ವಿಜಯನಗರದಲ್ಲಿ ಹೊಸ ಫ್ಲ್ಯಾಟ್‌ಗೆ ಬಂದ ಯುವತಿಯೊಬ್ಬರು, ಪಕ್ಕದ ನಿವೇಶನದಲ್ಲಿ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಈ ಘಟನೆಯನ್ನು ವಿಡಿಯೋ ಮಾಡಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿ: ಹೊಸ ಮನೆ ಆಥವಾ ಫ್ಲ್ಯಾಟ್‌ಗೆ ಹೋದಾಗ ಒಳ್ಳೆಯದಾಗುತ್ತೆ ಎಂಬ ನಂಬಿಕೆ ಇರುತ್ತದೆ. ಹೊಸಮನೆಗೆ ಬರುತ್ತಿದ್ದಂತೆ ಕಿಟಕಿ ತೆರೆದು ಹೊರಗೆ ಹೇಗೆ ಕಾಣಿಸುತ್ತೆ ಎಂದು ಕುತೂಹಲದಿಂದ ನೋಡುತ್ತಾರೆ. ಇದೇ ರೀತಿ ಹೊಸ ಫ್ಲ್ಯಾಟ್‌ಗೆ ಬಂದು ಕಿಟಕಿ ತೆರೆದ ಯುವತಿಗೆ ಭಯಾನಕ ಅನುಭವವಾಗಿದೆ. ಈ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ವೈರಲ್ ಆಗುತ್ತಿದೆ. ಈ ಘಟನೆ ದೆಹಲಿಯ ವಿಜಯನಗರ ಎಂಬಲ್ಲಿ ನಡೆದಿದೆ.
ದೆಹಲಿಯ ಯುವತಿಯೊಬ್ಬರಿಗೆ ಹೊಸ ಮನೆಗೆ ಕಾಲಿಟ್ಟ ಮೊದಲ ದಿನವೇ ಭಯಾನಕ ಮತ್ತು ಅಸಹ್ಯಕರ ಅನುಭವ ಎದುರಾಗಿದೆ. ಯುವತಿಯ ಫ್ಲ್ಯಾಟ್ ಪಕ್ಕದಲ್ಲಿರುವ ಖಾಲಿ ನಿವೇಶನದಲ್ಲಿ ಓರ್ವ ವ್ಯಕ್ತಿ ನಿಂತಿರೋದು ಕಾಣಿಸಿದೆ. ಆ ವ್ಯಕ್ತಿ ಯಾರಿಗೋ ಕಾಯುತ್ತಿರುವಂತೆ ಯುವತಿಗೆ ಕಾಣಿಸಿದೆ. ಆದ್ರೆ ಮುಂದೆ ಆತ ಮಾಡಿದ್ದನ್ನು ಕಂಡು ಯುವತಿ ಶಾಕ್ ಆಗಿದ್ದಾರೆ.
ಅಪರಿಚಿತ ವ್ಯಕ್ತಿ ಮಾಡಿದ್ದೇನು?
ಖಾಲಿ ನಿವೇಶನದಲ್ಲಿ ವ್ಯಕ್ತಿ ನಿಂತಿದ್ರೆ, ಪಕ್ಕದಲ್ಲಿಯೇ ಹುಡುಗಿಯ ಪಿಜಿ ಇದೆ. ಈ ಪಿಜಿಯಿಂದ ಹುಡುಗಿಯರು ಬರುತ್ತಿದ್ದಂತೆ, ಖಾಲಿ ನಿವೇಶನದಲ್ಲಿದ್ದ ವ್ಯಕ್ತಿ, ತನ್ನ ಪ್ಯಾಂಟ್ ಬಿಚ್ಚಿ ಹಸ್ತಮೈಥುನ ಮಾಡಿಕೊಂಡಿದ್ದಾನೆ. ನಂತರ ಅಲ್ಲೇ ಕುಳಿತುಕೊಳ್ಳುವ ವ್ಯಕ್ತಿ, ಮತ್ತೆ ಹುಡುಗಿಯರು ಬರೋವರೆಗೂ ಕಾಯುತ್ತಾನೆ. ಪಿಜಿಯಿಂದ ಹುಡುಗಿ ಬರುತ್ತಿದ್ದಂತೆ ಮತ್ತೆ ಹಸ್ತಮೈಥುನ ಮಾಡಿಕೊಂಡಿದ್ದಾನೆ.
ಇದನ್ನು ನೋಡಿ ಆಘಾತಗೊಂಡ ಯುವತಿಯರು ಮಹಿಳಾ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಅಲ್ಲಿಯ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಗೆ ಫೋನ್ ನಂಬರ್ ನೀಡಿದ್ದಾರೆ. ಪೊಲೀಸರು ಬರೋ ವೇಳೆಗೆ ಆ ವ್ಯಕ್ತಿ ಅಲ್ಲಿಂದ ಕಾಲ್ಕಿತ್ತಿದ್ದನು. ಮರುದಿನ ಮತ್ತೆ ಬಾಲ್ಕನಿಯಿಂದ ಯುವತಿ ನೀಡಿದಾಗ, ತಡಮಾಡದೇ ಪೊಲೀಸರಿಗೆ ಕರೆ ಮಾಡಿ ವ್ಯಕ್ತಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿಡಿಯೋ ವೈರಲ್
sa_rita_26 ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು, ವೈರಲ್ ಆಗುತ್ತಿದೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಇದು ದೆಹಲಿಯಲ್ಲಿ ನಿಮಗೆ ಸಿಗುವ ಸಾಮಾನ್ಯ ದೃಶ್ಯಗಳು. ಇದೊಂದು ಭಯಾನಕ ಮತ್ತು ಅಸಹ್ಯಕರ ಘಟನೆಯಾಗಿದೆ. ನನಗೂ ಮ್ಮೆ ಹೀಗೆ ಆಗಿದೆ, ತುಂಬಾ ಅಸಹ್ಯ ಅನಿಸುತ್ತೆ ಎಂದು ತಮಗಾದ ಅನುಭವವನ್ನು ಕಮೆಂಟ್ ರೂಪದಲ್ಲಿ ಹಂಚಿಕೊಂಡಿದ್ದಾರೆ.


