ತೈವಾನ್(ಸೆ.01): ಗಾಳಿಪಟವೊಂದು ಮೂರು ವರ್ಷದ ಪುಟ್ಟಮಗುವನ್ನು ಹಾರಿಸಿಕೊಂಡು ಹೋಗಿದೆ ಎಂದರೆ ನಂಬುತ್ತೀರಾ? ತೈವಾನ್‌ನಲ್ಲಿ ನಡೆದ ಗಾಳಿಪಟ ಉತ್ಸವದ ವೇಳೆ ಇಂಥದ್ದೊಂದು ಅಚ್ಚರಿಯ ಘಟನೆ ನಡೆದಿದೆ.

ಗಾಳಿಪಟ ಉತ್ಸವದಲ್ಲಿ ದೈತ್ಯ ಆಕಾರದ ಗಾಳಿಪಟಗಳನ್ನು ಹಾರಿಸಲಾಗುತ್ತಿತ್ತು. ಇದನ್ನು ನೋಡಲು ಹೋಗಿದ್ದ ಪುಟ್ಟಮಗು ಗಾಳಿಪಟದೊಂದಿಗೆ ಹಾರಿ ಹೋಗಿದ್ದಾಳೆ. ಜೋರಾಗಿ ಗಾಳಿ ಬೀಸುತ್ತಿದ್ದರಿಂದ ದೈತ್ಯಗಾಳಿಪಟ ಮಗುವನ್ನು 100 ಅಡಿ ಎತ್ತರಕ್ಕೆ ಹಾರಿಸಿಕೊಂಡು ಹೋಗಿದೆ.

"

ಕೊನೆಗೆ ಗಾಳಿಪಟವನ್ನು ನಿಯಂತ್ರಣಕ್ಕೆ ತಂದು ಮಗುವನ್ನು ಕೆಳಗೆ ಇಳಿಸಲಾಗಿದೆ. ಅದೃಷ್ಟವಶಾತ್‌ ಮಗು ಸಣ್ಣಪುಟ್ಟಗಾಯಗಳಿಂದ ಪಾರಾಗಿದೆ.