Asianet Suvarna News Asianet Suvarna News

ಪಂಜಶೀರ್ ಕಮಾಂಡರ್ ಜೊತೆ ತಜಕಿಸ್ತಾನಕ್ಕೆ ಹಾರಿದ ಆಫ್ಘಾನ್ ಹಂಗಾಮಿ ಅಧ್ಯಕ್ಷ ಸಲೇಹ್!

 • ಆಫ್ಘಾನಿಸ್ತಾನದಲ್ಲಿ ಹೆಚ್ಚಾಗುತ್ತಿದೆ ತಾಲಿಬಾನ್ ಕ್ರೌರ್ಯ
 • ಆಫ್ಘಾನಿಸ್ತಾನ ತೊರೆದ ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್ 
 • ಉಗ್ರರಿಂದ ಆಫ್ಘಾನಿಸ್ತಾನದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣ
 • ಹಸಿವು, ನಿದ್ದೆ ಇಲ್ಲದೆ ರಾತ್ರಿ ಕಳೆಯುತ್ತಿದ್ದಾರೆ ಆಫ್ಘಾನ್ ಜನತೆ
   
Afghanistan acting president Amrullah Saleh flees to Tajikistan amid Taliban threat ckm
Author
Bengaluru, First Published Sep 3, 2021, 8:43 PM IST
 • Facebook
 • Twitter
 • Whatsapp

ಕಾಬೂಲ್(ಸೆ.03): ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಕೌರ್ಯಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ. ಅಧಿಕಾರಿಗಳು ದೇಶ ತೊರೆದು ಸುರಕ್ಷಿತ ತಾಣಕ್ಕೆ ಪಲಾಯನ ಮಾಡುತ್ತಿದ್ದಾರೆ. ತಾಲಿಬಾನ್ ಉಗ್ರರು ಕಾಬೂಲ್ ಕೈವಶ ಮಾಡುತ್ತಿದ್ದಂತೆ ರಕ್ತಪಾತ ತಪ್ಪಿಸಲು ಆಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದಿಢೀರ್ ದೇಶ ತೊರೆದು ತಜಕಿಸ್ತಾನ ತೆರಳಿ ಬಳಿಕ ಅರಬ್ ರಾಷ್ಟ್ರದಲ್ಲಿ ನೆಲೆ ಕಂಡುಕೊಂಡರು. ಇದೀಗ ತಾಲಿಬಾನ್ ಸರ್ಕಾರ ರಚನೆ ಸರ್ಕಸ್ ನಡುವೆ ಆಫ್ಘಾನಿಸ್ತಾನ ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್ ಇದೀಗ ದೇಶ ತೊರೆದು ತಜಕಿಸ್ತಾನಕ್ಕೆ ಹಾರಿದ್ದಾರೆ.

ಪಾಕ್ ಸೂಚನೆ ಬೆನ್ನಲ್ಲೇ ವರಸೆ ಬದಲಿಸಿದ ತಾಲಿಬಾನ್: ಕಾಶ್ಮೀರ ಮುಸ್ಲಿಮರಿಗೆ ಉಗ್ರರ ಬೆಂಬಲ!

ಎರಡು ವಿಮಾನದಲ್ಲಿ ಪಂಜಶೀರ್ ಕಮಾಂಡೋಗಳ ಜೊತೆ ಅಮರುಲ್ಲಾ ಸಲೇಹ್ ತಜಕಿಸ್ತಾನಕ್ಕೆ ಹಾರಿದ್ದಾರೆ. ಸೆಪ್ಟೆಂಬರ್ 2 ರಾತ್ರಿ ಸಲೇಹ್ ಆಫ್ಘಾನಿಸ್ತಾನ ತೊರೆದಿದ್ದಾರೆ ಅನ್ನೋ ಮಾಹಿತಿಗಳು ಲಭ್ಯವಾಗಿದೆ. ಇಷ್ಟೇ ಅಲ್ಲ ಆಫ್ಘಾನ್ ನಾಗರೀಕರ ರಕ್ಷಣೆಗೆ ಪಂಜಶೀರ್ ಸಿದ್ಧವಿದೆ. ಆದರೆ ತಾಲಿಬಾನ್ ರಕ್ತಪಾತ ಹರಿಸುತ್ತಿದೆ ಎಂದು ಅಮರುಲ್ಲಾ ಸಲೇಹ್ ತಾಲಿಬಾನ್ ವಿರುದ್ಧ ಹರಿಹಾಯ್ದಿದ್ದಾರೆ.

 

ಆಫ್ಘಾನಿಸ್ತಾನ ತೊರೆದು ತಜಕಿಸ್ತಾನ ಹಾರಿದ ಮರುದಿನ ಅಂದರೆ ಇಂದು(ಸೆ.03)ರಂದು ಟ್ವೀಟ್ ಮೂಲಕ ತಾಲಿಬಾನ್ ವಿರುದ್ಧ ಗುಡುಗಿದ್ದಾರೆ. ಕಳೆದ 23 ವರ್ಷದಲ್ಲಿ ಆಫ್ಘಾನ್‌ನಲ್ಲಿ ತುರ್ತು ಆಸ್ಪತ್ರೆ ಆರಂಭವಾದ ಬಳಿಕ ಇದುವರೆಗೂ ತಾಲಿಬಾನ್‌ಗೆ ಪ್ರವೇಶ ನಿರಾಕರಿಸಿಲ್ಲ. ತಾಲಿಬಾನ್‌ಗಳು ಯುದ್ಧಕ್ಕೆ ಸನ್ನದ್ದರಾಗಿದ್ದಾರೆ. IHLಗೆ ಗೌರವ ನೀಡುತ್ತಿಲ್ಲ.  ತಾಲಿಬಾನ್‌ಗಳ ಕ್ರಿಮಿನಲ್ ಹಾಗೂ ಭಯೋತ್ಪಾದಕ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ವಿಶ್ವಸಂಸ್ಥೆ ಹಾಗೂ ವಿಶ್ವದ ನಾಯಕರಿಗೆ ಕರೆ ನೀಡುತ್ತೇನೆ ಎಂದು ಸಲೇಹ್ ಟ್ವೀಟ್ ಮಾಡಿದ್ದಾರೆ.

ನನ್ನನ್ನು ರಕ್ಷಿಸಿ: ಅಮೆರಿಕ ಅಧ್ಯಕ್ಷ ಬೈಡೆನ್‌ ರಕ್ಷಕನ ಆರ್ತನಾದ!

ಅಮರುಲ್ಲಾ ಸಲೇಹ್ ತಾಲಿಬಾನ್ ಒತ್ತಡ ಹಾಗೂ ಭೀತಿಯಿಂದ ತಜಕಿಸ್ತಾನಕ್ಕೆ ಹಾರಿದ್ದಾರೆ ಎಂದು ಪಂಜಶೀರ್ ಕಮಾಂಡೋ ಹೇಳಿದ್ದಾರೆ. ಪಂಜಶೀರ್ ಯೋಧರು ಆಫ್ಘಾನಿಸ್ತಾನದ ಜನರ ಹಕ್ಕು ರಕ್ಷಿಸಲಿದೆ. ತಾಲಿಬಾನ್ ಅಸಲಿ ಮುಖ  ಹೊರಬರುತ್ತಿದೆ ಎಂದು ಪಂಜಶೀರ್ ಕಮಾಂಡೋ ಹೇಳಿದ್ದಾರೆ.

Follow Us:
Download App:
 • android
 • ios