* ಕಾಬೂಲ್‌ನಲ್ಲಿ ಅಮೆರಿಕ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ, ಎಚ್ಚರಿಕೆ ಸಂದೇಶ* ಆ.31ರ ಬಳಿಕ ಇಂತಹ ದಾಳಿಯನ್ನು ಸಹಿಸುವುದಿಲ್ಲ
ಕಾಬೂಲ್(ಆ.31): ಕಾಬೂಲ್‌ನಲ್ಲಿ ಅಮೆರಿಕ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ, ಎಚ್ಚರಿಕೆ ಸಂದೇಶ ನೀಡಿರುವ ತಾಲಿಬಾನ್ ಆ.31ರ ಬಳಿಕ ಇಂತಹ ದಾಳಿಯನ್ನು ಸಹಿಸುವುದಿಲ್ಲ ಎಂದು ಹೇಳಿದೆ.
ಆ.31ರ ಬಳಿಕ ಅಷ್ಘಾನಿಸ್ತಾನದಲ್ಲಿ ದಾಳಿ ನಡೆಸುವ ಅಧಿಕಾರ ಅಮೆರಿಕಕ್ಕೆ ಇಲ್ಲ. ಆ ಬಳಿಕವೂ ದಾಳಿಗಳು ನಡೆದರೆ ತಾಲಿಬಾನ್ ನೇತೃತ್ವದ ಸರ್ಕಾರ ಅದನ್ನು ತಡೆಯಲಿದೆ ಎಂದು ತಾಲಿಬಾನಿಗಳ ರಾಜಕೀಯ ಕಚೇರಿಯ ವಕ್ತಾರನೊಬ್ಬ ಹೇಳಿಕೆ ನೀಡಿದ್ದಾನೆ.
ಅಷ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಸಮಯ ಹತ್ತಿರವಾಗಿರುವಾಗಲೇ ಈ ಹೇಳಿಕೆ ಹೊರಬಿದ್ದಿದೆ. ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿದ್ದ ಐಸಿಸ್- ಕೆ ಉಗ್ರರನ್ನು ಗುರಿಯಾಸಿಸಿಕೊಂಡು ಅಮೆರಿಕ ಭಾನುವಾರ ಡ್ರೋನ್ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 10 ಮಂದಿ ನಾಗರಿಕರು ಕೂಡ ಸಾವಿಗೀಡಾಗಿದ್ದರು.
