Asianet Suvarna News Asianet Suvarna News

ಮುಂದುವರೆದ ರಷ್ಯಾ ರಣಾರ್ಭಟ... ಇಂದು 3ನೇ ಸಂಧಾನ ಸಭೆ

ಉಕ್ರೇನ್‌ ಮೇಲೆ ದಂಡೆತ್ತಿ ಹೋದ ರಷ್ಯಾ ಅಬ್ಬರ ಮುಂದುವರೆದಿದ್ದು 12ನೇ ದಿನವೂ ರಷ್ಯಾ ಮಾರಕ ದಾಳಿ ನಡೆಸುತ್ತಿದೆ. ಉಕ್ರೇನ್‌ನ ಬಹುತೇಕ ನಗರಗಳು ಸ್ಮಶಾನ ಸ್ವರೂಪವಾಗಿವೆ.

First Published Mar 7, 2022, 11:44 AM IST | Last Updated Mar 7, 2022, 11:50 AM IST

ಉಕ್ರೇನ್‌ ಮೇಲೆ ದಂಡೆತ್ತಿ ಹೋದ ರಷ್ಯಾ ಅಬ್ಬರ ಮುಂದುವರೆದಿದ್ದು 12ನೇ ದಿನವೂ ರಷ್ಯಾ ಮಾರಕ ದಾಳಿ ನಡೆಸುತ್ತಿದೆ. ಉಕ್ರೇನ್‌ನ ಬಹುತೇಕ ನಗರಗಳು ಸ್ಮಶಾನ ಸ್ವರೂಪವಾಗಿವೆ. ಘೋರ ಯುದ್ಧದ ನಡುವೆಯೂ ಇಂದು ಮೂರನೇ ಸಂಧಾನ ಸಭೆ ನಡೆಯುತ್ತಿದೆ. ಮೊದಲ ಎರಡು ಸಂಧಾನ ಸಭೆಗಳು ಈಗಾಗಲೇ ವಿಫಲವಾಗಿವೆ ರಷ್ಯಾ ರಣಾರ್ಭಟಕ್ಕೆ ಉಕ್ರೇನ್‌ ನಗರಗಳು ಸಂಪೂರ್ಣ ಧ್ವಂಸವಾಗಿದೆ. ಸತತ ಬಾಂಬ್ ಸ್ಫೋಟದಿಂದಾಗಿ ವಾತಾವರಣವೂ ಸಂಪೂರ್ಣ ಮಾಲಿನ್ಯವಾಗಿದ್ದು, ಶುದ್ಧ ಗಾಳಿ ಸಿಗುವುದು ಇಲ್ಲಿ ದುಸ್ತರವಾಗಿದೆ. ಇದರ ಮಧ್ಯೆ ಆಪರೇಷನ್‌ ಗಂಗಾ ಕೊನೆ ಹಂತದಲ್ಲಿದೆ. ಇಂದು 8 ವಿಮಾನದಲ್ಲಿ ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ಒಂದೂವರೆ ಸಾವಿರ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗಲಿದ್ದಾರೆ.