ಸೌದಿ(ಡಿ.13): ರಾಷ್ಟ್ರೀಯ ಪೌರತ್ವ ನೋಂದಣಿ(NRC)ವಿರುದ್ಧ ದೇಶ ಉಗ್ರ ಪ್ರತಿಭಟನೆ ಎದುರಿಸಿದೆ. ಸದ್ಯ NRC ವಿವಾದ ತಣ್ಣಗಾಗಿದೆ. ಆದರೆ ಭಾರತದಲ್ಲಿ ರೈತರ ಪ್ರತಿಭಟನೆ ಜೋರಾಗಿದೆ. ಅತ್ತ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು, ಮೋದಿ ಸರ್ಕಾರದ NRC ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸೌದಿ ಅರೇಬಿಯಾ ಸರ್ಕಾರ ಅನಿವಾಸಿ ಭಾರತೀಯರಿಗೆ ಶಾಕ್ ನೀಡಿದೆ.

ಫ್ರೀಡಂಪಾರ್ಕ್‌ನಲ್ಲಿ ದೇಶದ್ರೋಹಿ ಘೋಷಣೆ; ಅಮೂಲ್ಯ ಹಿಂದಿದೆ ಈ ಸಂಘಟನೆ!

NRC ವಿರುದ್ಧ ಸೌದಿ ಅರೇಬಿಯಾದಲ್ಲಿ ಪ್ರತಿಭಟನೆ ಆಯೋಜಿಸಿದ ಕೆಲ ಅನಿವಾಸಿ ಭಾರತೀಯರು ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ NRC ವಿರುದ್ಧ ಫಲಕ, ಪ್ಲೇಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಮೋದಿ ವಿರುದ್ಧ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸೌದಿ ಅರೇಬಿಯಾ, ಪ್ರತಿಭಟನೆ ನಡೆಸಿದ ಅನಿವಾಸಿ ಭಾರತೀಯರನ್ನು ಬಂಧಿಸಿ ಗಡೀಪಾರು ಮಾಡಿದೆ ಎಂದು ಅರಬ್ ಮಾಧ್ಯಮಗಳು ವರದಿ ಮಾಡಿದೆ.

ಪ್ರತಿಭಟನೆ ಜೋರಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅನಿವಾಸಿ ಭಾರತೀಯರನ್ನು ಬಂಧಿಸಿದ್ದಾರೆ. ಬಳಿಕ ನಿಯಮ ಉಲ್ಲಂಘನೆ ಕಾರಣಕ್ಕೆ ಗಡೀಪಾರು ಮಾಡಲಾಗಿದೆ.  ಗಲ್ಫ್ ರಾಷ್ಟ್ರದಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಪ್ರದರ್ಶನ ಹಾಗೂ ಒಗ್ಗಟ್ಟಾಗುವುದನ್ನು ನಿಷೇಧಿಸಲಾಗಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಸೂಚಿಸಿದವರಿಗೂ ಸಂಕಷ್ಟ ತಪ್ಪಿಲ್ಲ. ಗಲ್ಫ್ ನಿಯಮ ಉಲ್ಲಂಘಿಸಿದ ಅನಿವಾಸಿ ಭಾರತೀಯರನ್ನು ಅರೆಸ್ಟ್ ಮಾಡಿ ಗಡೀಪಾರು ಮಾಡಲಾಗಿದೆ.