ಪಂಜಶೀರ್ ಕೈವಶಕ್ಕೆ ತಾಲಿಬಾನ್ ಉಗ್ರರಿಗೆ ಪಾಕಿಸ್ತಾನ ಸೇನೆ ನೆರವು ತಾಲಿಬಾನ್ ಜೊತೆ ಪಾಕಿಸ್ತಾನ ದಾಳಿ ಖಚಿತಪಡಿಸಿದ ಪಂಜಶೀರ್ ನಾಯಕ ಪಂಜಶೀರ್ ಕೈವಶ ಮಾಡಿರುವುದಾಗಿ ತಾಲಿಬಾನ್ ಘೋಷಣೆ
ಕಾಬೂಲ್(ಸೆ.06): ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ರಕ್ತಪಾತದ ಹಿಂದೆ ಪೈಕಿಸ್ತಾನ ಕೈವಾಡವಿದೆ ಅನ್ನೋದು ರಹಸ್ಯವೇನಲ್ಲ. ಸರ್ಕಾರ ರಚನೆ ವೇಳೆ ಪಾಕಿಸ್ತಾನ ಗುಪ್ತಚರ ಇಲಾಖೆ ಮುಖ್ಯಸ್ಥ ಕಾಬೂಲ್‌ಗೆ ತೆರಳಿ ತಮ್ಮ ಬೇಳೆ ಬೇಯಿಸಿಕೊಂಡಿರುವುದು ಜಗಜ್ಜಾಹೀರಾಗಿದೆ. ಇದೀಗ ಪಾಕಿಸ್ತಾನ ಸೇನೆ ನೆರವಿನೊಂದಿಗೆ ತಾಲಿಬಾನ್ ಉಗ್ರರು ಪಂಜಶೀರ್ ಕಣಿವೆ ಮೇಲೆ ದಾಳಿ ಮಾಡಿದೆ. ಪಾಕಿಸ್ತಾನ ದಾಳಿಯನ್ನು ಪಂಜಶೀರ್ ನಾಯಕ ಅಹಮ್ಮದ್ ಮಸೂದ್ ಖಚಿತಪಡಿಸಿದ್ದಾರೆ.
ಹೋರಾಡಿ ಸತ್ತರೆ ಇತಿಹಾಸ ಎಂದ ಪಂಜಶೀರ್ ನಾಯಕನ ಹತ್ಯೆಗೈದ ತಾಲಿಬಾನ್!
ತಾಲಿಬಾನ್ ಉಗ್ರರು ಪಂಜಶೀರ್ ಮೇಲೆ ದಾಳಿ ಮಾಡಿದ್ದಾರೆ. ಪಾಕಿಸ್ತಾನ ಸೇನೆ ನೆರವಿನೊಂದಿಗೆ ದಾಳಿ ಮಾಡಿದ ಉಗ್ರರು ಪಂಜಶೀರ್ ಕೈವಶ ಮಾಡಿರುವುದಾಗಿ ಘೋಷಿಸಿಕೊಂಡಿದ್ದಾರೆ. ತಾಲಿಬಾನ್ ಉಗ್ರರಿಗೆ ಪಾಕಿಸ್ತಾನ ನೀಡುತ್ತಿರುವ ನೆರವು ಹಾಗೂ ಪಂಜಶೀರ್ ಮೇಲಿನ ದಾಳಿಯನ್ನು ಅಹಮ್ಮದ್ ಮಸೂದ್ ಟ್ವಿಟರ್ ಮೂಲಕ ಖಚಿತಪಡಿಸಿದ್ದಾರೆ.
ಇತ್ತ NRFA ತಾಲಿಬಾನ್ ಉಗ್ರರ ವಿರುದ್ಧ ಸತತ ಹೋರಾಟ ನಡೆಸುತ್ತಿದೆ. ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಕೊನೆಯ ಉಸಿರನವರೆಗೂ NRFA ತಾಲಿಬಾನ್ ವಿರುದ್ಧ ಹೋರಾಟ ನಡೆಸಲಿದೆ ಎಂದಿದೆ. ಆದರೆ ಪಾಕಿಸ್ತಾನ ವಾಯು ಸೇನೆ ಯುದ್ದವಿಮಾನಗಳು ಪಂಜಶೀರ್ ಮೇಲೆ ಹಾರಾಡುತ್ತಿದೆ. ಪಾಕಿಸ್ತಾನ ಕುತಂತ್ರಕ್ಕೂ ತಕ್ಕ ಪಾಠ ಕಲಿಸುತ್ತೇವೆ ಎಂದು NRFA ಹೇಳಿದೆ.
ಕಾಲೇಜಿನಲ್ಲಿ ಹುಡುಗ, ಹುಡುಗಿಯರ ಪ್ರತ್ಯೇಕಿಸಲು ಕರ್ಟನ್, ತಾಲಿಬಾನ್ ಉಗ್ರ ಹಕ್ಕಾನಿ ಆದೇಶ!
ತಾಲಿಬಾನ್ ಉಗ್ರರ ವಿರುದ್ಧ ದಶಕಗಳಿಂದ ಪಂಜಶೀರ್‌ನ ನ್ಯಾಶನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಆಫ್ಘಾನಿಸ್ತಾನ(NRFA) ಹೋರಾಡುತ್ತಿದೆ. ಇದೀಗ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರಿಂದ ಎದುರಾಗಿರುವ ಬಿಕ್ಕಟ್ಟಿನ ವಿರುದ್ಧ ತೀವ್ರ ಪ್ರತಿದಾಳಿ ನಡೆಸುತ್ತಿದೆ. ಈ ಹೋರಾಟದಲ್ಲಿ ಸಾವಿರಕ್ಕೂ ಹೆಚ್ಚು ತಾಲಿಬಾನ್ ಉಗ್ರರನ್ನು ಪಂಜಶೀರ್ ಕಮಾಂಡೋಗಳು ಹತ್ಯೆ ಮಾಡಿದ್ದಾರೆ.
ತಾಲಿಬಾನ್ ಹಾಗೂ ಪಂಜಶೀರ್ ಕಮಾಂಡೋ ಹೋರಾಟದಲ್ಲಿ NRFA ವಕ್ತಾರ ಫಾಹಿಮ್ ಡಾಶ್ಟಿ ಹತ್ಯೆಯಾಗಿದ್ದಾರೆ. ಇತ್ತ ಹಲವು ಕಮಾಂಡೋಗಳನ್ನು ತಾಲಿಬಾನ್ ಹಾಗೂ ಪಾಕಿಸ್ತಾನ ಸೇನೆ ಹತ್ಯೆ ಮಾಡಿದೆ ಎಂದು NRFA ಹೇಳಿದೆ.
