ಇಸ್ಲಾಮಾಬಾದ್(ಡಿ.14): ಸಾಮಾನ್ಯ ಜನರು ತಮ್ಮ ಭವಿಷ್ಯದ ಉದ್ದೇಶದಿಂದ ಜೀವ ವಿಮೆ ಮಾಡಿಸುವುದು ಸಾಮಾನ್ಯ. ಆದರೆ, ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ನಾಯಕನಾಗಿದ್ದ ಮುಲ್ಲಾ ಅಖ್ತರ್ ಮನ್ಸೂನ್ ಸಾವಿಗೂ ಮುನ್ನ ಜೀವ ವಿಮೆ ಮಾಡಿಸಿದ್ದ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಮುಖ್ಯಸ್ಥನಾಗಿ 2015ರ ಜುಲೈನಲ್ಲಿ ಮುಲ್ಲಾ ಅಖ್ತರ್ ಮನ್ಸೂರ್ ನೇಮಕವಾಗಿದ್ದ. ಇದಾದ ಬಳಿಕ ಆತ ಮುನ್ನ ನಕಲಿ ಗುರುತಿನ ಚೀಟಿ ಬಳಸಿಕೊಂಡು ಪಾಕಿಸ್ತಾನದಲ್ಲಿ ಜೀವ ವಿಮೆಯೊಂದನ್ನು ಖರೀದಿಸಿದ್ದ. ಇದಕ್ಕಾಗಿ 3.50 ಲಕ್ಷ ರು. ಪ್ರೀಮಿಯಂ ಕೂಡಾ ಪಾವತಿಸಿದ್ದ. ಆದರೆ 2016ರ ಮೇ 21ರಂದು ಅಮೆರಿಕ ನಡೆಸಿದ ಡೊ್ರೀನ್ ದಾಳಿಯ ಲ್ಲಲಿ ಮನ್ಸೂರ್ ಹತನಾಗಿದ್ದ.

ಇಲ್ಲಿಯವರೆಗೂ ರಹಸ್ಯವಾಗಿಯೇ ಇದ್ದ ಈ ವಿಷಯ ಇದೀಗ, ಪಾಕಿಸ್ತಾನದಲ್ಲಿ ಉಗ್ರರಿಗೆ ಹಣ ನೀಡಿಕೆ ಪ್ರಕರಣವೊಂದರ ತನಿಖೆಯ ವೇಳೆ ವಿಮಾ ಕಂಪನಿ ಭಯೋತ್ಪಾದಕ ನಿಗ್ರಹ ನ್ಯಾಯಾಲಯಕ್ಕೆ ನೀಡಿದ ಮಾಹಿತಿ ಮೂಲಕ ಬೆಳ ಕಿಗೆ ಬಂದಿದೆ. ಅಲ್ಲದೇ ಪ್ರೀಮಿಯಂ ಸಮೇತ 3.50 ಲಕ್ಷ ರು. ಗಳನ್ನು ಹಿಂದಿರುಗಿಸಿದೆ.