Asianet Suvarna News Asianet Suvarna News

29 ಹಿಂದೂ ಮನೆಗಳಿಗೆ ಬೆಂಕಿ, ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಉದ್ವಿಘ್ನ!

  • ಬಾಂಗ್ಲಾದೇಶದಲ್ಲಿ ಹೆಚ್ಚಾದ ಕೋಮು ಗಲಭೆ, ಹಿಂಸಾಚಾರ
  • ದುರ್ಗಾ ಪೂಜೆ ವೇಳೆ ಮಂದಿರದ ಮೇಲೆ ದಾಳಿ ಹಲವರ ಹತ್ಯೆ
  • ನವರಾತ್ರಿ ಬಳಿಕ 29 ಹಿಂದೂ ವ್ಯಕ್ತಿಗಳ ಮನೆಗೆ ಬೆಂಕಿ
29 Hindu home in Bangladesh set on fire over an alleged blasphemous social media after durga Puja Violence ck
Author
Bengaluru, First Published Oct 18, 2021, 6:09 PM IST
  • Facebook
  • Twitter
  • Whatsapp

ಢಾಕಾ(ಅ.18): ಬಾಂಗ್ಲಾದೇಶದಲ್ಲಿ ಕೋಮು ಹಿಂಸಾಚಾರ ತಾರಕ್ಕೇರಿದೆ. ಹಿಂದೂಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲಾಗುತ್ತಿದೆ. ಹಿಂದೂಗಳ ಪೂಜಾ ಸ್ಥಳ, ಹಿಂದೂ ಕುಟುಂಬಗಳನ್ನೇ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ದುರ್ಗಾ ಪೂಜೆ ವೇಳೆ ನಡೆದ ಮಂದಿರದ ಮೇಲಿನ ದಾಳಿ ಹಾಗೂ ಹತ್ಯೆ ಬೆನ್ನಲ್ಲೇ ಇದೀಗ 29 ಹಿಂದೂ ಕುಟುಂಬಗಳ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಲಾಗಿದೆ.

ಬಾಂಗ್ಲಾದಲ್ಲಿ ಮತ್ತೆ ಕೋಮು ಗಲಭೆ, ಹಿಂದೂ ಸಮುದಾಯದ ಇಬ್ಬರು ಸಾವು, ಹಲವರ ಸ್ಥಿತಿ ಗಂಭೀರ!

ದುರ್ಗಾ ಪೂಜೆ ವೇಳೆ ಮಂದಿರದ ಹಾಗೂ ಹಿಂದೂ ಕುಟುಂಬದ ಮೇಲೆ ದಾಳಿ ವಿರೋಧಿಸಿ ಅಲ್ಪ ಸಂಖ್ಯಾತ ಸಮುದಾಯ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆ ವೇಳೆ ಪ್ರಚೋದನಕಾರಿ ಫೇಸ್‌ಬುಕ್ ಪೋಸ್ಟ್ ಹಾಕಲಾಗಿದೆ ಎಂದು ಆರೋಪಿಸಿ ದುರ್ಷರ್ಮಿಗಳ ತಂಡ ಪ್ರತಿಭಟನೆ ನಡೆಸಿದ ಹಿಂದೂ ಕುಟುಂಬದ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಲಾಗಿದೆ

ಢಾಕಾದಿಂದ 255 ಕಿ.ಮೀ ದೂರದಲ್ಲಿರುವ ಪುಟ್ಟ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ತಡರಾತ್ರಿ ಮನೆಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಲಾಗಿದೆ. 29 ಮನೆಗಳು ಬೆಂಕಿಯಲ್ಲಿ ಸುಟ್ಟು ಬೂದಿಯಾಗಿದೆ. ಈ ಹಳ್ಳಿಯ ಯುವಕ ಧರ್ಮ ನಿಂದನೆ ಮಾಡಿದ್ದಾನೆ ಅನ್ನೋವ ವದಂತಿ ಹಬ್ಬಿತ್ತು. ಇದರಿಂದ ಈ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದುರ್ಗಾ ಪೂಜೆ ಮೇಲೆ ದಾಳಿ; ಹಿಂದೂಗಳ ರಕ್ಷಿಸಲು ಬಾಂಗ್ಲಾ ಸರ್ಕಾರ ಆಗ್ರಹಿಸಿದ ವಿಶ್ವ ಹಿಂದೂ ಪರಿಷತ್!

ಮನೆ ಮೇಲೆ ದಾಳಿ ಮಾಡುತ್ತಿದ್ದಂತೆ ಮನೆಯಲ್ಲಿದ್ದವರೂ ಓಡಿ ಹೋಗಿದ್ದಾರೆ. ಹೀಗಾಗಿ ಯಾವುದೇ ಪ್ರಾಣ ಹಾನಿ ಘಟನೆ ವರದಿಯಾಗಿಲ್ಲ. ಸದ್ಯ ಘಟನಾ ಸ್ಥಳವನ್ನು ಪೊಲೀಸರು ಸುತ್ತುವರೆದಿದ್ದು, ತನಿಖೆ ನಡೆಯುತ್ತಿದೆ.

ದುರ್ಗಾ ಪೂಜೆ ವೇಳೆ ನಡೆದ ದಾಳಿಯಲ್ಲಿ ನಾಲ್ವರು ಹಿಂದೂಗಳು ಹತ್ಯೆಯಾಗಿದ್ದಾರೆ. ಈ ಘಟನೆ ಸಂಬಂಧಿಸಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದೂ ಮಂದಿರ ಹಾಗೂ ಹಿಂದೂಗಳ ಮೇಲಿನ ದಾಳಿಯನ್ನು ಭಾರತ ಖಂಡಿಸಿತ್ತು. ಅದರಲ್ಲೂ ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಬಾಂಗ್ಲಾದೇಶ ಸರ್ಕಾರವನ್ನು ಆಗ್ರಹಿಸಿತ್ತು.

ಬಾಂಗ್ಲಾ ಹಿಂದೂಗಳ ಮೇಲೆ ತಾಲಿಬಾನ್ ಟಾರ್ಗೆಟ್, ಹೆಚ್ಚಾಗ್ತಿದೆ ದಾಳಿ, ಆತಂಕದ ವಾತಾವರಣ

ಈ ಬೆಳವಣಿಗೆ ಬೆನ್ನಲ್ಲೇ ಮತ್ತೆ ಹಿಂದೂಗಳ ಗುರಿಯಾಗಿಸಿ ದಾಳಿ ನಡೆಯುತ್ತಿದೆ. ಇದೀಗ ಬಾಂಗ್ಲಾದೇಶದಲ್ಲಿರುವ ಅಲ್ಪ ಸಂಖ್ಯಾತರು ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ದುರ್ಗೂ ಪೂಜೆ ವೇಳೆ ದೇವಸ್ಥಾನದ ಮೇಲೆ ದಾಳಿ ಮಾಡಿದ ದುರ್ಷರ್ಮಿಗಳು, ಮೂರ್ತಿಗಳನ್ನು ಧ್ವಂಸಗೊಳಿಸಿದ್ದರು. ಅಡ್ಡಿಪಡಿಸಿದ ಇಬ್ಬರು ಹಿಂದೂಗಳನ್ನು ಹತ್ಯೆ ಮಾಡಲಾಗಿತ್ತು.

ಹಿಂದೂ ದೇವಸ್ಥಾನದಲ್ಲಿ  ಖುರಾನ್ ಪ್ರತಿ ಇಡಲಾಗಿತ್ತು. ಕಳೆದ ಒಂದು ವಾರದಿಂದ ಬಾಂಗ್ಲಾದೇಶದಲ್ಲಿ ಕೋಮು ಗಲಭೆ ತಾರಕಕ್ಕೇರಿದೆ. ಹಿಂದೂ ಮಂದಿರ ಹಾಗೂ ಹಿಂದೂಗಳ ಮೇಲಿನ ದಾಳಿಯನ್ನು ಬಾಂಗ್ಲಾ ಸರ್ಕಾರ ಖಂಡಿಸಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
 

Follow Us:
Download App:
  • android
  • ios