ಲಾಭ ಬಂದ್ರೆ ಸಾಕು ನನಗೆ ಉಳಿಯಲಿ ಅಂತ ಹೇಳುವ ಜನರ ಸಂಖ್ಯೆಯೇ ಹೆಚ್ಚು. ಇಲ್ಲೊಂದು ಕಂಪನಿ ತನ್ನ ಸಿಬ್ಬಂದಿಗೆ ಬರೋಬ್ಬರಿ ಎಂಟು ತಿಂಗಳ ಬೋನಸ್ ನೀಡಲು ಮುಂದಾಗಿದೆ.

ಸಿಂಗಾಪುರ ಏರ್‌ಲೈನ್ಸ್‌ ತನ್ನ ಸಿಬ್ಬಂದಿಗೆ ಎಂಟು ತಿಂಗಳ ಬೋನಸ್ ನೀಡಲು ನಿರ್ಧರಿಸಿದೆ. ಕಳೆದ ಹಣಕಾಸು ವರ್ಷಕ್ಕಿಂತ ಈ ವರ್ಷದದಲ್ಲಿ ಕಂಪನಿಯ ಲಾಭ ಶೇ.24ರಷ್ಟು ಏರಿಕೆಯಾಗಿ 16,5210 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಲಾಭದ ಪ್ರಮಾಣ ಹೆಚ್ಚಾಳದ ಸಂಭ್ರಮವನ್ನು ಹೆಚ್ಚುವರಿ ಬೋನಸ್ ನೀಡಿ ಸಿಬ್ಬಂದಿ ಜೊತೆ ಹಂಚಿಕೊಳ್ಳಲು ಕಂಪನಿ ನಿರ್ಧರಿಸಿದೆ. 

ಕಳೆದ ಆರ್ಥಿಕ ವರ್ಷದಲ್ಲಿ ಕಂಪನ 6.65 ತಿಂಗಳ ಬೋನಸ್ ನೀಡಿತ್ತು. ಈ ವರ್ಷ ಬೋನಸ್ ಪ್ರಮಾಣ ಏರಿಕೆಯಾಗಿದ್ದಕ್ಕೆ ಸಿಬ್ಬಂದಿ ಖುಷಿಯಾಗಿದ್ದಾರೆ.

ಕಂಪನಿಗೆ ಸಿಕ್ಕ ಲಾಭ ಎಷ್ಟು?

2023-24ನೇ ಹಣಕಾಸಿನ ವರ್ಷದಲ್ಲಿ ಸಿಂಗಪುರ ಏರ್‌ಲೈನ್ಸ್‌ $1.98 ಕೋಟಿ ನಿವ್ವಳ ಲಾಭವನ್ನು ದಾಖಲಿಸಿತ್ತು. ಈ ವರ್ಷ 31 ಮಾರ್ಚ್ 2024ರ ಅಂತ್ಯಕ್ಕೆ ಏರ್ಲಲೈನ್ಸ್ ಆದಾಯ ಶೇಕಡಾ 24ರಷ್ಟು ಏರಿಕೆಯಾಗಿ, $2.7 ಕೋಟಿಗೆ ಏರಿಕೆಯಾಗಿದೆ.

ಜಪಾನ್‌ನಲ್ಲಿ ಹೊಸ ನಿಯಮ, ವಿಚ್ಛೇದಿತ ಪೋಷಕರಿಗೆ ಜಂಟಿಯಾಗಿ ಮಕ್ಕಳ ಪಾಲನೆ ಮಾಡಲು ಅವಕಾಶ

ಕಂಪನಿಯ ಲಾಭಕ್ಕೆ ಕಾರಣಗಳೇನು?

ಕೋವಿಡ್ ಕಾಲಾನಂತರ ಚೀನಾ, ಹಾಂಗ್ ಕಾಂಗ್, ಜಪಾನ್ ಮತ್ತು ತೈವಾನ್ ದೇಶಗಳು ತಮ್ಮ ಅಂತರಾಷ್ಟ್ರೀಯ ಗಡಿಗಳನ್ನು ತೆರೆದ ನಂತರ ಬೇಡಿಕೆಗೆ ತಕ್ಕಂತೆ ಸಿಂಗಾಪುರ ಏರ್‌ಲೈನ್ಸ್ ಸೇವೆಯನ್ನು ನೀಡಿತ್ತು. ಈ ಸಮಯದಲ್ಲಿ ಕಂಪನಿಯ ಆದಾಯ ಶೇ.7ರಷ್ಟು ಏರಿಕೆಯಾಗ $19 ಬಿಲಿಯನ್‌ಗೆ ತಲುಪಿತ್ತು. ಪ್ರಯಾಣಿಕರಿಂದ ಬಂದ ಆದಾಯ ಶೇ.17.3ರಷ್ಟು ಏರಿಕೆಯಾಗಿ ಲಾಭ ತಂದುಕೊಟ್ಟಿತ್ತು.

ಇದು ಸಂಸ್ಥೆಯ ಲಾಭ ಹೆಚ್ಚಳಕ್ಕೆ ಕಾರಣವಾಗಿತ್ತು. ಕಡಿಮೆ ದರದ ಏರ್‌ಲೈನ್ ಸ್ಕೂಟ್‌ನ ಸಹಭಾಗಿತ್ವದಲ್ಲಿ, ಸೇವಾ ಸಿಂಗಾಪುರ್ ಏರ್‌ಲೈನ್ಸ್ ಕಳೆದ ವರ್ಷ 36.4 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಶ್ರೀಮಂತಿಕೆಯಲ್ಲಿ ಬ್ರಿಟನ್‌ ದೊರೆಯನ್ನು ಮೀರಿಸಿದ ಇನ್ಫಿ ನಾರಾಯಣ ಮೂರ್ತಿ ಮಗಳು, ಅಳಿಯ ರಿಷಿ ಸುನಕ್‌!

ದುಬೈ ಏರ್‌ಲೈನ್ಸ್‌ನಿಂದಲೂ ಸಿಬ್ಬಂದಿಗೆ ಬೋನಸ್

ಸಿಂಗಾಪುರ ಏರ್‌ಲೈನ್ಸ್ ಮಾತ್ರವಲ್ಲ ದುಬೈ ಎಮಿರೈಟ್ಸ್ ಏರ್‌ಲೈನ್ಸ್‌ ಸಹ ತನ್ನ ಸಿಬ್ಬಂದಿಗೆ ಉತ್ತಮ ಬೋನಸ್ ನೀಡುವ ಕಂಪನಿಯಾಗಿದೆ. ದುಬೈ ಎಮಿರೈಟ್ಸ್ ಏರ್‌ಲೈನ್ಸ್‌ ತನ್ನ ಲಾಭಕ್ಕನುಗುನವಾಗಿ ಸಿಬ್ಬಂದಿಗೆ 20 ವಾರಗಳ ಬೋನಸ್‌ ನೀಡಿದೆ.