Asianet Suvarna News Asianet Suvarna News

ರಷ್ಯಾದ ಲಸಿಕೆಯಿಂದ ಅಡ್ಡ ಪರಿಣಾಮ, 7ರಲ್ಲಿ ಒಬ್ಬರಿಗೆ ಜ್ವರ!

ರಷ್ಯಾದ ಲಸಿಕೆಯಿಂದ ಅಡ್ಡ ಪರಿಣಾಮ| ಕೊರೋನಾ ಲಸಿಕೆ ಪಡೆದ 7ರಲ್ಲಿ ಒಬ್ಬರಿಗೆ ಜ್ವರ| ರಷ್ಯಾ ಜೊತೆ ಮಾತುಕತೆ: ಕೇಂದ್ರ

1 in 7 Russia covid vaccine volunteers report side effects says Russian Minister pod
Author
Bangalore, First Published Sep 19, 2020, 8:22 AM IST

ನವದೆಹಲಿ(ಸೆ.19): ಕೊರೋನಾ ವೈರಸ್‌ ತಡೆಗೆ ರಷ್ಯಾ ಬಿಡುಗಡೆ ಮಾಡಿರುವ ಲಸಿಕೆ ಸ್ಪುಟ್ನಿಕ್‌-5 ಬಗ್ಗೆ ಭಾರೀ ಅನುಮಾನಗಳ ಇರುವ ಹೊತ್ತಿನಲ್ಲೇ, ಲಸಿಕೆಯನ್ನು ಪಡೆದ 7ರಲ್ಲಿ ಒಬ್ಬರಿಗೆ ಜ್ವರ, ತಲೆನೋವು, ಮೈಕೈನೋವಿನಂತಹ ಅಡ್ಡ ಪರಿಣಾಮಗಳು ಕಂಡು ಬಂದಿವೆ.

ರಷ್ಯಾದಲ್ಲಿ 300 ಜನರ ಮೇಲೆ ಸ್ಪಟ್ನಿಕ್‌-5 ಲಸಿಕೆಯನ್ನು ಪ್ರಯೋಗಿಸಲಾಗಿದೆ. ಅವರಲ್ಲಿ ಶೇ.14ರಷ್ಟುಮಂದಿಗೆ 24 ಗಂಟೆಗಳ ಕಾಲ ಸಣ್ಣ ಪ್ರಮಾಣದ ಬಳಲಿಕೆ, ಮೈಕೈನೋವು, ದೇಹದ ಉಷ್ಣಾಂಶ ಏರಿಕೆಯಂತಹ ಅಡ್ಡ ಪರಿಣಾಮಗಳು ಕಂಡುಬಂದಿವೆ. ಇದನ್ನು ಮೊದಲೇ ನಿರೀಕ್ಷಿಸಲಾಗಿತ್ತು. ಲಸಿಕೆ ಪಡೆಯುವ ಮುನ್ನ ಈ ಬಗ್ಗೆ ಮಾಹಿತಿಯನ್ನೂ ನೀಡಲಾಗಿತ್ತು ಎಂದು ಎಂದು ರಷ್ಯಾ ಆರೋಗ್ಯ ಸಚಿವ ಮಿಖಾಯಿಲ್‌ ಮುರಾಷ್ಖೋ ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ರಷ್ಯಾ ಮೂರನೇ ಹಂತದ ಪ್ರಯೋಗವನ್ನು ದೊಡ್ಡ ಸಂಖ್ಯೆಯಲ್ಲಿ ಕೈಗೊಂಡಿಲ್ಲ. ಅದಕ್ಕೂ ಮೊದಲೇ ವಿಶ್ವದ ಮೊದಲ ಲಸಿಕೆ ಹೆಸರಲ್ಲಿ ಜಾಗತಿಕ ಮಟ್ಟದಲ್ಲಿ ಅದನ್ನು ಬಿಡುಗಡೆ ಮಾಡಲು ಹೊರಟಿದೆ. ಈ ವೇಳೆಯೇ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಡ್ಡಪರಿಣಾಮಗಳು ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ರಷ್ಯಾ ಜೊತೆ ಮಾತುಕತೆ: ಕೇಂದ್ರ

ನವದೆಹಲಿ: ರಷ್ಯಾ ಅಭಿವೃದ್ಧಪಡಿಸಿರುವ ಲಸಿಕೆಯನ್ನು ಭಾರತದಲ್ಲಿ ಪ್ರಯೋಗಿಸುವ ಮತ್ತು ಉತ್ಪಾದಿಸುವ ಕುರಿತು, ಆ ದೇಶದ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿಗೆ ಮಾಹಿತಿ ನೀಡಿದೆ. ಕೇಂದ್ರೀಯ ಔಷಧ ಗುಣಮಟ್ಟನಿಯಂತ್ರಣ ಪ್ರಾಧಿಕಾರಕ್ಕೆ ರಷ್ಯಾ ತನ್ನ ಕೊರೋನಾ ಲಸಿಕೆಯ ಮಾಹಿತಿಯನ್ನು ಒದಗಿಸಿದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

Follow Us:
Download App:
  • android
  • ios