ವಿಜಯಪುರ[ಅ.21]: ವೀರಸಾವರ್ಕರ್  ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಸಿ ಟಿ ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಗರದಲ್ಲಿ ಮಾತನಾಡಿದ ಅವರು, ವೀರಸಾವರ್ಕರ್, ಸಿದ್ದಗಂಗಾ ಶ್ರೀ ವ್ಯಕ್ತಿತ್ವ ತುಲನೆ ಸರಿಯಲ್ಲ. ಇಬ್ಬರಿಗೂ ಭಾರತ ರತ್ನ ನೀಡುವುದರಿಂದ ಪ್ರಶಸ್ತಿಯ ಬೆಲೆ ಹೆಚ್ಚಲಿದೆ ಎಂದು ಹೇಳಿದ್ದಾರೆ.  ಸಿದ್ದರಾಮಯ್ಯ ತಿಹಾರ್ ಜೈಲಿಗೆ ಹೋಗಲಿ. ಕರಿ ನೀರಿನ ಶಿಕ್ಷೆಯನ್ನ ಹೇಗೆ ಕೊಟ್ಟಿದ್ದರು ಅನ್ನೋದನ್ನ ನೋಡಿದೆ ಮೇಲೆ ಸತ್ಯ ಗೊತ್ತಾಗುತ್ತೆ. ಟಿಪ್ಪು ಸುಲ್ತಾನ್ ವೈಭವಿಕರಿಸಿದವರಿಗೆ, ಸಾವರ್ಕರ್ ಹಿಂದೂ ಎನ್ತಿರೋದು ಅಚ್ಚರಿ ಮೂಡಿಸಿದೆ. ಟಿಪ್ಪು ವೈಭವಿಕರಿಸೊವಾಗ ಸಿದ್ದರಾಮಯ್ಯಗೆ ತತ್ವ ಸಿದ್ದಾಂತ ಅಡ್ಡಿ ಆಗಲ್ಲ. ಸಿದ್ದರಾಮಯ್ಯ ತನ್ನ ಹೆಸ್ರಲ್ಲಿ ಸಿದ್ಧ-ರಾಮ ಇಬ್ಬರು ಇದ್ದಾರೆ ಅಂತ ಡೈಲಾಗ್ ಹೊಡಿತಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈಗ ಹೀಗೆ ಮಾತಾಡ್ತಿದ್ದಾರೆ. ಸಿದ್ದರಾಮಯ್ಯ ಮಾತಿನ ಹಿಂದೆ ತಂತ್ರಗಾರಿಕೆ ಇದೆ. ಅಂದು ಅಂಬೇಡ್ಕರ್ ರಿಗೆ ಅಪಮಾನ ಇಂದು ಸಾವರ್ಕರ್ ರಿಗೆ ಅಪಮಾನ ಮಾಡಿದ್ದಾರೆ.  ಸಿದ್ದರಾಮಯ್ಯರಿಂದ  ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನವಾಗ್ತಿದೆ ಎಂದು ತಿಳಿಸಿದ್ದಾರೆ.