ಹಾಂಕಾಂಗ್‌[ಫೆ.16]: ಮಾರಣಾಂತಿಕ ಕೊರೋನಾ ವೈರಸ್‌ ಹಬ್ಬಿರುವ ಹಿನ್ನೆಲೆಯಲ್ಲಿ ಸೋಂಕುಪೀಡಿತ ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರಬರಲು ಸರ್ಕಾರ ಬಿಡುತ್ತಿಲ್ಲ. ಹೀಗಾಗಿ ಓಟಗಾರನೋರ್ವ ತನ್ನ ಸಣ್ಣ ಮನೆಯಲ್ಲೇ 6 ಗಂಟೆ 41 ನಿಮಿಷಗಳಲ್ಲಿ ಬರೋಬ್ಬರಿ 66 ಕಿ.ಮೀ. ಓಡಿದ್ದಾನೆ.

ಅಪಾರ್ಟ್‌ಮೆಂಟ್‌ ಒಳಗೆ 66 ಕಿ. ಮೀ ಓಟ ನಡೆಸಿದ ಪಾನ್‌ ಶಾನ್ಸು ಎಂಬಾತನ ವಿಡಿಯೋ ಇದೀಗ ಚೀನಾದಾದ್ಯಂತ ವೈರಲ್‌ ಆಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾನ್ಸು, ‘ಮನೆಯಲ್ಲೇ ಸುತ್ತು ಹೊಡೆಯುವುದರಿಂದ ಮೊದಲಿಗೆ ತಲೆ ಸುತ್ತು ಬಂದ ಹಾಗೆ ಆಗುತ್ತಿತ್ತು. ಆದರೆ, ಆ ನಂತರ ಇದೇ ಅಭ್ಯಾಸವಾಗಿದೆ’ ಎನ್ನುತ್ತಾರೆ.