Asianet Suvarna News Asianet Suvarna News

ಪಾಕ್ ಸೈನಿಕರಿಗೆ ಸರ್ಕಾರ ಕೊಟ್ಟ ಸ್ಪೆಷಲ್ ಡ್ಯೂಟಿ! ಸೈನಿಕ ಗಡಿ ಕಾಯೋಲ್ಲ, ಕೋಳಿ-ಕತ್ತೆ ಕಾಯುಬೇಕು!

ಪಾಕ್ನಲ್ಲಿ ರಾತ್ರೋ-ರಾತ್ರಿ ಮಾಯವಾಗುತ್ತಿವೆ ಕೋಳಿಗಳು. ಪಾಕ್ ಸೈನಿಕರಿಗೆ ಸರ್ಕಾರ ಕೊಟ್ಟ ಸ್ಪೆಷಲ್ ಡ್ಯೂಟಿ. ಇಲ್ಲಿ ಸೈನಿಕ ಗಡಿ ಕಾಯೋಲ್ಲ. ಕೋಳಿ-ಕತ್ತೆ ಕಾಯುಬೇಕು. 

First Published Feb 12, 2023, 5:21 PM IST | Last Updated Feb 12, 2023, 5:21 PM IST

ಕೋಳಿ, ಕತ್ತೆ,ನಾಯಿ ಮಾಂಸಕ್ಕೆ ಪಾಕ್ನಲ್ಲಿ  ಫುಲ್ ಡಿಮ್ಯಾಂಡ್. ಪೈಸೆ-ಪೈಸೆಗೂ ಪರದಾಟ. ಕೋಳಿ. ಕತ್ತೆ. ನಾಯಿಗಳೇ ರಕ್ಷಕರು.  ಇದೇ ಪಾಕ್ನಲ್ಲಿ ಈಗ, ಹೊಸ ಬದಲಾವಣೆಯೊಂದು ಆಗಿದೆ. ಅದೇನೆಂದರೆ ಗಡಿಕಾಯೋ ಸೈನಿಕರಿಗೆ ಈಗ ಸ್ಪೆಷಲ್ ಡ್ಯೂಟಿ ಮಾಡೋದಕ್ಕೆ, ಪಾಕ್ ಸರ್ಕಾರ ಆರ್ಡರ್ ಮಾಡಿದೆ. ಅಷ್ಟಕ್ಕೂ ಆ ಡ್ಯೂಟಿ ಆದ್ರೂ ಏನು ಅಂತಿರಾ? ಪಾಕ್ನಲ್ಲಿ ರಾತ್ರೋ ರಾತ್ರಿ ಮಂಗಮಾಯವಾಗುತ್ತಿರೋ ಕೋಳಿ-ಕತ್ತೆಗಳನ್ನ ಕಾಯೋ ಕೆಲಸ. ಆರ್ಥಿಕವಾಗಿ ಕುಗ್ಗಿ ಹೋಗಿರುವ ಪಾಕ್, ಏನೇನ್ ಕೆಲಸ ಮಾಡ್ಬೇಕಾಗಿದೆ ನೋಡಿದ್ರಾ? ಇದೇ ಪಾಕ್ ಸ್ವಲ್ಪ ತಲೆ ಓಡಿಸಿದ್ದೇ ಆದಲ್ಲಿ, ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು. ಇಂದು ಪಾಕ್ ಖಜಾನೆ ಖಾಲಿ-ಖಾಲಿ ಆಗಿರಬಹುದು. ಆದರೆ ಇದೇ ಪಾಕ್ನ ಖಜಾನೆ ಒಂದೆರಡು ವರ್ಷದ ಹಿಂದೆ ತುಂಬಿ ತುಳುಕುತ್ತಿತ್ತು. ಅದಕ್ಕೆ ಕಾರಣ ಭಾರತ. ಅದ್ಹೇಗೆ ಅಂತಿರಾ ಇಲ್ಲಿದೆ ನೋಡಿ ಈ ಪ್ರಶ್ನೆಗೆ ಉತ್ತರ. ನೋಡಿದ್ರಲ್ಲಾ. ಪಾಕ್ ಇಂದು ಹೇಗೆ ಜಗತ್ತಿನ ಮುಂದೆ ಬೆತ್ತಲಾಗಿ ನಿಂತಿದೆ. ಯಾರೊಬ್ಬರೂ ಅಯ್ಯೋ ಪಾಪ, ಅಂತ ಕೂಡಾ ಹೇಳ್ತಿಲ್ಲ.  ಬಾಲ ಸುಟ್ಟ ಬೆಕ್ಕಿನಂತಾಗಿದೆ ಪಾಕ್. ಯಾರ್ಯಾರನ್ನ ಸ್ನೇಹಿತರು ಅಂತ ಅಂದುಕೊಂಡಿದ್ದರೋ ಅವರೆಲ್ಲ ಕೈ ಕೊಟ್ಟಿದ್ದಾಗಿದೆ. ಇದರ ಪರಿಣಾಮ ಪಾಕ್ನಲ್ಲಿ ಈಗ ನರಕವೇ ಸೃಷ್ಟಿಯಾಗಿ ಬಿಟ್ಟಿದೆ.