ದೆಹಲಿಯ ಊಬರ್ ಕ್ಯಾಬ್ ಚಾಲಕರೊಬ್ಬರಿಗೆ ಇಸ್ಕಾನ್ ದೇವಸ್ಥಾನಕ್ಕೆ ರೈಡ್ ಬುಕ್ ಮಾಡಿದ ಗ್ರಾಹಕರೊಬ್ಬರು ಅಸಭ್ಯ ಆಫರ್ ನೀಡಿದ್ದಾರೆ. ಈ ಆಫರ್ ಅನ್ನು ನಿರಾಕರಿಸಿದ ನಂತರ ಗ್ರಾಹಕರು ರೈಡ್ ಅನ್ನು ರದ್ದುಗೊಳಿಸಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಕ್ಯಾಬ್ ಡ್ರೈವರ್‌ಗಳು ಯಾವ ರೀತಿಯ ವಿಚಿತ್ರ ಸನ್ನಿವೇಷವನ್ನು ಎದುರಿಸುತ್ತಾರೆ ಎನ್ನುವ ಹಲವು ಸುದ್ದಿಗಳು ಪ್ರಕಟವಾಗುತ್ತಲೇ ಇವೆ. ಇದೀಗ ದೆಹಲಿಯ ಗುರುಗ್ರಾಮದಲ್ಲಿ ಊಬರ್ ಕ್ಯಾಬ್ ಡ್ರೈವರ್ ಒಬ್ಬರು ಅನುಭವಿಸಿದ ವಿಚಿತ್ರ ಸನ್ನಿವೇಷವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಡೆಲ್ಲಿಯ ಕ್ಯಾಬ್ ಡ್ರೈವರ್‌ವೊಬ್ಬರಿಗೆ ಓರ್ವ ಕಸ್ಟಮರ್ ಇಸ್ಕಾನ್ ಟೆಂಪಲ್‌ಗೆ ಕಾರು ರೈಡ್ ಬುಕ್ ಮಾಡಿದ್ದರು. ಇದನ್ನು ಆ ಡ್ರೈವರ್ ವಿಡಿಯೋ ರೆಕಾರ್ಡ್ ಮೂಲಕ ತಮಗಾದ ಅನುಭವವನ್ನು ಲೈವ್ ಮೂಲಕ ಬಿಚ್ಚಿಟ್ಟಿದ್ದಾರೆ. ಈ ಘಟನೆಯ ಬಗ್ಗೆ ಮಾತನಾಡಿರುವ ಆ ಡ್ರೈವರ್, 'ಮೊದಲು ಈ ರೀತಿಯ ಘಟನೆಯಗಳು ಬೈಕ್ ರೈಡರ್, ರ್ಯಾಪಿಡೋ ಡ್ರೈವರ್‌ಗಳ ಜತೆ ಆಗುತ್ತಿತ್ತು. ಈಗ ನನ್ನಂತ ಕ್ಯಾಬ್ ರೈಡರ್ ಜತೆಗೂ ಆಗುತ್ತಿದೆ. ಇಲ್ಲಿ ನೋಡಿ ಇಸ್ಕಾನ್‌ಗೆ ರೈಡ್ ಮಾಡಿದ್ದಾರೆ.
ಸೆ*ಕ್ಸ್ ಆಫರ್ ಕೊಟ್ಟ ಕಸ್ಟಮರ್!
ಇಸ್ಕಾನ್ ಟೆಂಪಲ್‌ಗೆ ರೈಡ್ ಬುಕ್ ಮಾಡಿದ್ದಾರೆ. ಮೊದಲಿಗೆ ಕಸ್ಟಮರ್ ಹೆಲೋ ಬ್ರೋ ಎಂದು ರೈಡಿಂಗ್ ಅಪ್ಲಿಕೇಷನ್ ಮೂಲಕ ಮೆಸೇಜ್ ಕಳಿಸಿದ್ದಾರೆ. ಅದಕ್ಕೆ ನಾನು ಹಾಯ್ ಎಂದು ರಿಪ್ಲೆ ಮಾಡಿದ್ದೇನೆ. ಅದಕ್ಕೆ ಅವರು ಬ್ರೋ ಸೆ*ಕ್ಸ್ ಮಾಡುತ್ತೀರಾ ಎಂದು ಕೇಳಿದ್ದಾರೆ. ಇದಾದ ಬಳಿಕ ಸೆ*ಕ್ಸ್ ಮಾಡಲು ಇಂಟ್ರೆಸ್ಟ್ ಇದ್ದರೇ ನಿಮ್ಮ ವಾಟ್ಸ್ಅಪ್ ನಂಬರ್ ಕಳಿಸಿ ಎಂದು ಆ ಕಸ್ಟಮರ್ ಕೇಳಿದ್ದಾರೆ. ಈ ಆಫರ್ ಕೇಳಿ ಒಂದು ಕ್ಷಣ ಡ್ರೈವರ್ ಕಕ್ಕಾಬಿಕ್ಕಿಯಾಗಿದ್ದಾನೆ. ಇದಾದ ನಂತರ ಇಲ್ಲ ಎಂದು ಡ್ರೈವರ್ ರಿಪ್ಲೆ ಮಾಡಿದ್ದಾರೆ. ಇದಾದ ಬಳಿಕ ಆ ಕಸ್ಟಮರ್ ಓಕೆ ಸಾರಿ ಎಂದು ಮೆಸೇಜ್ ಮಾಡಿದ್ದಾರೆ. ಇದಾದ ಕೆಲವೇ ಸೆಕೆಂಡ್‌ಗಳಲ್ಲಿ ಆ ಕಸ್ಟಮರ್ ರೈಡ್ ಕ್ಯಾನ್ಸಲ್ ಮಾಡಿದ್ದಾರೆ. ಎಂತಹ ಕಲಿಯುಗವಪ್ಪಾ ಇದು. ಹುಷಾರಾಗಿರಿ ಎಂದು ಆ ಡ್ರೈವರ್ ಹೇಳಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೀಗಿತ್ತು ನೋಡಿ ಆ ವಿಡಿಯೋ:
disclaimer: ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿರುವ ವಿಡಿಯೋವಾಗಿದ್ದು, ಇದರ ಸತ್ಯಾಸತ್ಯೆಯ ಬಗ್ಗೆ ಖಚಿತ ಮಾಹಿತಿಯಿಲ್ಲ. ಈ ವಿಡಿಯೋ ನಿಜವೂ ಆಗಿರಬಹುದು ಅಥವಾ ರೀಲ್ಸ್‌ಗೋಸ್ಕರ ಅಥವಾ ರೀಲ್ಸ್ ವೈರಲ್ ಮಾಡುವ ಉದ್ದೇಶದಿಂದಲೂ ಆಗಿರಬಹುದು. ಹೀಗಾಗಿ ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ.


