* ತಾಲಿಬಾನ್ ಆಡಳಿತವನ್ನುವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಅಫ್ಘಾನಿಸ್ತಾನ ಮಹಿಳೆ* ಪ್ರತಿಭಟನಾನಿರತ ಮಹಿಳೆಗೆ ತಾಲಿಬಾನ್ ತೀವ್ರ ಥಳಿತ
ಕಾಬೂಲ್(ಸೆ.05): ತಾಲಿಬಾನ್ ಆಡಳಿತವನ್ನುವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಅಷ್ಘಾನಿಸ್ತಾನ ಮಹಿಳೆಯೊಬ್ಬಳನ್ನು ತಾಲಿಬಾನಿಗಳು ಥಳಿಸಿದ್ದಾರೆ. ತಲೆಗೆ ಪೆಟ್ಟಾಗಿ ರಕ್ತ ಸೋರುತ್ತಿರುವ ಮಹಿಳೆಯ ವಿಡಿಯೋ ಟೊಲೋ ನ್ಯೂಸ್‌ನಲ್ಲಿ ಪ್ರಸಾರವಾಗಿದೆ.
ಮಹಿಳೆಯರಿಗೂ ಪ್ರಾತಿನಿಧ್ಯ ನೀಡಬೇಕು. ಸಮಾನತೆ ಬೇಕು ಎಂದು ಆಗ್ರಹಿಸಿ ಮಹಿಳೆಯರು ಕಾಬೂಲ್‌ನ ಅಧ್ಯಕ್ಷೀಯ ಅರಮನೆ ಸನಿಹ ಪ್ರತಿಭಟನೆ ನಡೆಸುತ್ತಿದ್ದರು. ಆಗ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನರ್ಗೀಸ್ ಸಾ¨ತ್ ಎಂಬ ಮಹಿಳೆಗೆ ತಾಲಿಬಾನಿಗಳು ಹೊಡೆದಿದ್ದಾರೆ.
ಅಲ್ಲದೆ, ಪ್ರತಿಭಟನಾಕಾರರನ್ನು ಚದುರಿಸಲು ಅಶ್ರವಾಯು ಮತ್ತು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯ ಸಮಯದಲ್ಲಿ ಪತ್ರಕರ್ತರಿಗೆ ಅಲ್ಲಿಂದ ದೂರ ಹೋಗುವಂತೆ ಆದೇಶ ನೀಡಲಾಗಿತ್ತು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
