ಪ್ರತಿ ವರ್ಷ ಅತಿ ಪ್ರಭಾವಿ ಅಥವಾ ಮಹತ್ತರವಾದ ಸಾಧನೆಗೈದ ವ್ಯಕ್ತಿಗಳನ್ನು ಪರ್ಸನ್ ಆಫ್ ಇಯರ್ ಎಂದು ಗುರುತಿಸುವ ಅಮೆರಿಕದ ಟೈಮ್ ಮ್ಯಾಗಜಿನ್, 2025ಕ್ಕೆ ಈ ಗೌರವವನ್ನು ಎಐ ಸೃಷ್ಟಿಕರ್ತರಿಗೆ ಕೊಡಲು ನಿರ್ಧರಿಸಿರುವುದಾಗಿ ಘೋಷಿಸಿದೆ.
ನ್ಯೂಯಾರ್ಕ್: ಪ್ರತಿ ವರ್ಷ ಅತಿ ಪ್ರಭಾವಿ ಅಥವಾ ಮಹತ್ತರವಾದ ಸಾಧನೆಗೈದ ವ್ಯಕ್ತಿಗಳನ್ನು ಪರ್ಸನ್ ಆಫ್ ಇಯರ್ ಎಂದು ಗುರುತಿಸುವ ಅಮೆರಿಕದ ಟೈಮ್ ಮ್ಯಾಗಜಿನ್, 2025ಕ್ಕೆ ಈ ಗೌರವವನ್ನು ಎಐ ಸೃಷ್ಟಿಕರ್ತರಿಗೆ ಕೊಡಲು ನಿರ್ಧರಿಸಿರುವುದಾಗಿ ಘೋಷಿಸಿದೆ.
ಯೋಚಿಸುವ ಯಂತ್ರಗಳ ಯುಗ
ಎಐ ಎಲ್ಲೆಲ್ಲೂ ಆವರಿಸಿಕೊಂಡಿರುವ ಹೊತ್ತಿನಲ್ಲಿ, ‘ಯೋಚಿಸುವ ಯಂತ್ರಗಳ ಯುಗವನ್ನು ತೆರೆದಿಟ್ಟದ್ದಕ್ಕಾಗಿ, ಮಾನವೀಯತೆಗಾಗಿ ಚಿಂತಿಸಿದ್ದಕ್ಕೆ, ಬೆರಗುಗೊಳಿಸಿದ್ದಕ್ಕಾಗಿ, ವರ್ತಮಾನವನ್ನು ಪರಿವರ್ತಿಸಿದ್ದಕ್ಕಾಗಿ ಮತ್ತು ಸಾಧ್ಯತೆಗಳನ್ನು ಮೀರಿದ್ದ ಸಾಧನೆಗಾಗಿ ಎಐನ ಸೃಷ್ಟಿಕರ್ತರನ್ನು ಟೈಮ್‌ನ 2025ರ ವರ್ಷದ ವ್ಯಕ್ತಿಯಾಗಲಿದ್ದಾರೆ’ ಎಂದು ಘೋಷಿಸಿದೆ.
ವಿನ್ಯಾಸಗೊಳಿಸಿದ, ನಿರ್ಮಿಸಿದ ವ್ಯಕ್ತಿ ಹಾಗೂ ಸಂಸ್ಥೆಗಳನ್ನು ಗುರುತಿಸಲಾಗಿದೆ
ಎಐ ಅನ್ನು ಗುರುತಿಸುವ ಬದಲು, ಅದನ್ನು ಕಲ್ಪಿಸಿಕೊಂಡ, ವಿನ್ಯಾಸಗೊಳಿಸಿದ, ನಿರ್ಮಿಸಿದ ವ್ಯಕ್ತಿ ಹಾಗೂ ಸಂಸ್ಥೆಗಳನ್ನು ಗುರುತಿಸಲಾಗಿದೆ. ಪಟ್ಟಿಯಲ್ಲಿ ಎಕ್ಸ್ ಎಐನ ಎಲಾನ್ ಮಸ್ಕ್, ಓಪನ್ ಎಐನ ಸ್ಯಾಮ್ ಆಲ್ಟ್‌ಮನ್, ಎನ್‌ವಿಡಿಯಾದ ಜೆನ್ಸನ್ ಹುವಾಂಗ್, ಒರಾಕಲ್‌ನ ಲ್ಯಾರಿ ಎಲಿಸನ್ ಇದ್ದಾರೆ. 2024ರಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಗುರುತಿಸಲಾಗಿತ್ತು.


