ರಾಮಮಂದಿರ-ಬಾಬ್ರಿ ಮಸೀದಿಯ ತೀರ್ಪು ಪ್ರಕಟವಾದ ಬಳಿಕ ಶಾಂತಿ ಕಾಪಾಡುವ ಸಲುವಾಗಿ ಏನೇ ತೀರ್ಪು ಬಂದರೂ, ಅದನ್ನು ಗೌರವಿಸಬೇಕು. ಆದರೆ, ಪ್ರತಿಭಟನೆ ಅಥವಾ ಸಂಭ್ರ ಮಾಚರಣೆ ಮಾಡುವಂತಿಲ್ಲ ಎಂಬ ಆದೇಶವಿದ್ದಾಗ್ಯೂ, ತೀರ್ಪು ಪ್ರಕಟವಾಗುತ್ತಿದ್ದಂತೆ ಕೋರ್ಟ್ ಆವರಣದಲ್ಲಿ ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು ಎಂದು ಬಿಬಿಸಿ ವರದಿ ಮಾಡಿದೆ. 

ದಿ ಗಾರ್ಡಿಯನ್

ದಿ ಗಾರ್ಡಿಯನ್ ವೆಬ್‌ಸೈಟ್, ಹಿಂದೂ ಮಹಾಸಭಾ, ದಿ ಸುನ್ನಿ ವಕ್ಫ್ ಬೋರ್ಡ್, ದೇವಸ್ಥಾನದ ಜಾಗದಲ್ಲಿ ಹೂವು ಬೆಳೆ ಯುತ್ತಿದ್ದ ಎಂದು ಹೇಳುವ ಟೈಲರ್ ಹೇಳಿ ಕೆಯನ್ನು ಇಟ್ಟುಕೊಂಡು ವರದಿ ಭಿತ್ತರಿಸಿದೆ. ಅಲ್ಲದೆ, ೨೦೧೪ರಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರದ ಗದ್ದುಗೆ ಗೇರಿದ ಕಮಲ ಪಕ್ಷ ರಾಮ ಮಂದಿರ ನಿರ್ಮಾಣದ ನಿಟ್ಟಿನಲ್ಲಿ ಏನೆಲ್ಲಾ ಕ್ರಮ ಕೈಗೊಂಡಿತು ಎಂಬುದರ ವಿವರಣೆಯನ್ನು ಸಹ ಪ್ರಕಟಿಸಲಾಗಿದೆ. 

ಡಾನ್


ಪಾಕಿಸ್ತಾನದ ಪ್ರಭಾವೀ ಮಾಧ್ಯಮ ಡಾನ್ ಪತ್ರಿಕೆಯು ಸುಪ್ರೀಂ ತೀರ್ಪು ವಿರುದ್ಧ ಸುನ್ನಿ ವಕ್ಫ್ ಬೋರ್ಡ್ ಪರಿಶೀಲನಾ ಅರ್ಜಿ ಸಲ್ಲಿಸಿದಲ್ಲಿ, ಮತ್ತೊಂದು ದೀರ್ಘಾಕಾಲೀನ ಕಾನೂನು ಹೋರಾಟಕ್ಕೆ ಕಾರಣವಾಗಲಿದೆ ಎಂದು ವಿಶ್ಲೇಷಿಸಿದೆ. ಅಲ್ಲದೆ, 2014 ರಲ್ಲಿ ತಮ್ಮನ್ನು ಅಧಿಕಾರಕ್ಕೆ ತಂದರೆ, ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಸಿಕ್ಕ ಅತಿದೊಡ್ಡ ವಿಜಯವಿದು ಎಂದಿದೆ. 

ಸಿಎನ್‌ಎನ್

ವಿವಾದಿತ ಸ್ಥಳದಲ್ಲಿ ದೇಗುಲ ನಿರ್ಮಾಣಕ್ಕೆ ಹಿಂದೂಗಳಿಗೆ ಸುಪ್ರೀಂ ಅನುಮತಿ ಎಂಬ ಶೀರ್ಷಿಕೆಯಡಿ ಸಿಎನ್‌ಎನ್ ಪ್ರಮುಖ ಸುದ್ದಿಯಾಗಿ ಸುದ್ದಿ ಪ್ರಕಟಿಸಿದೆ. ಅಲ್ಲದೆ, ಅಯೋಧ್ಯೆ ಪ್ರಕರಣ ಭಾರತೀಯ ಪುರಾ ತತ್ವ, ಧಾರ್ಮಿಕ ಮತ್ತು ರಾಜಕೀಯ ವಲಯಕ್ಕೆ ಜಟಿಲ ಸಮಸ್ಯೆಯಾಗಿತ್ತು. ಹೀಗಾಗಿ ಅಯೋಧ್ಯೆ ರಾಮ ಜನ್ಮ ಭೂಮಿ ಎಂಬು ದನ್ನು ಪುಷ್ಟೀಕರಿಸುವ ಉತ್ಖನನದ ದಾಖಲೆ ಗಳನ್ನು ಪುರಾತತ್ವ ಇಲಾಖೆ ಕೋರ್ಟ್ ಮುಂದಿಟ್ಟಿತ್ತು ಎಂದು ವರದಿ ಹೇಳಿದೆ. 

ಬಿಬಿಸಿ


ರಾಮಮಂದಿರ-ಬಾಬ್ರಿ ಮಸೀದಿಯ ತೀರ್ಪು ಪ್ರಕಟವಾದ ಬಳಿಕ ಶಾಂತಿ ಕಾಪಾಡುವ ಸಲುವಾಗಿ ಏನೇ ತೀರ್ಪು ಬಂದರೂ, ಅದನ್ನು ಗೌರವಿಸಬೇಕು. ಆದರೆ, ಪ್ರತಿಭಟನೆ ಅಥವಾ ಸಂಭ್ರಮಾಚರಣೆ ಮಾಡುವಂತಿಲ್ಲ ಎಂಬ ಆದೇಶವಿದ್ದಾಗ್ಯೂ, ತೀರ್ಪು ಪ್ರಕಟವಾಗುತ್ತಿದ್ದಂತೆ ಕೋರ್ಟ್ ಆವರಣದಲ್ಲಿ ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು ಎಂದು ಬಿಬಿಸಿ ವರದಿ ಮಾಡಿದೆ.