* 7ನೇ ತರಗತಿಗೆ ಸೇರುವಂತಿಲ್ಲ: ತಾಲಿಬಾನ್* ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ಭರವಸೆ ಹುಸಿ* ‘ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಶಾಲೆಗಳು ಮುಚ್ಚಿರಲಿವೆ
ಕಾಬೂಲ್(ಮಾ.24): ಪ್ರಜಾಪ್ರಭುತ್ವ ಸರ್ಕಾರ(Democratic Government) ಪತನಗೊಳಿಸಿ ಅಧಿಕಾರಕ್ಕೆ ಬಂದ ವೇಳೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ(Girls Education) ಆದ್ಯತೆ ನೀಡುವುದಾಗಿ ಬಡಾಯಿ ಕೊಚ್ಚಿಕೊಂಡಿದ್ದ ತಾಲಿಬಾನಿಗಳ(Taliban) ಬಣ್ಣ ಬಯಲಾಗಿದೆ. ಸರ್ಕಾರದ ಹಿಂದಿನ ಶಕ್ತಿಯಾಗಿರುವ ಮತೀಯವಾದಿ ತಾಲಿಬಾನಿ ನಾಯಕರ ಒತ್ತಡಕ್ಕೆ ಬಲಿಯಾಗಿರುವ ಸರ್ಕಾರ, ಹೆಣ್ಣು ಮಕ್ಕಳಿಗೆ 6ನೇ ತರಗತಿ ನಂತರದ ಶಾಲೆಗಳನ್ನು(Schools) ತೆರೆಯದೆ ಇರಲು ನಿರ್ಧರಿಸಿದೆ.
ದೇಶದಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ ಲಕ್ಷಾಂತರ ಹೆಣ್ಣು ಮಕ್ಕಳು 7ನೇ ತರಗತಿಗೆ ತೆರಳಲು ಸಜ್ಜಾಗಿರುವ ಹೊತ್ತಿನಲ್ಲೇ ತಾಲಿಬಾನ್ ಸರ್ಕಾರ ದಿಢೀರನೆ ಇಂಥದ್ದೊಂದು ಆಘಾತಕಾರಿ ನಿರ್ಧಾರ ಪ್ರಕಟಿಸಿದೆ. ಇದು ಈಗಾಗಲೇ ಶಿಕ್ಷಣ, ಆರೋಗ್ಯ ಸೇರಿ ವಿವಿಧ ವಲಯಗಳಲ್ಲಿ ವಿದೇಶಿ ಅನುದಾನವನ್ನೇ ನೆಚ್ಚಿಕೊಂಡಿರುವ ದೇಶಕ್ಕೆ ಮತ್ತೊಂದು ದೊಡ್ಡ ಹೊಡೆತ ನೀಡಲಿದೆ ಎನ್ನಲಾಗಿದೆ. ತಾಲಿಬಾನಿಗಳ ಈ ನಿರ್ಧಾರದಿಂದಾಗಿ ವಿದೇಶಗಳು ಅಷ್ಘಾನಿಸ್ತಾನಕ್ಕೆ ನೀಡುತ್ತಿದ್ದ ನೆರವು ಕಡಿತಗೊಳಿಸುವ ಇಲ್ಲವೇ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಹೀಗಾದಲ್ಲಿ ಈಗಾಗಲೇ ನೆಲಕಚ್ಚಿರುವ ದೇಶದ ಶಿಕ್ಷಣ ವಲಯ ಮತ್ತಷ್ಟುಅಧಃಪತನಗೊಳ್ಳಲಿದೆ ಎಂಬ ಆತಂಕ ವ್ಯಕ್ತವಾಗಿದೆ.
Haqqani Network ಜಗತ್ತಿಗೆ ಮೊದಲ ಬಾರಿ ಮುಖ ತೋರಿಸಿದ ಸಿರಾಜುದ್ದೀನ್ ಹಕ್ಕಾನಿ, ಕುರಾನ್ ಓದಲು ಕಷ್ಟಪಟ್ಟ!
ವಾರದ ಹಿಂದಷ್ಟೇ ಹೇಳಿಕೆ ಬಿಡುಗಡೆ ಮಾಡಿದ್ದ ಶಿಕ್ಷಣ(Education) ಸಚಿವಾಲಯ, ಎಲ್ಲಾ ಮಕ್ಕಳಿಗೂ ಶಾಲೆಗೆ ಬರಲು ಸಿದ್ಧವಾಗಿರುವಂತೆ ಸೂಚಿಸಿತ್ತು. ಆದರೆ ಮಂಗಳವಾರ ಅದು ತನ್ನ ನಿರ್ಧಾರದಲ್ಲಿ ದಿಢೀರ್ ಬದಲಾವಣೆ ಮಾಡಿದೆ. ಈ ಕುರಿತು ಹೇಳಿಕೆ ನೀಡಿರುವ ತಾಲಿಬಾನ್ ಅಧಿಕಾರಿ ವಹೀದುಲ್ಲಾ ಹಾಶ್ಮಿ, ‘ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಶಾಲೆಗಳು ಮುಚ್ಚಿರಲಿವೆ. ಆದರೆ ಅವುಗಳನ್ನು ಶಾಶ್ವತವಾಗಿ ಮುಚ್ಚಲಾಗುತ್ತದೆ ಎಂದು ನಾವು ಹೇಳುತ್ತಿಲ್ಲ’ ಎಂದಿದ್ದಾರೆ.
ಜೊತೆಗೆ ‘ನಾವು ಕಟ್ಟಾ ಇಸ್ಲಾಮಿಕ್‌ವಾದಿಗಳಾದರೂ ಮಹಿಳೆಯರನ್ನು(Women) ಸಂಪೂರ್ಣವಾಗಿ ಶಿಕ್ಷಣದಿಂದ ವಂಚಿತರನ್ನಾಗಿಸಿಲ್ಲ. ಅವರನ್ನು ಕೆಲಸದಿಂದ ತೆಗೆದುಹಾಕಿಲ್ಲ. ಅರೋಗ್ಯ, ಶಿಕ್ಷಣ ಸಚಿವಾಲಯದಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಮೊದಲಿನಂತೆ ಮಹಿಳೆಯರು ಬುರ್ಖಾ ಧರಿಸುವುದನ್ನು ಕಡ್ಡಾಯಗೊಳಿಸಲಾಗಿಲ್ಲ. ಕೇವಲ ತಮ್ಮ ತಲೆಯ ಭಾಗವನ್ನು ಮುಚ್ಚಿಕೊಳ್ಳಲು ಹಿಜಾಬ್(Hijab) ಧರಿಸುವಂತೆ ತಿಳಿಸಲಾಗಿದೆ. ಆದರೆ ಆಪ್ಘನ್(Afghanistan) ಗ್ರಾಮೀಣ ಭಾಗದಲ್ಲಿ ಜನರೇ ತಮ್ಮ ಹೆಣ್ಣುಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಉನ್ನತ ಶಿಕ್ಷಣದ ವಿಚಾರವಾಗಿ ಮಹಿಳೆಯರಿಗೆ ಎಂದಿನಿಂದ ಶಾಲೆಗೆ ಮರಳಲು ತಿಳಿಸಬೇಕು ಎಂಬುದರ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ’ಎಂದರು.
ಆಫ್ಘನ್ ಉಗ್ರರಿಗೆ ಸಿಕ್ಕ ಉಪಗೃಹ ಫೋನ್‌ಗಳು ಕಾಶ್ಮೀರದಲ್ಲಿ ಪ್ರತ್ಯಕ್ಷ!
‘ತಾಲಿಬಾನ್ ಸರ್ಕಾರ(Government of Taliban) ತಿಳಿಸಿದಂತೆ ಇಸ್ಲಾಮಿಕ್(Islamic) ಉಡುಪುಗಳನ್ನು ಧರಿಸಲೂ ಹೆಣ್ಣುಮಕ್ಕಳು ಒಪ್ಪಿದ್ದರು. ಆದರೆ ಸರ್ಕಾರ ಉನ್ನತ ಶಿಕ್ಷಣವನ್ನು ನಿರ್ಬಂಧಿಸಿ ಮಾತಿನಿಂದ ಹಿಂದೆ ಸರಿದಿದೆ. ನಮಗೆ ಭರವಸೆ ನೀಡಿ ಮೋಸ ಮಾಡಿದ್ದಾರೆ’ ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮರಿಯಂ ನಹೀಬಿ ಕಿಡಿಕಾರಿದ್ದಾರೆ.
ಅಫ್ಘಾನಿಸ್ತಾನದ ಕೊನೆಯ ಹಣಕಾಸು ಸಚಿವ ಈಗ ಅಮೆರಿಕಾದಲ್ಲಿ ಉಬರ್ ಚಾಲಕ
ಅಪ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಿ ತಾಲಿಬಾನಿಗಳು ಅಧಿಕಾರ ವಹಿಸಿಕೊಂಡ ನಂತರ ನೂರಾರು ಮಂದಿ ಪ್ರಾಣ ಉಳಿಸಿಕೊಳ್ಳವುದಕ್ಕಾಗಿ ದೇಶ ತೊರೆದಿದ್ದರು. ಈಗ ಸಂಪೂರ್ಣ ಅರಾಜಕತೆ ದೇಶವನ್ನಾಳುತ್ತಿದ್ದು, ಅಫ್ಘಾನಿಸ್ತಾನದ ಕೊನೆಯ ಹಣಕಾಸು ಸಚಿವ ಖಾಲಿದ್ ಪಯೆಂಡಾ (Khalid Payenda)ಈಗ ಜೀವನೋಪಾಯಕ್ಕಾಗಿ ವಾಷಿಂಗ್ಟನ್ ಡಿಸಿಯಲ್ಲಿ (Washington DC) ಉಬರ್ ಕ್ಯಾಬ್ ಓಡಿಸುತ್ತಿದ್ದಾರೆ.
ಅಶ್ರಫ್ ಘನಿ ಸರ್ಕಾರದ ಕೊನೆಯ ಹಣಕಾಸು ಮಂತ್ರಿಯಾಗಿದ್ದ ಖಾಲಿದ್ ಪಯೆಂಡಾ ಅವರು, ವಾಷಿಂಗ್ಟನ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಹೆಂಡತಿ ಮತ್ತು ನಾಲ್ಕು ಮಕ್ಕಳ ಕುಟುಂಬವನ್ನು ಸಲಹಲು ಸಿಕ್ಕಿದ ಈ ಕೆಲಸಕ್ಕಾಗಿ ಕೃತಜ್ಞಳಾಗಿರುತ್ತೇನೆ ಎಂದು ಹೇಳಿದರು.
