* ತಾಲಿಬಾನ್‌ ಉಗ್ರರ ಕೈಯ್ಯಲ್ಲಿ ಸಿಲುಕಿ ನರಳುತ್ತಿರುವ ಅಪ್ಘಾನಿಸ್ತಾನ* ಅಪ್ಘಾನಿಸ್ತಾನಕ್ಕೆ ಭೂಕಂಪದ ಪೆಟ್ಟು* ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯಲ್ಲಿ ಕಂಪಿಸಿದ ಭೂಮಿ

ಕಾಬೂಲ್(ಆ.19): ತಾಲಿಬಾನ್‌ ಉಗ್ರರ ಕೈಯ್ಯಲ್ಲಿ ಸಿಲುಕಿ ನರಳುತ್ತಿರುವ ಅಪ್ಘಾನಿಸ್ತಾನದಲ್ಲಿ ಭೂಕಂಪ ಸಂಭವಿಸಿದೆ. ಕಾಬೂಲ್‌ನ ಈಶಾನ್ಯ ಭಾಗದಿಂದ 122 ಕಿಮೀ ದೂರದಲ್ಲಿ ಬೆಳಗ್ಗೆ 11.22ರ ವೇಳೆಗೆ ಈ ಭೂಕಂಪ ಸಂಭವಿದೆ. ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ಎನ್‌ಸಿಎಸ್‌ ತಿಳಿಸಿದೆ.

ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ಈ ಬಗ್ಗೆ ಟ್ವೀಟ್ ಮಾಡಿದ್ದು, ಬೆಳಿಗ್ಗೆ 11.22ರ ವೇಳೆಗೆ ಭೂಮು ಕಂಪಿಸಿರುವ ಅನುಭವವಾಗಿದ್ದು, ಹಿಂದೂ ಕುಶ್ ಪ್ರದೇಶವು ಈ ಭೂಕಂಪನದ ಕೇಂದ್ರ ಬಿಂದುವಾಗಿದೆ. ಸುಮಾರು 92 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ. ಬೆಜಾರಕ್, ಜಬಲ್ ಸರಜ್ ಮತ್ತು ಚರಿಕರ್ ಸೇರಿದಂತೆ ಹಲವು ನಗರಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ಸಂಘರ್ಷ ಪೀಡಿತ ಅಫ್ಘಾನಿಸ್ತಾನದಲ್ಲಿ ಕಳೆದ ಎರಡು ದಿನಗಳ ಅಂತರದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ.

Scroll to load tweet…

ಭೂಕಂಪದಿಂದ ಯಾವುದೇ ಸಾವು-ನೋವು, ಹಾನಿಯುಂಟಾಗಿರುವ ಬಗ್ಗೆ ವರದಿಯಾಗಿಲ್ಲ. ಭೂಕಂಪನದ ಅನುಭವದಿಂದ ಅಲ್ಲಿನ ಜನರು ಕೆಲಕಾಲ ಆತಂಕಕ್ಕೊಳಗಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ಭೂಕಂಪದಂತಹ ನೈಸರ್ಗಿಕ ವಿಪತ್ತು ಸಾಮಾನ್ಯ. ಆದರೆ ಈಗಾಗಲೇ ತಾಲಿಬಾನಿಯರ ವಶದಲ್ಲಿ ನಲುಗುತ್ತಿರುವ ಇಲ್ಲಿನ ಜನತೆಗೆ ಇಂತಹ ಪ್ರಾಕೃತಿಕ ವಿಪತ್ತುಗಳು ಗಾಯದ ಮೇಲಿನ ಬರೆಯಂತಾಗಿವೆ.