ಅಮೆರಿಕದ ಇಂಡಿಯಾನಾಪೊಲೀಸ್‌ ನಗರದ ಫೆಡೆಕ್ಸ್‌ ಕೊರಿಯರ್‌ ಕೇಂದ್ರದ ಬಳಿ ಗುರುವಾರ ನಡೆದ ಗುಂಡಿನ ದಾಳಿ| ಮೃತಪಟ್ಟ8 ಜನರ ಪೈಕಿ ನಾಲ್ವರು ಭಾರತೀಯರು ಮತ್ತು ಸಿಖ್‌ ಸಮುದಾಯದವರು

ವಾಷಿಂಗ್ಟನ್(ಏ.18)‌: ಅಮೆರಿಕದ ಇಂಡಿಯಾನಾಪೊಲೀಸ್‌ ನಗರದ ಫೆಡೆಕ್ಸ್‌ ಕೊರಿಯರ್‌ ಕೇಂದ್ರದ ಬಳಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ8 ಜನರ ಪೈಕಿ ನಾಲ್ವರು ಭಾರತೀಯರು ಮತ್ತು ಸಿಖ್‌ ಸಮುದಾಯದವರು ಎಂದು ತಿಳಿದುಬಂದಿದೆ.

ಮೃತರನ್ನು ಅಮರ್‌ಜೀತ್‌ ಜೋಹಲ್‌ (66), ಜದ್ವಿಂದರ್‌ ಕೌರ್‌ (64), ಅಮರ್‌ಜಿತ್‌ ಸ್ಕೋನ್‌(48), ಜಸ್ವಿಂದರ್‌ ಸಿಂಗ್‌ (68) ಎಂದು ಗುರುತಿಸಲಾಗಿದೆ.

ಇದು ಆ.5, 2012ರ ನಂತರ ಅಮೆರಿಕದಲ್ಲಿ ನಡೆದ ಅತಿ ದೊಡ್ಡ ಸಿಖ್‌ ಹತ್ಯಾಕಾಂಡವಾಗಿದೆ. ಶೂಟೌಟ್‌ ನಡೆಸಿದ ದಾಳಿಕೋರ 19 ವರ್ಷದ ಬ್ರಾಂಡನ್‌ ಸ್ಕಾಟ್‌ ಹೋಲ್‌ ಎಂದು ಗುರುತಿಸಲಾಗಿದ್ದು, ಈತ ಗುರುವಾರವೇ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.