಿನಲ್ಲಿ ಒಗ್ಗೂಡಲಿ : ಪ್ರಧಾನಿ
ನವದೆಹಲಿ(ನ.18): ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು, ನವೆಂಬರ್ 18 ರಂದು 'ಸಿಡ್ನಿ ಡೈಲಾಗ್' (Sydney Dialogue) ನಲ್ಲಿ ಮುಖ್ಯ ಭಾಷಣ ಮಾಡಿದ್ದಾರೆ. 'ಭಾರತದಲ್ಲಿ ತಂತ್ರಜ್ಞಾನ (Technology) ಅಭಿವೃದ್ಧಿ ಮತ್ತು ಕ್ರಾಂತಿ' ಎಂಬ ವಿಷಯದ ಕುರಿತು ಪ್ರಧಾನಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಭಾಷಣಕ್ಕೂ ಮೊದಲು, ಆಸ್ಟ್ರೇಲಿಯಾದ (Australia) ಪ್ರಧಾನಿ ಆರಂಭಿಕ ಭಾಷಣ ಮಾಡಿದರು. ಸಿಡ್ನಿ ಸಂವಾದದಲ್ಲಿ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಪ್ಟೋಕರೆನ್ಸಿಗಳು (Cryptocurrency) "ತಪ್ಪು ಕೈಗೆ ಬೀಳಬಾರದು ಮತ್ತು ನಮ್ಮ ಯುವಕರನ್ನು (Youth) ಹಾಳು ಮಾಡಬಾರದು" ಎಂದು ಹೇಳಿದ್ದಾರೆ. ಜತೆಗೆ ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಎಲ್ಲಾ ಪ್ರಜಾಪ್ರಭುತ್ವ (Democratic) ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಒತ್ತಾಯಿಸಿದ್ದಾರೆ.
"
ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್ (Australian Strategic Policy Institute) ಆಯೋಜಿಸಿದ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನ ಮಂತ್ರಿಯವರು ನಾವು ಒಂದು ಯುಗದಲ್ಲಿ ಒಮ್ಮೆ ಸಂಭವಿಸುವ ಬದಲಾವಣೆಯ ಕಾಲದಲ್ಲಿದ್ದೇವೆ. ಡಿಜಿಟಲ್ (Digital) ಯುಗವು ನಮ್ಮ ಸುತ್ತಲಿನ ಎಲ್ಲವನ್ನೂ ಬದಲಾಯಿಸುತ್ತಿದೆ. ಇದು ರಾಜಕೀಯ, ಆರ್ಥಿಕತೆ (Economy) ಮತ್ತು ಸಮಾಜವನ್ನು ಮರು ವ್ಯಾಖ್ಯಾನಿಸಿದೆ. ಇದು ಸಾರ್ವಭೌಮತ್ವ, ಆಡಳಿತ, ನೈತಿಕತೆ, ಕಾನೂನು, ಅಧಿಕಾರ ಮತ್ತು ಭದ್ರತೆಯ ಹೊಸ ಪ್ರಶ್ನೆಗಳನ್ನು ಎತ್ತುತ್ತಿದೆ ಎಂದು ಹೇಳಿದ್ದಾರೆ. ಕ್ರಿಪ್ಟೋ ಕರೆನ್ಸಿ ಬಗ್ಗೆ ಟ್ವೀಟ್ (Tweet) ಮಾಡಿರುವ ಪ್ರಧಾನಿ ಕಾರ್ಯಾಲಯ ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವುದು ಮತ್ತು ಇದು ನಮ್ಮ ಯುವಕರನ್ನು ಹಾಳುಮಾಡುವ ರೀತಿಯಲ್ಲಿ ತಪ್ಪು ಕೈಗಳಿಗೆ ಸೇರದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದೆ.
Sydney Dialogue| ನಾವು ಹಿಂದಿನ ಸವಾಲುಗಳನ್ನು ಭವಿಷ್ಯದ ಅವಕಾಶಗಳಾಗಿ ಪರಿವರ್ತಿಸುತ್ತಿದ್ದೇವೆ: ಮೋದಿ
ಸಿಡ್ನಿ ಸಂವಾದದಲ್ಲಿ ತಮ್ಮ ಭಾಷಣದಲ್ಲಿ, ಪಿಎಂ ಮೋದಿ ಅವರು ಜಗತ್ತು ಪ್ರಗತಿ ಮತ್ತು ಸಮೃದ್ಧಿಯ ಅವಕಾಶಗಳ ಹೊಸ ಯುಗವನ್ನು ಪ್ರಾರಂಭಿಸಿದೆ. ಆದರೆ ನಾವು ಸಮುದ್ರದ ತಳದಿಂದ ಹಿಡಿದು ಬಾಹ್ಯಾಕಾಶದವರೆಗೂ ವಿವಿಧ ಸಂಶೋಧನೆಗಳನ್ನು ಮಾಡಿದ್ದರು ನಮಗೆ ಹಲವಾರು ರೀತಿಯ ತಂದರೆಗಳನ್ನು ಮತ್ತು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ತಂತ್ರಜ್ಞಾನವು ಈಗಾಗಲೇ ಜಾಗತಿಕ ಸ್ಪರ್ಧೆಯ ಪ್ರಮುಖ ಸಾಧನವಾಗಿದೆ ಮತ್ತು ಭವಿಷ್ಯದ ಅಂತರಾಷ್ಟ್ರೀಯ ಭವಿಷ್ಯಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ" ಎಂದು ಅವರು ಹೇಳಿದ್ದಾರೆ.
ಕ್ರಿಪ್ಟೋಕರೆನ್ಸಿ ಕುರಿತು ಉನ್ನತ ಮಟ್ಟದ ಸಭೆ!
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನವೆಂಬರ್ 13ರಂದು ಕ್ರಿಪ್ಟೋಕರೆನ್ಸಿ ಮತ್ತು ಅದಕ್ಕೆ ಸಂಬಂಧಿತ ಸಮಸ್ಯೆಗಳ ಪರಿಹಾರ ಕುರಿತು ಉನ್ನತ ಮಟ್ಟದ ಸಭೆ ನಡೆಸಲಾಗಿತ್ತು. ಸಭೆಯಲ್ಲಿ, ಅನಿಯಂತ್ರಿತ (unregulated) ಕ್ರಿಪ್ಟೋಕರೆನ್ಸಿ ಮಾರುಕಟ್ಟೆಗಳನ್ನು ಮನಿ ಲಾಂಡರಿಂಗ್ (Laundering) ಮತ್ತು ಭಯೋತ್ಪಾದಕ (terrorism) ಕೃತ್ಯಗಳಿಗೆ ಹಣಕಾಸಿನ ಮಾರ್ಗವಾಗಬಾರದು ಎಂಬುದರ ಬಗ್ಗೆ ಚರ್ಚಿಸಲಾಗಿತ್ತು. ಈ ವಿಷಯವನ್ನೇ ಪ್ರಧಾನಮಂತ್ರಿಯವರು ಇಂದು ತಮ್ಮ ಮುಖ್ಯ ಭಾಷಣದಲ್ಲಿ ಪುನರುಚ್ಚರಿಸಿದರು. ಸರ್ಕಾರವು ಕ್ರಿಪ್ಟೋಕರೆನ್ಸಿಗಳು ತಂತ್ರಜ್ಞಾನ ಮತ್ತು ಅದರ ನಿಯಂತ್ರಣದ ಕಡೆಗೆ ನಿಗಾ ಇಡುತ್ತದೆ ಮತ್ತು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲಿದೆ ಹಾಗೂ ಈ ವಿಷಯದಲ್ಲಿ ಸರ್ಕಾರ ಜಾಗೃತವಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
Indian Economy| ಹಣಕಾಸು ಸಂಸ್ಥೆ, ಪ್ರತಿನಿಧಿ ಸಮಾವೇಶ ಉದ್ದೇಶಿಸಿ ಪ್ರಧಾನಿ ಮೋದಿ ಮಾತು!
'ಸಿಡ್ನಿ ಡೈಲಾಗ್' ರಾಜಕಾರಣಿಗಳು, ಉದ್ಯಮ ನಾಯಕರು ಮತ್ತು ಸರ್ಕಾರಿ ನಾಯಕರನ್ನು ಒಟ್ಟುಗೂಡಿಸಿ ವಿಶಾಲ-ಆಧಾರಿತ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು, ಹೊಸ ಆಲೋಚನೆಗಳನ್ನು ಸೃಷ್ಟಿಸಲು ಮತ್ತು ಉದಯೋನ್ಮುಖ ಮತ್ತು ವಿಮರ್ಶಾತ್ಮಕ ತಂತ್ರಜ್ಞಾನಗಳಿಂದ ಉಂಟಾಗುವ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಸಾಮಾನ್ಯ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತದೆ. ಸಿಡ್ನಿ ಸಂವಾದದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಶ್ರೀ ಸ್ಕಾಟ್ ಮಾರಿಸನ್ ಮತ್ತು ಜಪಾನ್‌ನ ಮಾಜಿ ಪ್ರಧಾನಿ ಶ್ರೀ ಶಿಂಜೊ ಅಬೆ ಕೂಡ ಮಾತನಾಡಲಿದ್ದಾರೆ.