ವಾಷಿಂಗ್ಟನ್(ನ.04): ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಕೆಲವೇ ಸಮಯದಲ್ಲಿ ಅಮೆರಿಕನ್ನರು ತಮ್ಮ ದೇಶದ ಸಾರಥ್ಯ ಟ್ರಂಪ್‌ಗೆ ನೀಡಿದ್ದಾರೋ ಅಥವಾ ಬೈಡನ್‌ಗೆ ವಹಿಸಿದ್ದಾರೋ ಎಂಬುವುದು ಸ್ಪಷ್ಟವಾಗುತ್ತದೆ. ಬೈಡೆನ್ ಹಾಗೂ ಹ್ಯಾರಿಸ್ ವಿಲ್ಮಿಂಗ್ಟನ್, ಡೆಲಾವರ್‌ನಿಂದ ರಾಷ್ಟ್ರವನ್ನುದ್ದೇಶಿಸಿಸುತ್ತಿದ್ದರೆ, ಟ್ರಂಪ್ ಶ್ವೇತ ಭವನದಿಂದ ಚುನಾವಣಾ ಫಲಿತಾಂಶದ ಮೇಲೆ ನಿಗಾ ಇಟ್ಟಿದ್ದಾರೆ. ಹೀಗಿರುವಾಗ ಅವರು ಕೇವಲ ಬೆರಳೆಣಿಕೆಯಷ್ಟು ಅತಿಥಿಗಳನ್ನು ಶ್ವೇತ ಭವನಕ್ಕೆ ಆಮಂತ್ರಿಸಿದ್ದಾರೆ. 

"

ಇನ್ನು ಈವರೆಗೂ ಲಭ್ಯವಾದ ಫಲಿತಾಂಶದನ್ವಯ ಟ್ರಂಪ್ ಹಾಗೂ ಬೈಡೆನ್ ನಡುವೆ ಜಿದ್ದಾಜಿದ್ದಿನ ಫೈಟ್ ನಡೆಯುತ್ತಿದ್ದು, ಇಬ್ಬರ ನಡುವಿನ ಅಂತರ ಬಹಳ ಕಡಿಮೆ ಇದೆ ಎನ್ನಲಾಗಿದೆ. ಅಮೆರಿಕದ 10 ರಾಜ್ಯಗಳಲ್ಲಿ ಬೈಡೆನ್ ಗೆದ್ದರೆ, 8 ರಾಜ್ಯಗಳಲ್ಲಿ ಟ್ರಂಪ್ ಗೆಲುವು ದಾಖಲಿಸಿದ್ದಾರೆ.

ಇನ್ನು ಹಿಂಸಾಚಾರ ಭೀತಿ ಎದುರಾದ ಹಿನ್ನೆಲೆ ವೈಟ್‌ಹೌಸ್‌ ಆವರಣದಲ್ಲಿ ತೀವ್ರ ಭದ್ರತೆ ಏರ್ಪಡಿಸಲಾಗಿದೆ. ಈ ವರ್ಷ ಸುಮಾರು 23.9 ಕೋಟಿ ಮತತದಾರರಿದ್ದಾರೆ. ಅಮೆರಿಕದಲ್ಲಿ ಬರೋಬ್ಬರಿ 40 ಲಕ್ಷ ಭಾರತೀಯರಿದ್ದು, ಇವರಲ್ಲಿ  25 ಲಕ್ಷ ಮಂದಿ ಮತದಾರರಿದ್ದಾರೆ. ಇವರಲ್ಲಿ 13 ಲಕ್ಷಕ್ಕೂ ಅಧಿಕ ಮಂದಿ ಟೆಕ್ಸಾಸ್, ಮಿಚಿಗನ್, ಫ್ಲೋರಿಡಾ ಹಾಗೂ ಪೆನ್ಸಿಲ್ವೇನಿಯಾದ ಮತದಾರರಾಗಿದ್ದಾರೆ.

ಮಂಗಳವಾರದಂದು ಪ್ರಚಾರ ನಡೆಸಿರುವ ಡೊನಾಲ್ಡ್ ಟ್ರಂಪ್ ತಮಗೆ ಮತ ನೀಡುವಂತೆ ಯಾಚಿಸಿದ್ದಾರೆ. ಅವರು ಚುನಾವಣಾ ರ್ಯಾಲಿಯಲ್ಲಿ ತಾವು ಮಾಡಿದ್ದ ಡಾನ್ಸ್‌ ಒಂದರ ವಿಡಿಯೋವನ್ನು ಟ್ವೀಟ್ ಮಾಡಿ ಮತ ನೀಡಿ ಎಂದಿದ್ದಾರೆ. ಹೀಗಿರುವಾಗ ಅತ್ತ ಬೈಡನ್‌ ಕೂಡಾ ಮತ ಯಾಚಿಸಿದ್ದಾರೆ. ಟ್ವೀಟ್ ಮಾಡಿರುವ ಬೈಡೆನ್ ಮತದಾನ ಮಾಡಿ, ಮತ ನೀಡಿ ಅಮೆರಿಕ ಎಂದಿದ್ದಾರೆ. ಅಲ್ಲದೇ ‘2008 ಹಾಗೂ 2012ರಲ್ಲಿ ನೀವು ಈ ದೇಶದ ನೇತೃತ್ವ ವಹಿಸಲು ಬರಾಕ್ ಒಬಾಮಾರಿಗೆ ಜೊತೆಯಾಗುವ ವಿಚಾರದಲ್ಲಿ ನನ್ನ ಮೇಲೆ ಭರವಸೆ ಇಟ್ಟಿದ್ದಿರಿ. ಇದೀಗ ಮತ್ತೊಂದು ಬಾರಿ ನನ್ನನ್ನು ನಂಬುವಂತೆ ಕೇಳಿಕೊಳ್ಳುತ್ತೇನೆ. ನನ್ನ ಹಾಗೂ ಕಮಲಾ ಮೇಲೆ ವಿಶ್ವಾಸವಿಡಿ. ನಿಮ್ಮನ್ನು ನಿರಾಶರನ್ನಾಗಿಸುವುದಿಲ್ಲ ಎಂದಿದ್ದಾರೆ.