ಅಹಮಾದಾಬಾದ್‌ ಏರ್ ಇಂಡಿಯಾ ದುರಂತದಲ್ಲಿ ಮೃತಪಟ್ಟ ತಮ್ಮವರ ಮೃತದೇಹದ ಬದಲಾಗಿ ಇನ್ಯಾರದ್ದೋ ಮೃತದೇಹವನ್ನು ತಪ್ಪಾಗಿ ಕಳಿಸಿಕೊಡಲಾಗಿದೆ ಎಂದು ಬ್ರಿಟನ್‌ನ 2 ಕುಟುಂಬಗಳು ಆರೋಪಿಸಿವೆ. ಆದರೆ ಈ ಆರೋಪವನ್ನು ಭಾರತ ಸರ್ಕಾರ ತಳ್ಳಿ ಹಾಕಿದೆ.

ನವದೆಹಲಿ: ಅಹಮಾದಾಬಾದ್‌ ಏರ್ ಇಂಡಿಯಾ ದುರಂತದಲ್ಲಿ ಮೃತಪಟ್ಟ ತಮ್ಮವರ ಮೃತದೇಹದ ಬದಲಾಗಿ ಇನ್ಯಾರದ್ದೋ ಮೃತದೇಹವನ್ನು ತಪ್ಪಾಗಿ ಕಳಿಸಿಕೊಡಲಾಗಿದೆ ಎಂದು ಬ್ರಿಟನ್‌ನ 2 ಕುಟುಂಬಗಳು ಆರೋಪಿಸಿವೆ. ಆದರೆ ಈ ಆರೋಪವನ್ನು ಭಾರತ ಸರ್ಕಾರ ತಳ್ಳಿ ಹಾಕಿದೆ.

ಜೂ.12ರ ದುರಂತದಲ್ಲಿ ಮೃತಪಟ್ಟ 12-13 ಜನರ ಶವಗಳನ್ನು ಬ್ರಿಟನ್ನಿಗೆ ಕಳಿಸಿಕೊಡಲಾಗಿತ್ತು. ಆ ಪೈಕಿ 2 ಶವಗಳು ತಮ್ಮ ಡಿಎನ್‌ಎಯೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ. ತಪ್ಪಾಗಿ ಬೇರೆ ಯಾರದ್ದೋ ಶವಗಳನ್ನು ಕಳಿಸಿಕೊಟ್ಟಿದ್ದಾರೆಂದು 2 ಬ್ರಿಟಿಷ್ ಕುಟುಂಬಗಳು ಆರೋಪಿಸಿವೆ.

ಇದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ‘ದುರಂತದ ನಂತರ, ಅಧಿಕಾರಿಗಳು ಸ್ಥಾಪಿತ ಶಿಷ್ಟಾಚಾರ ಮತ್ತು ತಾಂತ್ರಿಕತೆಯ ಪ್ರಕಾರವೇ ಮೃತರ ಗುರುತು ಪತ್ತೆ ಹಚ್ಚಿದ್ದಾರೆ. ಎಲ್ಲಾ ಮೃತದೇಹಗಳನ್ನು ಅತ್ಯಂತ ವೃತ್ತಿಪರತೆಯಿಂದ ಮತ್ತು ಮೃತರ ಘನತೆಗೆ ಧಕ್ಕೆ ಬರದಂತೆ ಗೌರವದಿಂದ ನಿರ್ವಹಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಪರಿಹರಿಸಲು ನಾವು ಬ್ರಿಟನ್ ಅಧಿಕಾರಿಗಳೊಂದಿಗೆ ಕೆಲಸ ಮುಂದುವರಿಸುತ್ತೇವೆ’ ಎಂದಿದೆ.

ಅಹಮದಾಬಾದ್‌ ವಿಮಾನ ದುರಂತದ ಬೆನ್ನಲ್ಲೇ 'ಏರ್ ಇಂಡಿಯಾ'ದಿಂದ ಮಹತ್ವದ ನಿರ್ಧಾರ

ಗುಜರಾತ್ ರಾಜಧಾನಿ ಅಹಮದಾಬಾದ್ ನಿಲ್ದಾಣದಿಂದ ಲಂಡನ್‌ಗೆ ಟೇಕಾಫ್ ಆದ ವಿಮಾನ ಕೆಲವೇ ನಿಮಿಷಗಳಲ್ಲಿ ಪತನವಾಗಿತ್ತು. ಈ ದುರಂತದ ಬೆನ್ನಲ್ಲೇ ಇಡೀ ವಿಶ್ವದಲ್ಲಿ ಏರ್ ಇಂಡಿಯಾ ವಿಮಾನಯಾನ ಸೇವೆಯ ಗುಣಮಟ್ಟದ ಕುರಿತು ಚರ್ಚಗಳು ನಡೆಯುತ್ತಿವೆ. ಕೆಲ ಸೆಲಿಬ್ರಿಟಿಗಳಂತ ಬಹಿರಂಗವಾಗಿಯೇ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಲ್ಲ ಎಂದು ಹೇಳಿಕೆ ನೀಡಿರೋದು ಸಂಸ್ಥೆಯ ಗುಡ್‌ವಿಲ್ ಕಡಿಮೆ ಮಾಡುತ್ತಿದೆ. ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಈ ಮೂಲಕ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಏರ್ ಇಂಡಿಯಾ ಮುಂದಾಗಿದೆ.

ವಿಮಾನ ಪತನದ ಬಳಿಕ ಏರ್ ಇಂಡಿಯಾ ಸಿಬ್ಬಂದಿ ವರ್ತನೆ, ಸೇವೆಯಲ್ಲಿನ ವ್ಯತ್ಯಯ ಸೇರಿದಂತೆ ಒಂದೊಂದೇ ವಿಷಯಗಳು ಮುನ್ನಲೆಗೆ ಬರುತ್ತಿವೆ. ಇದೀಗ ಏರ್ ಇಂಡಿಯಾ ಅಂತರಾಷ್ಟ್ರೀಯ ಸೇವೆಗಳ ಮೇಲೆ ಶೇ.15ರಷ್ಟು ರಿಯಾಯ್ತಿಯನ್ನು ನೀಡುತ್ತಿದೆ.