ಗುರು ತೇಜ್‌ ಬಹದ್ದೂರ್‌ ಸಾಹಿಬ್‌ ಅವರ 400ನೇ ಜನ್ಮ ಜಯಂತಿ ಭಾರತಕ್ಕೆ ತೆರಳಲು ಬಯಸಿರುವ 140 ಆಫ್ಘನ್‌ ಸಿಖ್ಖರಿಗೆ ಅನುಮತಿ ನೀಡುವ ವಿಷಯದಲ್ಲಿ ಸಂಘಟನೆಯ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ

ಕಾಬೂಲ್‌(ಆ.31): ಗುರು ತೇಜ್‌ ಬಹದ್ದೂರ್‌ ಸಾಹಿಬ್‌ ಅವರ 400ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಭಾರತಕ್ಕೆ ತೆರಳಲು ಬಯಸಿರುವ 140 ಆಫ್ಘನ್‌ ಸಿಖ್ಖರಿಗೆ ಅನುಮತಿ ನೀಡುವ ವಿಷಯದಲ್ಲಿ ಸಂಘಟನೆಯ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ ಎಂದು ತಾಲಿಬಾನಿ ಉಗ್ರರು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ವಾರ ಈ ಸಿಖ್ಖರು, ವಿಮಾನ ಏರಲು ಹೊರಟಾಗ ಅವರನ್ನು ಉಗ್ರರು ಬೆದರಿಸಿ ಹಿಂದಕ್ಕೆ ಕಳಿಸಿದ್ದರು. ಬಳಿಕ ಅವರೆಲ್ಲಾ ಸ್ಥಳೀಯ ಗುರುದ್ವಾರವೊಂದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಅದಾದ ಬಳಿಕ ಸ್ಥಳೀಯ ಸಿಖ್‌ ಮುಖಂಡರು, ಸ್ಥಳೀಯ ತಾಲಿಬಾನಿಗಳಿಗೆ ಭಾರತಕ್ಕೆ ತೆರಳುವ ಉದ್ದೇಶದ ಬಗ್ಗೆ ಮಾಹಿತಿ ನೀಡಿದ್ದರು.

ಈ ವೇಳೆ ಕೇಂದ್ರ ನಾಯಕರೊಂದಿಗೆ ಮಾತನಾಡಿ ಮುಂದಿನ ದಿನಗಳಲ್ಲಿ ನಿರ್ಧಾರ ತಿಳಿಸುವುದಾಗಿ ಸ್ಥಳೀಯ ತಾಲಿಬಾನಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಬೂಲ್‌ನಲ್ಲಿ ಇದ್ದ ಆಫ್ಘನ್‌ ಸಿಖ್ಖರು ಇದೀಗ ತವರಾದ ಘಜ್ನಿ, ಜಲಾಲಾಬಾದ್‌ಗೆ ಮರಳಿದ್ದಾರೆ.