ಭೀಕರ ಹೀಟ್‌ವೇವ್, ಹಜ್ ಯಾತ್ರೆಯಲ್ಲಿ ಈ ವರ್ಷ 1 ಸಾವಿರಕ್ಕೂ ಅಧಿಕ ಸಾವು!
ಈ ಬಾರಿಯ ಹಜ್ ಯಾತ್ರೆಯಲ್ಲಿ ಇಲ್ಲಿಯವರೆಗೂ 1 ಸಾವಿರಕ್ಕೂ ಅಧಿಕ ಮಂದಿ ಹೀಟ್‌ವೇವ್‌ಗೆ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ನವದೆಹಲಿ (ಜೂ. 20): ಸೌದಿ ಅರೇಬಿಯಾದ ಮೆಕ್ಕಾ ಈ ಬಾರಿ ವಿಪರೀತ ಎನ್ನುವಷ್ಟು ಹೀಟ್‌ವೇವ್ ಸಮಸ್ಯೆ ಎದುರಿಸುತ್ತಿರುವ ಕಾರಣ ಈ ವರ್ಷ ಹಜ್ ಸಮಯದಲ್ಲಿ 1,000 ಕ್ಕೂ ಹೆಚ್ಚು ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ. ನೋಂದಾಯಿಸದ ಯಾತ್ರಿಕರು ಸತ್ತವರಲ್ಲಿ ಅರ್ಧಕ್ಕಿಂತ ಹೆಚ್ಚಿದ್ದಾರೆ. ಅರಬ್ ಅಧಿಕಾರಿಗಳ ಪ್ರಕಾರ, ಈಜಿಪ್ಟ್‌ನಿಂದ ಸುಮಾರು 658 ಯಾತ್ರಿಕರು ಸಾವನ್ನಪ್ಪಿದ್ದಾರೆ. ಅವರಲ್ಲಿ 630 ಮಂದಿ ನೋಂದಣಿಯಾಗದ ಯಾತ್ರಾರ್ಥಿಗಳಾಗಿದ್ದಾರೆ ಎಂದಿದೆ. ಸೌದಿ ಸರ್ಕಾರದ ಪ್ರಕಾರ, ವಿಶ್ವದ ಅತಿದೊಡ್ಡ ಧಾರ್ಮಿಕ ಕೂಟಗಳಲ್ಲಿ ಒಂದಾದ ಈ ವರ್ಷದ ಹಜ್‌ನಲ್ಲಿ 1.8 ಮಿಲಿಯನ್‌ಗಿಂತಲೂ ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ.ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ, ಹಜ್ ಅಧಿಕಾರಿಗಳು ಯಾತ್ರಿಕರಿಗೆ ಛತ್ರಿಗಳನ್ನು ತೆಗೆದುಕೊಂಡು ಹೋಗುವಂತೆ ಮತ್ತು ಹೈಡ್ರೇಟೆಡ್ ಆಗಿರಲು ತಿಳಿಸಿದೆ. ಸೌದಿ ಸೇನೆಯು ಹೀಟ್ ಸ್ಟ್ರೋಕ್ ಸಂತ್ರಸ್ತರಿಗೆ ನೆರವು ನೀಡಲು. ವೈದ್ಯಕೀಯ ಘಟಕಗಳೊಂದಿಗೆ 1,600 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಮತ್ತು 30 ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ನಿಯೋಜನೆ ಮಾಡಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಇನ್ನೂ 5,000 ಆರೋಗ್ಯ ಮತ್ತು ಪ್ರಥಮ ಚಿಕಿತ್ಸಾ ಸ್ವಯಂಸೇವಕರನ್ನು ಸಹ ನಿಯೋಜಿಸಲಾಗಿದೆ.
ಹಜ್ ಯಾತ್ರೆಗೆ ಹೋಗಿದ್ದ ಮುಂಡಗೋಡ ಕುಟುಂಬದ ಮೂವರು ಮೆಕ್ಕಾ-ಮದೀನಾ ರಸ್ತೆ ಅಪಘಾತದಲ್ಲಿ ಸಾವು
ಹಜ್ ಭವನಕ್ಕೆ ಸಿದ್ದರಾಮಯ್ಯ 5000 ಕೋಟಿ ನೀಡಿಲ್ಲ: ಜಮೀರ್ ಅಹಮದ್ ಖಾನ್