ಅಲ್‌ಖೈದಾ ನಾಯಕ ಲಾಡೆನ್ ಬೀಗನ ಹತ್ಯೆ : ಲಾಡೆನ್‌ ಸೊಸೆಯೂ ಸಾವು

ರಹಸ್ಯ ಕಾರ್ಯಾಚರಣೆಯೊಂದರಲ್ಲಿ ಉಗ್ರ ಸಂಘಟನೆ ನಾಯಕ ಸಾವನ್ನಪ್ಪಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ.

Al Qaeda Terrorist Dies in Iran Secret Attack  snr

ವಾಷಿಂಗ್ಟನ್‌  (ನ.15): ಐಸಿಸ್‌ ಸಂಘಟನೆಯ ಉಗಮಕ್ಕೂ ಮುನ್ನ ಇಡೀ ಜಗತ್ತಿನಲ್ಲೇ ಅತ್ಯಂತ ಕುಖ್ಯಾತಿ ಹೊಂದಿದ್ದ ಅಲ್‌ಖೈದಾ ಸಂಘಟನೆಯ ನಂ.2 ನಾಯಕ ಅಬ್ದುಲ್ಲಾ ಅಹಮದ್‌ ಅಬ್ದುಲ್ಲಾ (58) 3 ತಿಂಗಳ ಹಿಂದೆ ಇರಾನ್‌ನಲ್ಲಿ ನಡೆದ ರಹಸ್ಯ ಕಾರ್ಯಾಚರಣೆಯೊಂದರಲ್ಲಿ ಸಾವನ್ನಪ್ಪಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಈತ 1998ರಲ್ಲಿ 224 ಜನರನ್ನು ಬಲಿ ಪಡೆದಿದ್ದ ಆಫ್ರಿಕಾ ಮತ್ತು ಕೀನ್ಯಾದಲ್ಲಿನ ಅಮೆರಿಕ ರಾಯಭಾರ ಕಚೇರಿ ಮೇಲೆ ನಡೆದ ದಾಳಿಯ ಪ್ರಮುಖ ಸಂಚುಕೋರನಾಗಿದ್ದ. ಅಂದಿನಿಂದಲೂ ಆತನ ಪತ್ತೆಗಾಗಿ ಅಮೆರಿಕ ಯತ್ನ ನಡೆಸುತ್ತಲೇ ಇತ್ತು. ಜೊತೆಗೆ ಆತನ ಸುಳಿವು ನೀಡಿದವರಿಗೆ 75 ಕೋಟಿ ರು. ಬಹುಮಾನವನ್ನೂ ಘೋಷಿಸಿತ್ತು.

ಬಂಧಿತ ಅಲ್‌ಖೈದಾ ಉಗ್ರನ ಮನೆಯಲ್ಲಿ ರಹಸ್ಯ ಚೇಂಬರ್‌! ..

ಅಬು ಮಹಮ್ಮದ್‌ ಅಲ್‌ ಮಸ್ರಿ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿದ್ದ ಈತ 3 ತಿಂಗಳ ಹಿಂದೆ ತನ್ನ ಪುತ್ರಿಯ ಜೊತೆಗೆ ಟೆಹ್ರಾನ್‌ನ ರಸ್ತೆಯೊಂದರಲ್ಲಿ ಸಾಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದಾಳಿಕೋರರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ದಾಳಿಯಲ್ಲಿ ಅಲ್‌ಖೈದಾ ಸಂಸ್ಥಾಪಕ ಒಸಾಮಾ ಬಿನ್‌ ಲಾಡೆನ್‌ನ ಪುತ್ರ ಹಮ್ಜಾನ ಪತ್ನಿಯೂ ಆಗಿರುವ, ಮಸ್ರಿಯ ಪುತ್ರಿ ಮಿರಿಯಂ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಅಮೆರಿಕದ ಸೂಚನೆ ಮೇರೆಗೆ ಇಸ್ರೇಲ್‌ಗೆ ಸೇರಿದ ವ್ಯಕ್ತಿಗಳು ಈ ದಾಳಿ ನಡೆಸಿದ್ದಾರೆ ಎಂಬ ವಿಷಯವನ್ನು ಅಮೆರಿಕದ ಗುಪ್ತಚರ ಇಲಾಖೆ ಮೂಲಗಳು ಖಚಿತಪಡಿಸಿವೆ. ಈ ದಾಳಿಯನ್ನು ಇರಾನ್‌ ಸರ್ಕಾರ ಮುಚ್ಚಿ ಹಾಕಿತ್ತು. ಅಲ್‌ಖೈದಾ ಸಂಘಟನೆ ಕೂಡ ಇದುವರೆಗೆ ಮಸ್ರಿಯ ಸಾವಿನ ಸುದ್ದಿಯನ್ನು ಖಚಿತಪಡಿಸಿಲ್ಲ. ಮತ್ತೊಂದೆಡೆ ಯಾವುದೇ ಸಂಘಟನೆ ಕೂಡ ದಾಳಿಯ ಹೊಣೆ ಹೊತ್ತಿಲ್ಲ. ಹೀಗಾಗಿ 3 ತಿಂಗಳ ಹಿಂದೆ ನಡೆದ ಘಟನೆ ಕತ್ತಲಲ್ಲೇ ಉಳಿದುಕೊಂಡಿತ್ತು ಎನ್ನಲಾಗಿದೆ.

ಅಲ್‌ಖೈದಾದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬನಾಗಿದ್ದ ಅಬ್ದುಲ್ಲಾ, ಸಂಘಟನೆಯ ಹಾಲಿ ನಂ.1 ನಾಯಕ ಐಮನ್‌ ಅಲ್‌ ಜವಾಹಿರಿ ಬಳಿಕ ಸಂಘಟನೆಯ ಮುನ್ನಡೆಸುವವರ ಪೈಕಿ ಮುಂಚೂಣಿ ಸಾಲಿನಲ್ಲಿದ್ದ. ಹೀಗಾಗಿ ಈ ಬೆಳವಣಿಗೆ ಸಂಘಟನೆ ಪಾಲಿಗೆ ಅತ್ಯಂತ ಆಘಾತಕಾರಿ ಎನ್ನಲಾಗಿದೆ.

Latest Videos
Follow Us:
Download App:
  • android
  • ios