ಇಂಡಿ(ಅ.7): ತನ್ನ ತಂದೆ, ಪತ್ನಿಯ ನಡುವೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ ಪುತ್ರನೋರ್ವ ಅವರಿಬ್ಬರನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ವಿಜ​ಯ​ಪುರ ಜಿಲ್ಲೆಯ ಇಂಡಿ ತಾಲೂ​ಕಿನ ಖೇಡಗಿ ಕ್ರಾಸ್‌ ಬಳಿಯ ತೋಟ​ವೊಂದ​ರಲ್ಲಿ ಭಾನು​ವಾರ ನಡೆದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೊಲೆಯಾದವರನ್ನು ಇಂಡಿ ತಾಲೂ​ಕಿನ ಶಿರ​ಗೂರ ಗ್ರಾಮದ ಮಾಳಪ್ಪ ಧರ್ಮಣ್ಣ ಪೂಜಾರಿ (65), ರೇಣುಕಾ ಪುಟ್ಟಣ್ಣ ಪೂಜಾರಿ (35) ಎಂದು ಗುರುತಿಸಲಾಗಿದೆ. ಆರೋಪಿ ಪುಟ್ಟಣ್ಣ ಮಾಳಪ್ಪ ಪೂಜಾರಿ (40) ಪರಾ​ರಿ​ಯಾ​ಗಿ​ದ್ದಾನೆ. 

ಶಿವಪೂರ ಗ್ರಾಮದ ಶ್ರೀಶೈಲ ಸೊನ್ನ ಅವರ ಖೇಡಗಿ ಕ್ರಾಸ್‌​ದ​ಲ್ಲಿರುವ ತೋಟದಲ್ಲಿ ಕೂಲಿ ಕೆಲಸಕ್ಕೆಂದು ಐದಾರು ತಿಂಗಳ ಹಿಂದೆ ಬಂದು ಶೆಡ್‌ ಶೆಡ್‌ ಹಾಕಿ​ಕೊಂಡು ವಾಸಿಸುತ್ತಿದ್ದರು. ಮಗ ಪುಟ್ಟಣ್ಣ ತನ್ನ ತಂದೆ ಮತ್ತು ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಇದೆ ಶಂಕಿಸಿ, ಭಾನುವಾರ ಪತ್ನಿ ರೇಣುಕಾ ಹಾಗೂ ತಂದೆ ಮಾಳಪ್ಪನನ್ನು ಹರಿತವಾದ ಆಯುಧದಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.