Asianet Suvarna News Asianet Suvarna News

ಟೆಕ್ ಜಗತ್ತಿನಲ್ಲಿ ಸಂಚಲನ: ಡ್ರಗ್ ಸೇವಿಸಿ ಸಿಲಿಕಾನ್ ವ್ಯಾಲಿಯ 8 ಸಿಇಒಗಳು ರಾಜೀನಾಮೆ!

ಸೈಕೆಡೆಲಿಕ್ಸ್ ಡ್ರಗ್ ಸೇವಿಸಿದ ನಂತರ, ಸಿಲಿಕಾನ್ ವ್ಯಾಲಿಯ 8 ಸಿಇಒಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ಡ್ರಗ್ ಸೇವಿಸಿದ ನಂತರ ಅವರು ತಮ್ಮ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ಕಂಡುಕೊಂಡಿದ್ದಾರೆ ಎಂದು ವರದಿಯಾಗಿದೆ.

8 Silicon Valley CEOs resigned after using Psychedelic drugs gow
Author
First Published Sep 24, 2024, 9:37 PM IST | Last Updated Sep 24, 2024, 9:51 PM IST

ವಿಚಿತ್ರ ಪ್ರಯೋಗಗಳು ಜಗತ್ತನ್ನು ಹಲವು ಬಾರಿ ಆಶ್ಚರ್ಯಗೊಳಿಸುತ್ತವೆ. ಟೆಕ್ ಜಗತ್ತಿನಲ್ಲಿ ಇಂತಹುದ್ದೇ ಒಂದು ಡ್ರಗ್ ಬೆಳಕಿಗೆ ಬಂದಿದ್ದು, ಇದನ್ನು ಸೇವಿಸಿದ ನಂತರ ಜಗತ್ತಿನ ಅಗ್ರ ಟೆಕ್ ಹುದ್ದೆಗಳಲ್ಲಿ ಕೆಲಸ ಮಾಡುವವರು ರಾಜೀನಾಮೆ ನೀಡುತ್ತಿದ್ದಾರೆ. 

ಈ ಡ್ರಗ್ ಸೇವಿಸಿದ ನಂತರ ಸಿಲಿಕಾನ್ ವ್ಯಾಲಿಯ 8 ಸಿಇಒಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ಎಲ್ಲಾ ಸಿಇಒಗಳು ಸೈಕೆಡೆಲಿಕ್ಸ್ ಸ್ವಯಂ-ಆವಿಷ್ಕಾರದಲ್ಲಿದ್ದರು ಮತ್ತು 100 ರಷ್ಟು ಜನರು ಒಂದು ವರ್ಷದೊಳಗೆ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದರು.

ಅಡುಗೆ ಎಣ್ಣೆಯಲ್ಲಿ ಅಡಗಿರುವ ಅಪಾಯ, ಈ ತಪ್ಪು ಮಾಡಿದ್ರೆ ಹಾರ್ಟ್ ಅಟ್ಯಾಕ್ ಪಕ್ಕಾ!

ಯಾವ ಡ್ರಗ್ಸ್ ತಗೊಂಡು ಸಿಇಒಗಳು ಹುದ್ದೆ ಬಿಡ್ತಿದ್ದಾರೆ?
ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಬ್ಲೂಮ್‌ಟೆಕ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಆಸ್ಟೆನ್ ಆಲ್ರೆಡ್, ಸಿಲಿಕಾನ್ ವ್ಯಾಲಿಯ 8 ಸಿಇಒಗಳು ಸೈಕೆಡೆಲಿಕ್ ಔಷಧಿಗಳೊಂದಿಗೆ ಪ್ರಯೋಗ ಮಾಡಿದ ನಂತರ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಆಲ್ರೆಡ್ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ. ಜಾಗತಿಕ ತಾಂತ್ರಿಕ ಕಂಪನಿಗಳ ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳು ಸೈಕೆಡೆಲಿಕ್ಸ್‌ನೊಂದಿಗಿನ ಅನುಭವಗಳ ನಂತರ ತಮ್ಮ ಕೆಲಸವನ್ನು ತೊರೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ತಾವು ತಿಳಿದಿರುವ ಸಿಲಿಕಾನ್ ವ್ಯಾಲಿಯ ಹಲವಾರು ಸಂಸ್ಥಾಪಕರು ಸೈಕೆಡೆಲಿಕ್ಸ್ ಸ್ವಯಂ-ಆವಿಷ್ಕಾರ ಪ್ರವಾಸಗಳಿಗೆ ಹೋಗಿದ್ದರು ಎಂದು ಆಲ್ರೆಡ್ ಹೇಳಿದ್ದಾರೆ. ಅವರಲ್ಲಿ ಶೇಕಡ 100 ರಷ್ಟು ಜನರು ಒಂದು ವರ್ಷದೊಳಗೆ ತಮ್ಮ ಕೆಲಸವನ್ನು ತೊರೆದಿದ್ದಾರೆ. ಇದು ಅಸಾಮಾನ್ಯವೆನಿಸಬಹುದು ಆದರೆ ಇದು ಸತ್ಯ ಎಂದು ಹೇಳಿದ್ದಾರೆ.

 ಬಿಗ್‌ಬಾಸ್ ಆರಂಭಕ್ಕೆ ಇನ್ನು ಕೇವಲ 5 ದಿನ, ರಾಜಾ-ರಾಣಿ ಶೋ ಮುಂಚೆಯೇ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್ ವೈರಲ್!

ಬಳಕೆದಾರರಾದ ಆಶ್ಲೇ ವ್ಯಾನ್ಸ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬ್ಲೂಮ್‌ಟೆಕ್ ಸಿಇಒ, ಸೈಲೋಸಿಬಿನ್ ಮತ್ತು DMT  ನಂತಹ  (ಅಣಬೆಯ ಅಮಲು)ಸೈಕೆಡೆಲಿಕ್ ಡ್ರಗ್‌ ನಿಂದ ನಾವು ಹಲವಾರು ಪ್ರತಿಭಾನ್ವಿತ ಸಂಸ್ಥಾಪಕರನ್ನು ಕಳೆದುಕೊಂಡಿದ್ದೇವೆ ಎಂದು ಒಬ್ಬ ವೆಂಚರ್ ಕ್ಯಾಪಿಟಲಿಸ್ಟ್ ತಮಗೆ ಹೇಳಿದ್ದಾಗಿ ಹೇಳಿದ್ದಾರೆ.

ಸೈಕೆಡೆಲಿಕ್ ಔಷಧಗಳನ್ನು ಪ್ರಯತ್ನಿಸಿದ ಜನರು ಆಳವಾದ ಆತ್ಮಾವಲೋಕನದ ಅನುಭವಗಳಿಗೆ ಕಾರಣವಾಗುವ ಪ್ರಜ್ಞೆಯ ಬದಲಾದ ಸ್ಥಿತಿಗಳತ್ತ ಹೋಗುತ್ತಾರೆ. ವಾಸ್ತವವಾಗಿ, ಸೈಕೆಡೆಲಿಕ್ಸ್ ಮನುಷ್ಯನ ಮಾನಸಿಕ ಸ್ಥಿತಿಯ ಮೇಲೆ ಭೀಕರ ಪ್ರಭಾವವನ್ನು ಬೀರಬಹುದು, ಕೆಲವು ಜನರು ಸೇವಿಸಿದ ನಂತರ ತಮ್ಮ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ಸಹ ಕಾಣುತ್ತಾರೆ. ಆದರೆ ಇದು ಅಟ್ಟೇ ಅಪಾಯಕಾರಿ ಕೂಡ. ಎಂಟು ಸಿಲಿಕಾನ್ ವ್ಯಾಲಿ ಸಿಇಒಗಳಂತೆ ಸೈಕೆಡೆಲಿಕ್ಸ್ ತೆಗೆದುಕೊಂಡ ನಂತರ ತಮ್ಮ ಕೆಲಸವನ್ನು ತೊರೆದರು.

ಸೈಕೆಡೆಲಿಕ್ ಡ್ರಗ್ ಅಂದ್ರೇನು?
ಸೈಕೆಡೆಲಿಕ್ ಔಷಧಿಗಳನ್ನು (Psychedelic drugs) ಆಧ್ಯಾತ್ಮಿಕ ಮತ್ತು ಚಿಕಿತ್ಸೆ ಉದ್ದೇಶಗಳಿಗಾಗಿ ವಿವಿಧ ಸಂಸ್ಕೃತಿಗಳಲ್ಲಿ ಶತಮಾನಗಳಿಂದ ಬಳಸಲಾಗಿದೆ. ಇತ್ತೀಚೆಗೆ ಈ ಡ್ರಗ್ ಅನ್ನು ಚಿಕಿತ್ಸಕ ಉದ್ದೇಶಗಳಿಗಾಗಿ, ವಿಶೇಷವಾಗಿ ಮಾನಸಿಕ ಆರೋಗ್ಯ ಮತ್ತು ಸ್ವಯಂ ಆವಿಷ್ಕಾರಕ್ಕಾಗಿ ಬಳಸಲಾಗುತ್ತಿದೆ. ಖಿನ್ನತೆ ಅಥವಾ ಇತರ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗೆ ಚಿಕಿತ್ಸೆ ನೀಡಲು ಈ ಔಷಧಿಗಳನ್ನು ಬಳಸಬಹುದು.

 

Latest Videos
Follow Us:
Download App:
  • android
  • ios