ವಾಶಿಂಗ್ಟನ್(ಜ.20): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡ ಡೋನಾಲ್ಡ್ ಟ್ರಂಪ್, ಇದೀಗ ಕೊನೆಯ ಬಾರಿಗೆ ಶ್ವೇತಭವನದಿಂದ ಹೊರನಡೆದಿದ್ದಾರೆ. ಭಾರವಾದ ಮನಸ್ಸಿನೊಂದಿಗೆ ವೈಟ್‌ಹೌಸ್‌ನಿಂದ ನಿರ್ಗಮಿಸಿದ ಟ್ರಂಪ್ ನೇರವಾಗಿ ತಮ್ಮ ರೆಸಾರ್ಟ್‌ಗೆ ತೆರಳಿದ್ದಾರೆ. 

ಟ್ರಂಪ್‌ ಅಧಿಕಾರಾವಧಿ ಯುಗಾಂತ್ಯ, ನೂತನ ಅಧ್ಯಕ್ಷರಾಗಿ ಬೈಡೆನ್ ಪ್ರಮಾಣ ವಚನ..

74 ವರ್ಷದ ಟ್ರಂಪ್, ಕೊನೆಯ ಭಾಷಣದಲ್ಲಿ ಜನರ ನಿರೀಕ್ಷೆಯಂತೆ ಆಡಳಿತ ನೀಡಲು ಸಾಧ್ಯವಾಗಿರುವುದು ತೃಪ್ತಿ ತಂದಿದೆ. ಎಲ್ಲರ ಸಹಕಾರಕ್ಕೆ ಧನ್ಯವಾದ ಎಂದು ಟ್ರಂಪ್ ಹೇಳಿದ್ದಾರೆ. ಬಳಿಕ ಪತ್ನಿ ಮೆಲಾನಿಯ ಟ್ರಂಪ್ ಕೈಹಿಡಿದು ಶ್ವೇತಭವನದಿಂದ ತೆರಳಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾ ಸಾಗಿದ ಟ್ರಂಪ್ ಹಾಗೂ ಪತ್ನಿ ಶ್ವೇತಭವನದ ಮುಂದೆ ನಿಲ್ಲಿಸಿದ ಹೆಲಿಕಾಪ್ಟರ್ ಏರಿದರು.

 

ಟ್ರಂಪ್ ಹಾಗೂ ಪತ್ನಿ ಹೆಲಿಕಾಪ್ಟರ್ ಮೂಲಕ ಸನಿಹದ ಮಿಲಟರಿ ಏರ್‌ಬೇಸ್‌ಗೆ ತೆರಳಲಿದ್ದಾರೆ. ಅಲ್ಲಿಂದ ವಿಮಾನದ ಮೂಲಕ ಫ್ಲೋರಿಡಾಗೆ ತೆರಳಲಿದ್ದಾರೆ. ಫ್ಲೋರಿಡಾದಲ್ಲಿರುವ ತಮ್ಮ ಮಾರ್ ಲಾಗೋ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಇತ್ತ ಅಮೆರಿಕದ ನೂತನ ಅಧ್ಯಕ್ಷನಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಜೋ ಬೈಡೆನ್ ಸಮಾರಂಭಕ್ಕೆ ಟ್ರಂಪ್ ಗೈರಾಗಿದ್ದಾರೆ.