ಬೀಜಿಂಗ್ (ಆ.  27)   ಗಡಿಯಲ್ಲಿ ಚೀನಾ ಕ್ಯಾತೆ ಮಾಡಿದ ಮೇಲೆ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಸಮರ ಸಾರಿದ್ದು ಚೀನಾಕ್ಕೆ ಅರಗಿಸಿಕೊಳ್ಳಲಾಗದ ಹೊಡೆತ ನೀಡಿದ್ದು ಗೊತ್ತೆ ಇದೆ. ಆದರೆ ಈಗ ಬಂದಿರುವ ಸುದ್ದಿ ಚೀನಾದಲ್ಲಿಯೂ ಮೋದಿ ಜನಪ್ರಿಯತೆಯುನ್ನು ಸಾರಿ ಹೇಳಿದೆ.

ಚೀನಾದಲ್ಲಿ ಸಹ ಹೆಚ್ಚಿನ ಸಂಖ್ಯೆಯ ಜನರು ಮೋದಿಯವರನ್ನು ಅನುಸರಿಸುತ್ತಾರೆ. ಲಡಾಖ್  ಹಿಂಸಾಚಾರದ ಮೂರು ತಿಂಗಳ ನಂತರ ಚೀನಾದ ಮೌತ್‌ಪೀಸ್ ಗ್ಲೋಬಲ್ ಟೈಮ್ಸ್ (ಚೈನೀಸ್ ಮೌತ್‌ಪೀಸ್, ಗ್ಲೋಬಲ್ ಟೈಮ್ಸ್) ನಡೆಸಿದ ಸಮೀಕ್ಷೆ ಹೊಸದೊಂದು ಅಂಶವನ್ನು ತೆರೆದಿಟ್ಟಿದೆ.

ಮೋದಿಗೆ ಹೊಸ ಹೆಸರು ಕೊಟ್ಟ ಕಂಗನಾ

 ಹೆಚ್ಚಿನ ಚೀನೀಯರು ತಮ್ಮ ನಾಯಕರಿಗಿಂತ ಪಿಎಂ ಮೋದಿಯವರ ಕಾರ್ಯವೈಖರಿಯ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ ಎಂದು ಸಮೀಕ್ಷೆ ಹೇಳಿದೆ.   ಶೇ. 50  ರಷ್ಟು ಜನ ಬೀಜಿಂಗ್  ಆಡಳಿತವನ್ನು ಪ್ರೀತಿ ಮಾಡಿದ್ದರೆ ಇನ್ನುಳಿದ ಶೇ. ಶೇ. 50  ಜನರು ಮೋದಿ ಅವರನ್ನು ಮೆಚ್ಚಿಕೊಂಡಿದ್ದಾರೆ. ಭಾರತದಲ್ಲಿ ಚೀನಾ ವಿರೋಧಿ ಭಾವನೆ  ಶೇಕಡಾ 70 ರಷ್ಟಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇನ್ನುಳಿದ ಶೇ. 30  ರಷ್ಟು  ಭಾರತೀಯರು ಎರಡು ದೇಶಗಳ ನಡುವಿನ ಸಂಬಂಧ ಸುಧಾರಿಸುತ್ತದೆ ಎಂದು ಭಾವಿಸಿದ್ದಾರೆ.

ಭಾರತದ ಇಪ್ಪತ್ತು ಸೈನಿಕರು ಗಡಿಯಲ್ಲಿ ವೀರ ಮರಣ ಅಪ್ಪಿದ ನಂತರ ಉಭಯ ದೇಶಗಳ ನಡುವೆ ತಿಕ್ಕಾಟ  ಜೋರಾಗಿಯೇ ನಡೆದಿತ್ತು.  ಚೀನಾದ ಹುವಾವೇ ಕಂಪನಿ ಭಾರತದಲ್ಲಿ ಜಾಹೀರಾತು ನೀಡುತ್ತ ನಾವು ಇಲ್ಲಿ ಬಹಳ ದೀರ್ಘ ಕಾಲದಿಂದ ನೆಲೆಯೂರಿದ್ದೇವೆ ಎಂಬುದನ್ನು ಸಾಬೀತು ಮಾಡಲು ಹೊರಟಿದೆ. 

ಕೊರೋನಾ ವೈರಸ್‌ಗೆ ಪಿತಾಮಹನಾಗಿರುವ ಚೀನಾಕ್ಕೆ ಇಡೀ ಪ್ರಪಂಚದಿಂದ ವಿರೋಧ ವ್ಯಕ್ತವಾಗಿದೆ. ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಅನೇಕ ರಾಷ್ಟ್ರಗಳು ಸದ್ದಿಲ್ಲದೆ ಚೀನಾದ ಕಂಪನಿ ಮತ್ತು ಅಪ್ಲಿಕೇಶನ್ ಗಳಿಗೆ ನಿಷೇಧ ಹಾಕಿವೆ.

ಭಾರತಕ್ಕೆ ಸವಾಲು ಒಡ್ಡಿದವರಿಗೆ ತಕ್ಕ ಪ್ರತ್ಯುತ್ತರ; ಚೀನಾಕ್ಕೆ ಮೋದಿ ವಾರ್ನಿಂಗ್!

"